ETV Bharat / entertainment

ರಶ್ಮಿಕಾ-ರಣ್​ಬೀರ್​ ಕಿಸ್ಸಿಂಗ್​ ಸೀನ್​: ಟ್ರೋಲಿಗರ ಆಟ ಶುರು! - Ranbir Rashmika kiss

'ಅನಿಮಲ್' ಸಿನಿಮಾದ ಹುವಾ ಮೈನ್‌ ಹಾಡಿನಲ್ಲಿ ರಶ್ಮಿಕಾ-ರಣ್​ಬೀರ್ ಕೆಮಿಸ್ಟ್ರಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ, ಟ್ರೋಲಿಗರು ವಿಜಯ್​ ದೇವರಕೊಂಡ ಹೆಸರು ಉಲ್ಲೇಖಿಸಿ ಆಟ ಶುರುಮಾಡಿದ್ದಾರೆ.

Animal song Hua Main sparks meme's
ರಶ್ಮಿಕಾ ರಣ್​ಬೀರ್​ ಕಿಸ್ಸಿಂಗ್​ ಸೀನ್​: ಟ್ರೋಲಿಗರ ಆಟ ಶುರು
author img

By ETV Bharat Karnataka Team

Published : Oct 11, 2023, 7:47 PM IST

ರಣ್​​ಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯ 'ಅನಿಮಲ್' ಸಿನಿಮಾದ ಹುವಾ ಮೈನ್‌ ಸಾಂಗ್ ಇಂದು​​ ರಿಲೀಸ್​ ಆಗಿದೆ. ಸಂದೀಪ್ ರೆಡ್ಡಿ ವಂಗಾ ಆ್ಯಕ್ಷನ್​ ಕಟ್​ ಹೇಳಿರುವ ಈ​ ಸಿನಿಮಾದಲ್ಲಿ ಬಾಬಿ ಡಿಯೋಲ್ ಹಾಗೂ ಅನಿಲ್ ಕಪೂರ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರೊಮ್ಯಾಂಟಿಕ್​ ಬಿಡುಗಡೆಯ​ ಮೂಲಕ ಚಿತ್ರತಂಡ ಪ್ರಚಾರ ಪ್ರಾರಂಭಿಸಿದೆ.

ಇದೀಗ ಹುವಾ ಮೈನ್‌ ಸಾಂಗ್ ಸದ್ದು ಮಾಡುತ್ತಿದ್ದು, ರಶ್ಮಿಕಾ-ರಣ್​ಬೀರ್ ಕೆಮಿಸ್ಟ್ರಿ ಸಖತ್​ ವರ್ಕ್​ಔಟ್​ ಆಗಿದೆ ಎಂದು ಅಭಿಮಾನಿಗಳು ಗುಣಗಾನ ಮಾಡುತ್ತಿದ್ದಾರೆ. ಹಾಡಿನಲ್ಲಿ ಲಿಪ್​​ ಲಾಕ್​ ಸೀನ್‌ಗಳು ಬಹಳಷ್ಟಿದ್ದು, ಟ್ರೋಲಿಗರಿಗೆ ಆಹಾರವಾಗಿದೆ. ರಶ್ಮಿಕಾ ಅವರ ರೂಮರ್​ ಬಾಯ್​ಫ್ರೆಂಡ್, ಟಾಲಿವುಡ್​ ಸೂಪರ್​ ಸ್ಟಾರ್ ವಿಜಯ್ ದೇವರಕೊಂಡ ಅವರನ್ನೇ ಕೇಂದ್ರೀಕರಿಸಿ ಮೀಮ್ಸ್​ ವೈರಲ್​ ಮಾಡಲಾಗುತ್ತಿದೆ.

