ETV Bharat / entertainment

ಅನಿಮಲ್ vs ಸ್ಯಾಮ್ ಬಹದ್ದೂರ್: ಗದರ್ 2 vs ಓಎಂಜಿ 2 ಪರಿಸ್ಥಿತಿ ಮರುಕಳಿಸುತ್ತಾ?! - Animal

Animal vs Sam Bahadur: ವಿಕ್ಕಿ ಕೌಶಲ್​ ನಟನೆಯ ಸ್ಯಾಮ್​ ಬಹದ್ದೂರ್ ಮತ್ತು ರಣ್​ಬೀರ್​ ಕಪೂರ್ ಅಭಿನಯದ ಅನಿಮಲ್​​ ಸಿನಿಮಾಗಳೆರಡೂ ಒಂದೇ ದಿನ ಬಿಡುಗಡೆ ಆಗಲಿದ್ದು, ಬಾಕ್ಸ್ ಆಫೀಸ್​ ಘರ್ಷಣೆ ಖಚಿತ.

Animal vs Sam Bahadur
ಅನಿಮಲ್ vs ಸ್ಯಾಮ್ ಬಹದ್ದೂರ್
author img

By ETV Bharat Karnataka Team

Published : Nov 26, 2023, 2:43 PM IST

Updated : Nov 26, 2023, 3:15 PM IST

ಬಾಲಿವುಡ್​ನ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ವಿಕ್ಕಿ ಕೌಶಲ್​ ನಟನೆಯ ಸ್ಯಾಮ್​ ಬಹದ್ದೂರ್, ರಣ್​ಬೀರ್​ ಕಪೂರ್ ಅಭಿನಯದ ಅನಿಮಲ್​​ ಸಿನಿಮಾಗಳೆರಡೂ ಡಿಸೆಂಬರ್​​ 1ರಂದು ತೆರೆಕಾಣಲಿದ್ದು, ಬಾಕ್ಸ್ ಆಫೀಸ್ ಪೈಪೋಟಿ ಖಚಿತ. ಕೆಲ ದಿನಗಳ ಹಿಂದಷ್ಟೇ ಬಾಲಿವುಡ್​ನಲ್ಲಿ ಇದೇ ಪರಿಸ್ಥಿತಿ ಉದ್ಭವಿಸಿತ್ತು.

ಸನ್ನಿ ಡಿಯೋಲ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಗದರ್ 2 ಮತ್ತು ಅಕ್ಷಯ್ ಕುಮಾರ್ ಅಭಿನಯದ ಓ ಮೈ ಗಾಡ್​ 2 ಸಿನಿಮಾ ಆಗಸ್ಟ್ 11 ರಂದು ಏಕಕಾಲದಲ್ಲಿ ಬಿಡುಗಡೆ ಆಯಿತು. ಎರಡೂ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಒಂದೇ ದಿನ ತೆರೆಕಂಡು ಅದ್ಭುತ ಪ್ರದರ್ಶನ ನೀಡಿತು. ಎರಡೂ ಚಿತ್ರಗಳ ಗಳಿಕೆ ಉತ್ತಮವಾಗೇ ಇದೆ. ಆದ್ರೆ ಗದರ್​ 2 ಕಲೆಕ್ಷನ್​ ಅಂಕಿ ಅಂಶ ಎಲ್ಲರ ಹುಬ್ಬೇರಿಸಿತ್ತು. ಇದೀಗ ಸ್ಯಾಮ್ ಬಹದ್ದೂರ್ ಮತ್ತು ಅನಿಮಲ್​ ಸಿನಿಮಾಗಳ ಬಾಕ್ಸ್​ ಆಫೀಸ್​ ಘರ್ಷಣೆ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

ಗದರ್ 2 ಮತ್ತು ಓ ಮೈ ಗಾಡ್​ 2 ಸಿನಿಮಾಗಳ ನಡುವಿನ ಘರ್ಷಣೆ ಬಾಲಿವುಡ್​ನಲ್ಲಿ ದಾಖಲೆಗಳನ್ನು ನಿರ್ಮಿಸಿತ್ತು. ಶಾರುಖ್ ಖಾನ್ ಅವರ ಜವಾನ್ ಬಳಿಕ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಸಿನಿಮಾವಾಗಿ ಗದರ್​ 2 ಹೊರಹೊಮ್ಮಿತ್ತು. ಬಿಗ್​ ಫೈಟ್​​ ಹೊರತಾಗಿಯೂ, ಅಕ್ಷಯ್ ಕುಮಾರ್ ನಟನೆಯ ಓಎಂಜಿ 2 ಕೂಡ ಉತ್ತಮ ಪ್ರದರ್ಶನ ಕಂಡು ಹಿಟ್ ಆಗಿತ್ತು.

