ETV Bharat / entertainment

ಈ ನಟನ ಹೆಸರು ಹೇಳುತ್ತಿದ್ದಂತೆ ನಾಚಿ ನೀರಾದ ಅನನ್ಯಾ ಪಾಂಡೆ - ಅನನ್ಯಾ ಆದಿತ್ಯ ಲವ್

ನಟಿ ಅನನ್ಯಾ ಪಾಂಡೆ ಮತ್ತು ನಟ ಆದಿತ್ಯ ರಾಯ್ ಕಪೂರ್ ಡೇಟಿಂಗ್​ನಲ್ಲಿದ್ದಾರೆ ಎಂಬ ಗುಸುಗುಸು ಇದೆ.

Ananya Panday
ನಟಿ ಅನನ್ಯಾ ಪಾಂಡೆ
author img

By

Published : Mar 25, 2023, 3:30 PM IST

ಬಾಲಿವುಡ್​ ಚೆಲುವೆ ಅನನ್ಯಾ ಪಾಂಡೆ ಮತ್ತು ನಟ ಆದಿತ್ಯ ರಾಯ್ ಕಪೂರ್ ಡೇಟಿಂಗ್​ನಲ್ಲಿದ್ದಾರೆ ಎಂಬ ವದಂತಿಗಳಿವೆ. ಆದ್ರೆ ಈ ಬಗ್ಗೆ ಈ ಇಬ್ಬರೂ ಮೌನ ವಹಿಸಿದ್ದಾರೆ. ಇತ್ತೀಚೆಗೆ ನಡೆದ ಫ್ಯಾಷನ್ ವೀಕ್ ಸಮಾರಂಭದಲ್ಲಿ ಈ ವದಂತಿಯ ಲವ್​ ಬರ್ಡ್ಸ್​​ ಕಾಣಿಸಿಕೊಂಡರು. ಗೆಳೆಯ ಆದಿತ್ಯ ರಾಯ್ ಕಪೂರ್ ಹೆಸರನ್ನು ಪಾಪರಾಜಿಗಳು ಪ್ರಸ್ತಾಪಿಸಿದಾಗ ನಟಿ ಅನನ್ಯಾ ಪಾಂಡೆ ನಾಚಿ ನೀರಾದರು.

ಕಳೆದ ವರ್ಷ ಕೆಲ ಸಂದರ್ಭಗಳಲ್ಲಿ ನಟಿ ಅನನ್ಯಾ ಪಾಂಡೆ ಮತ್ತು ನಟ ಆದಿತ್ಯ ರಾಯ್ ಕಪೂರ್ ಒಟ್ಟಿಗೆ ಕಾಣಿಸಿಕೊಂಡರು. ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿ, ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತು. ಅಂದಿನಿಂದ ಅವರ ಸಂಬಂಧದ ಬಗ್ಗೆ ವದಂತಿಗಳು ಹರಡಿತು. ಇತ್ತೀಚೆಗೆ ನಡೆದ ಫ್ಯಾಷನ್ ವೀಕ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

  • " class="align-text-top noRightClick twitterSection" data="">

ಫ್ಯಾಷನ್ ವೀಕ್ ಈವೆಂಟ್ ಕುರಿತು ಮಾತನಾಡುತ್ತ, ಪಾಪರಾಜಿಗಳು ನಟಿ ಬಗ್ಗೆ ಗುಣಗಾನ ಮಾಡಿದರು. ನಟ ಆದಿತ್ಯ ರಾಯ್ ಕಪೂರ್ ಜೊತೆಗಿನ ಕೆಮಿಸ್ಟ್ರಿ ಬಗ್ಗೆಯೂ ಮಾತನಾಡಿದರು. ಇನ್‌ಸ್ಟಾಗ್ರಾಮ್‌ನಲ್ಲಿ ಪಾಪರಾಜಿಯೋರ್ವರ ಖಾತೆಯಿಂದ ಪೋಸ್ಟ್ ಮಾಡಲಾಗಿರುವ ಈ ವಿಡಿಯೋದಲ್ಲಿ, ''ನಿಮ್ಮ ರ‍್ಯಾಂಪ್ ವಾಕ್ ಚೆನ್ನಾಗಿತ್ತು'' ಎಂದು ಕ್ಯಾಮರಾಪರ್ಸನ್​​ ಹೇಳುವುದನ್ನು ನೀವು ಕೇಳಬಹುದು. ