ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ 'ಅನಿಮಲ್' ಚಿತ್ರದ ಪ್ರಿ-ಟೀಸರ್ ಇಂದು ಅನಾವರಣಗೊಂಡಿದೆ. ಚಿತ್ರವನ್ನು ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ಇವರು 2019ರ ಬ್ಲಾಕ್‌ಬಸ್ಟರ್ ಕಬೀರ್ ಸಿಂಗ್ ಮೂಲಕ ಬಾಲಿವುಡ್‌ನಲ್ಲಿ ನಿರ್ದೇಶಕರಾಗಿ ಎಂಟ್ರಿ ಕೊಟ್ಟವರು. ಈ ಚಿತ್ರ 2017ರ ತೆಲುಗು ಹಿಟ್ ಮೂವಿ ಅರ್ಜುನ್ ರೆಡ್ಡಿಯ ರಿಮೇಕ್ ಆಗಿದೆ.
ಇಂದು ಬಿಡುಗಡೆಯಾಗಿರುವ 'ಅನಿಮಲ್' ಟೀಸರ್ 50 ಸೆಕೆಂಡು ಇದ್ದು, ಅದರಲ್ಲಿ ರಣಬೀರ್ ಕೊಡಲಿಯನ್ನು ಹಿಡಿದುಕೊಂಡು ಬಂದು ಶತ್ರುಗಳನ್ನು ಹೊಡೆದು ಹಾಕುತ್ತಿರುವುದನ್ನು ಕಾಣಬಹುದು. ಇದು ಒಂದು ರೀತಿಯಲ್ಲಿ ಆಕರ್ಷಣೀಯವಾಗಿದ್ದು, ಅಪಾರ ಸಿನಿ ಪ್ರೇಕ್ಷಕರನ್ನು ಬಹುವಾಗಿ ಸೆಳೆದಿದೆ. ಡಿಫರೆಂಟ್ ಸ್ಟೈಲ್ನಲ್ಲಿ ಪ್ರೀ-ಟೀಸರ್ ರಿಲೀಸ್ ಆಗಿದೆ.
ಅನಿಮಲ್ ಸಿನಿಮಾನ್ನು ಭೂಷಣ್ ಕುಮಾರ್ ಮತ್ತು ಕ್ರಿಶನ್ ಕುಮಾರ್ ಅವರ ಟಿ-ಸೀರೀಸ್, ಮುರಾದ್ ಖೇತಾನಿಯ ಸಿನಿ1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಜೊತೆಗೆ ಅನಿಲ್ ಕಪೂರ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಮತ್ತೊಬ್ಬ ಸ್ಟಾರ್ ಬಾಬಿ ಡಿಯೋಲ್ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಪರಿಣಿತಿ ಚೋಪ್ರಾ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಕ್ರೈಮ್ ಮತ್ತು ಆಕ್ಷನ್ ಥ್ರಿಲ್ಲರ್ ಆಗಿ ಈ ಚಿತ್ರ ತಯಾರಾಗುತ್ತಿದೆ.
5 ಭಾಷೆಗಳಲ್ಲಿ ಬಿಡುಗಡೆ: ಸಂದೀಪ್ ರೆಡ್ಡಿ ಈಗಾಗಲೇ ಸೌತ್ ಪ್ರೇಕ್ಷಕರ ನಾಡಿಮಿಡಿತವನ್ನು ಚೆನ್ನಾಗಿ ತಿಳಿದಿರುವುದರಿಂದ ದಕ್ಷಿಣ ಪ್ರೇಕ್ಷಕರನ್ನು ರಂಜಿಸಲು ಅವರು ಅನಿಮಲ್ ಚಿತ್ರವನ್ನು ಸಿದ್ಧಪಡಿಸಿದ್ದಾರೆ. 'ಅನಿಮಲ್' ಸಿನಿಮಾ ಆಗಸ್ಟ್ 11 ರಂದು ಥಿಯೇಟರ್ನಲ್ಲಿ ಬರಲು ಸಿದ್ಧವಾಗಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿ ಐದು ಭಾಷೆಗಳಲ್ಲಿ ದೇಶಾದ್ಯಂತ ಬಿಡುಗಡೆಯಾಗಲಿದೆ.
- " class="align-text-top noRightClick twitterSection" data="">
ರಣಬೀರ್ ಈಗಾಗಲೇ ‘ಬ್ರಹ್ಮಾಸ್ತ್ರ’ ಚಿತ್ರದ ಮೂಲಕ ಸೌತ್ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ರಶ್ಮಿಕಾ ಮಂದಣ್ಣ ಸೌತ್ ಸ್ಟಾರ್ ಎನಿಸಿಕೊಂಡಿದ್ದಾರೆ. ಇವರಿಬ್ಬರ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಅಪಾರ ನಿರೀಕ್ಷೆ ಹುಟ್ಟಿದೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್, ನಂತರ ಬಿಡುಗಡೆಗೊಂಡ ಪೋಸ್ಟರ್ಗಳು ಸಿನಿಮಾ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಆದರೆ ಅನಿಮಲ್ ಚಿತ್ರವು ಸನ್ನಿ ಡಿಯೋಲ್ ಅವರ ಮುಂಬರುವ ಚಿತ್ರ ಗದರ್ 2 ಮತ್ತು ಅಕ್ಷಯ್ ಕುಮಾರ್ ಅವರ ಮುಂದಿನ OMG 2 ರೊಂದಿಗೆ ಬಾಕ್ಸ್ ಆಫೀಸ್ನಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಕಲೆಕ್ಷನ್ ವಿಚಾರದಲ್ಲಿ ವೇಗದ ಓಟ ಪಡೆಯಲಿದೆಯಾ ಎಂಬುದು ಕಾದು ನೋಡಬೇಕಿದೆ. ಜೊತೆಗೆ ಆಗಸ್ಟ್ 10 ರಂದು ಕಾಲಿವುಡ್ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಜೈಲರ್ ಸಿನಿಮಾವು ಬಿಡುಗಡೆಯಾಗುತ್ತಿದ್ದು, ದಕ್ಷಿಣದ ಮಾರುಕಟ್ಟೆಯಲ್ಲಿ ಬಾಕ್ಸ್ ಆಫೀಸ್ ಗೌರವಕ್ಕಾಗಿ ಅನಿಮಲ್ ಹೋರಾಡಬೇಕಾಗುತ್ತದೆ.
ಇದನ್ನೂ ಓದಿ: Gana first look: ಪ್ರಜ್ವಲ್ ದೇವರಾಜ್ ಅಭಿನಯದ 'ಗಣ' ಚಿತ್ರದ ಫಸ್ಟ್ ಲುಕ್ ಬಿಡುಗಡೆ; ವೀರಂ ಬಳಿಕ ಭಾರಿ ನಿರೀಕ್ಷೆ