ಸಾಂಗ್​ ರಿಲೀಸ್​ ಆಗುತ್ತಿದ್ದಂತೆ ನೆಟಿಜನ್‌ಗಳು ಸಮಯ ವ್ಯರ್ಥ ಮಾಡದೇ ಪ್ರತಿಕ್ರಿಯೆ ಕೊಡಲು ಆರಂಭಿಸಿದರು. ಟ್ರೋಲ್​, ಮೀಮ್ಸ್​​ಗೆ ವಿಜಯ್ ದೇವರಕೊಂಡರನ್ನು ಎಳೆದು ತಂದರು. ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಎಕ್ಸ್​ನಲ್ಲಿ ಮೀಮ್​ ಒಂದನ್ನು ಶೇರ್ ಮಾಡಿರುವ ಬಳಕೆದಾರ, ''ರಣ್​​ಬೀರ್​ ಕಪೂರ್​​ ಭೇಟಿಯಾಗಲು ವಿಜಯ್​ ದೇವರಕೊಂಡ ಹೊರಟಿದ್ದಾರೆ'' ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು, ''ಆಲಿಯಾ ಭಟ್​ (ರಣ್​ಬೀರ್​ ಕಪೂರ್​ ಪತ್ನಿ) ಮತ್ತು ವಿಜಯ್​​ ದೇವರಕೊಂಡ ಈ ಹಾಡಿನ ಪೋಸ್ಟರ್ ವೀಕ್ಷಿಸಿದ ನಂತರ ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ" ಎಂದು ಕಿಚಾಯಿಸಿದ್ದಾರೆ.

ಹೀಗೆ, ಸಾಂಗ್​ ವೀಕ್ಷಿಸಿದ ಬಳಿಕ ವಿಜಯ್​ ದೇವರಕೊಂಡ ರಿಯಾಕ್ಷನ್​ ಹೇಗಿರಬಹುದು ಎಂದು ಊಹಿಸಿ ಮೀಮ್ಸ್​​ಗಳನ್ನು ಶೇರ್ ಮಾಡಲಾಗುತ್ತಿದೆ. ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ, ರಣ್​ಬೀರ್​ ಕಪೂರ್​, ವಿಜಯ್​ ದೇವರಕೊಂಡ ಹೆಸರು ಟ್ರೆಂಡಿಂಗ್​ನಲ್ಲಿದೆ.

ಇದನ್ನೂ ಓದಿ: 'ಹುವಾ ಮೈನ್'​ ರೊಮ್ಯಾಂಟಿಕ್​ ಸಾಂಗ್​: ರಣ್​​ಬೀರ್​-ರಶ್ಮಿಕಾ ಕೆಮಿಸ್ಟ್ರಿ ಮೆಚ್ಚಿದ ಫ್ಯಾನ್ಸ್

ಈ ಚಿತ್ರದ ಮೂಲಕ ಬಾಬಿ ಡಿಯೋಲ್ ಬಿಗ್​ ಸ್ಕ್ರೀನ್​ಗೆ ರೀ ಎಂಟ್ರಿ ಕೊಡುತ್ತಿದ್ದಾರೆ. ಖಳನಾಯಕನ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಹಿರಿಯ ನಟ ಅನಿಲ್ ಕಪೂರ್ ಅವರು ರಣ್​​ಬೀರ್ ಕಪೂರ್ ತಂದೆ ಬಲ್ಬೀರ್ ಸಿಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಮಂದಣ್ಣ ಗೀತಾಂಜಲಿಯಾಗಿ ಪಾತ್ರ ನಿರ್ವಹಿಸಿದ್ದಾರೆ. ಚಿತ್ರ ಭೂಗತ ಜಗತ್ತು, ತಂದೆ-ಮಗನ ಸಂಬಂಧ ಹಾಗು ಪ್ರೇಮಕಥೆಯ ಸುತ್ತ ಸುತ್ತುತ್ತದೆ.

ಇದನ್ನೂ ಓದಿ: ಯಶ್​​ ಕುರಿತು ಟಾಲಿವುಡ್‌ ನಟ ರವಿತೇಜ ಹೇಳಿಕೆಗೆ ಅಭಿಮಾನಿಗಳ ಅಸಮಾಧಾನ

ಡಿಸೆಂಬರ್ 1 ರಂದು ಚಿತ್ರಮಂದಿರಗಳಲ್ಲಿ ಹಿಂದಿ, ತೆಲುಗು, ಕನ್ನಡ, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.