ರಣ್​​​ಬೀರ್ ಕಪೂರ್ ಮುಖ್ಯಭೂಮಿಕೆಯ ಅನಿಮಲ್ ಮತ್ತು ವಿಕ್ಕಿ ಕೌಶಲ್ ನಟನೆಯ ಸ್ಯಾಮ್ ಬಹದ್ದೂರ್ ಸೇರಿ ಎರಡು ಬಹುನಿರೀಕ್ಷಿತ ಬಾಲಿವುಡ್​ ಸಿನಿಮಾಗಳು ಒಂದೇ ದಿನ ತೆರೆಗಪ್ಪಳಿಸುವ ಮೂಲಕ ಬಾಲಿವುಡ್​​ನಲ್ಲಿ ಮತ್ತೊಮ್ಮೆ ಅದೇ ಸನ್ನಿವೇಶ ಮರುಕಳಿಸಲಿದೆ. ಹೌದು, ಇವೆರಡೂ ಚಿತ್ರಗಳು ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ. ಆರಂಭಿಕ ಅಂದಾಜಿನ ಪ್ರಕಾರ, ಎರಡೂ ಚಿತ್ರಗಳು ಉತ್ತಮ ಪ್ರದರ್ಶನ ಕಾಣಲಿವೆ.

ಇದನ್ನೂ ಓದಿ: ತಮನ್ನಾ ಭಾಟಿಯಾ ಗೆಳೆಯನಿಗೆ ಎದುರಾದ ಮದುವೆ ಪ್ರಶ್ನೆ: ವಿಜಯ್​ ವರ್ಮಾ ಉತ್ತರವೇನು?

ಎರಡೂ ಸಿನಿಮಾಗಳ ಮುಂಗಡ ಟಿಕೆಟ್​ ಬುಕಿಂಗ್​ ಪ್ರಕ್ರಿಯೆ ಶುರುವಾಗಿದೆ. ಅನಿಮಲ್ ಸಿನಿಮಾ ಗದರ್ 2ರ ಮತ್ತು ಸ್ಯಾಮ್ ಬಹದ್ದೂರ್ ಸಿನಿಮಾ ಓಎಂಜಿ 2ರ ಮಾರ್ಗವನ್ನು ಅನುಸರಿಸುವಂತೆ ತೋರುತ್ತಿದೆ. ಅನಿಮಲ್ ಕ್ರೇಜ್​ ಗಮನಿಸಿದ್ರೆ ಕಲೆಕ್ಷನ್​ ಗದರ್​ 2ರಷ್ಟಾಗದಿದ್ದರೂ 400 ಕೋಟಿ ರೂಪಾಯಿ ಸಮೀಪಿಸಬಹುದು ಎಂದು ಅಂದಾಜಿಸಲಾಗಿದೆ. ಸ್ಯಾಮ್ ಬಹದ್ದೂರ್ ಸಿನಿಮಾ ಓಎಂಜಿ 2ರ ಅಂಕಿಅಂಶಗಳನ್ನು ಮೀರಿಸುವಂತೆ ತೋರುತ್ತಿದೆ.

ಇದನ್ನೂ ಓದಿ: ಪಂಜಾಬಿ ಗಾಯಕ ಗಿಪ್ಪಿ ಗ್ರೆವಾಲ್ ಬಂಗಲೆ ಮೇಲೆ ಗುಂಡಿನ ದಾಳಿ: ಸಲ್ಮಾನ್​ ಖಾನ್‌ಗೆ ಲಾರೆನ್ಸ್ ಬಿಷ್ಣೋಯ್ ಎಚ್ಚರಿಕೆ

ಸ್ಯಾಮ್ ಬಹದ್ದೂರ್ ಅವರ ಪ್ರಚಾರ ಸಂದರ್ಭ ಬಾಕ್ಸ್​ ಆಫೀಸ್​ ಫೈಟ್​ ಬಗ್ಗೆ ವಿಕ್ಕಿ ಕೌಶಲ್ ಅವರಿಗೆ ಪ್ರಶ್ನೆ ಎದುರಾಗಿತ್ತು. ಒಂದೇ ದಿನ ಬಹು ಸಿನಿಮಾಗಳು ಬಿಡುಗಡೆಯಾಗುವ ಬಗ್ಗೆ ವಿಕ್ಕಿ ಮಾತನಾಡಿದ್ದರು. ಪ್ರೇಕ್ಷಕರ ಸಾಮರ್ಥ್ಯ ಮತ್ತು ಪ್ರದರ್ಶನ ವಲಯಗಳು ಚಿತ್ರವೊಂದರ ಯಶಸ್ಸಿನ ನಿರ್ಣಾಯಕ ಅಂಶಗಳೆಂದು ತಿಳಿಸಿದ್ದರು. ಎರಡೂ ಚಿತ್ರಗಳು ಪ್ರೇಕ್ಷಕರ ಮನಗೆದ್ದರೆ ಯಶಸ್ಸು ಖಚಿತ ಎಮದು ವಿಶ್ವಾಸ ವ್ಯಕ್ತಪಡಿಸಿದ್ದರು. ನಾನೂ ಕೂಡ ಇತರೆ ಪ್ರೇಕ್ಷಕರಂತೆ ಅನಿಮಲ್​ ಸಿನಿಮಾ ಬಗ್ಗೆ ಉತ್ಸುಕನಾಗಿದ್ದೇನೆ. ಎರಡೂ ಚಿತ್ರಗಳು ಗೆಲ್ಲಬೇಕೆಂದು ತಿಳಿಸಿದ್ದರು.

Last Updated : Nov 26, 2023, 3:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.