ಕೇಂದ್ರ ಸರ್ಕಾರ ಗುರುವಾರ ಸಂಜೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಿದೆ. 69ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ಪೈಕಿ ಸೂಪರ್ ಹಿಟ್ ದಿ ಕಾಶ್ಮಿರ್ ಫೈಲ್ಸ್ ಸಿನಿಮಾ ರಾಷ್ಟ್ರೀಯ ಏಕೀಕರಣದ ಕುರಿತಾದ ಸಿನಿಮಾ ಎಂದು ಗುರುತಿಸಿಕೊಂಡು ಪ್ರತಿಷ್ಠಿತ ನರ್ಗೀಸ್ ದತ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಪ್ರಶಸ್ತಿ ಘೋಷಣೆಯಾದ ಬಳಿಕ ಹಿರಿಯ ನಟ ಅನುಪಮ್ ಖೇರ್ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದರು.
ಚಿತ್ರಕ್ಕೆ ಸಂಬಂಧಿಸಿದ ಕೆಲ ಫೋಟೋಗಳನ್ನು ಶೇರ್ ಮಾಡಿರುವ ಅವರು, ''ನಮ್ಮ ಸಿನಿಮಾ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದು, ಹೆಮ್ಮೆಯಾಗುತ್ತಿದೆ ಮತ್ತು ಅತ್ಯಂತ ಸಂತಸದ ಕ್ಷಣ. ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಲನಚಿತ್ರಕ್ಕಾಗಿ ಪ್ರತಿಷ್ಠಿತ ನರ್ಗೀಸ್ ದತ್ ಪ್ರಶಸ್ತಿ ಗೆದ್ದಿರುವುದಕ್ಕೆ ಹೆಮ್ಮೆಯಿದೆ. ನಮ್ಮ ಚಿತ್ರಕ್ಕೆ ಪ್ರಶಸ್ತಿ ಬಂದಿರುವುದಕ್ಕೆ ನಟನಾಗಿ ಮಾತ್ರವಲ್ಲದೇ ಚಿತ್ರದ ಕಾರ್ಯಕಾರಿ ನಿರ್ಮಾಪಕನಾಗಿಯೂ ಬಹಳ ಸಂತೋಷವಾಗುತ್ತಿದೆ ಎಂದು ತಿಳಿಸಿದರು.
ಜೊತೆಗೆ, ನನ್ನ ನಟನೆಗಾಗಿ ಪ್ರಶಸ್ತಿ ಗೆಲ್ಲಲು ಸಹ ಇಷ್ಟಪಡುತ್ತೇನೆ. ನಮ್ಮ ಇಷ್ಟಾರ್ಥಗಳು ಈಡೇರಿದರೆ ಮುಂದೆ ಕೆಲಸ ಮಾಡಲು ಉತ್ಸಾಹ ಬರುತ್ತದೆ ಎಂದು ತಿಳಿಸಿದ ನಟ, ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ವಿಜೇತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ.
-
NATIONAL AWARD: Delighted and proud that #TheKashmirFiles won the prestigious and most important #NationalAward - Nargis Dutt award for #BestFeatureFilm on national integration. Not only as an actor but also being an executive producer on the film I am so happy for this… pic.twitter.com/Sdka6EOJoV
— Anupam Kher (@AnupamPKher) August 24, 2023 " class="align-text-top noRightClick twitterSection" data="
">NATIONAL AWARD: Delighted and proud that #TheKashmirFiles won the prestigious and most important #NationalAward - Nargis Dutt award for #BestFeatureFilm on national integration. Not only as an actor but also being an executive producer on the film I am so happy for this… pic.twitter.com/Sdka6EOJoV
— Anupam Kher (@AnupamPKher) August 24, 2023NATIONAL AWARD: Delighted and proud that #TheKashmirFiles won the prestigious and most important #NationalAward - Nargis Dutt award for #BestFeatureFilm on national integration. Not only as an actor but also being an executive producer on the film I am so happy for this… pic.twitter.com/Sdka6EOJoV
— Anupam Kher (@AnupamPKher) August 24, 2023
ದಿ ಕಾಶ್ಮೀರ್ ಫೈಲ್ಸ್ ಕಥೆ 1990 ರ ದಶಕದಲ್ಲಿ ಕಾಶ್ಮೀರದಿಂದ ಕಾಶ್ಮೀರಿ ಹಿಂದೂಗಳ ನಿರ್ಗಮನದ ಮೇಲೆ ಕೇಂದ್ರೀಕರಿಸಿದೆ. ಸಿನಿಮಾ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿ, ಬಾಕ್ಸ್ ಆಫೀಸ್ನಲ್ಲಿ ಸಖತ್ ಸದ್ದು ಮಾಡಿತು.
ಇದನ್ನೂ ಓದಿ: ಪತ್ನಿ, ಮಕ್ಕಳೊಂದಿಗೆ ಸಂಭ್ರಮಿಸಿದ 'ಅತ್ಯುತ್ತಮ ನಟ' ಅಲ್ಲು ಅರ್ಜುನ್; ಮಹೇಶ್ ಬಾಬುಗೆ ಸಿಕ್ತು ಪುಷ್ಪ ಆಫರ್!
ಉಳಿದಂತೆ ಹಲವು ವಿಭಾಗಗಳಲ್ಲಿ ಹಲವು ಸಿನಿಮಾಗಳು ಪ್ರಶಸ್ತಿ ಪಡೆಯಲಿದೆ. ಸರ್ದಾರ್ ಉಧಮ್ ಸಿನಿಮಾಗೆ ಅತ್ಯುತ್ತಮ ಹಿಂದಿ ಚಿತ್ರ, ಚೆಲ್ಲೋ ಶೋ ಸಿನಿಮಾಗೆ ಅತ್ಯುತ್ತಮ ಗುಜರಾತಿ ಚಿತ್ರ ಪ್ರಶಸ್ತಿ, 777 ಚಾರ್ಲಿ ಸಿನಿಮಾಗೆ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ, ಆರ್ಆರ್ಆರ್ ಸಿನಿಮಾಗೆ ಅತ್ಯುತ್ತಮ ಸಾಹಸ ನಿರ್ದೇಶನ ಪ್ರಶಸ್ತಿ, ಅತ್ಯುತ್ತಮ ನೃತ್ಯ ನಿರ್ದೇಶನ ಪ್ರಶಸ್ತಿಮ ರಾಕೆಟ್ರಿ: ದಿ ನಂಬಿ ಎಫೆಕ್ಟ್ ಸಿನಿಮಾಗೆ ಅತ್ಯುತ್ತಮ ಫೀಚರ್ ಚಲನಚಿತ್ರ ಪ್ರಶಸ್ತಿ ಹೀಗೆ ಹಲವು ಸಿನಿಮಾಗಳು ರಾಷ್ಟರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಅಲ್ಲು ಅರ್ಜುನ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ, ಕೃತಿ ಸನೋನ್ ಮತ್ತು ಆಲಿಯಾ ಭಟ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಗೌರವ ಸಂದಿದೆ.
ಇದನ್ನೂ ಓದಿ: 'ನನ್ನ ಬೆಳವಣಿಗೆಯಲ್ಲಿ ಮಾಧ್ಯಮದವರ ಪಾಲು ಸಾಕಷ್ಟಿದೆ': ಕ್ಷಮೆ ಕೋರಿದ ಚಾಲೆಂಜಿಂಗ್ ಸ್ಟಾರ್ ದರ್ಶನ್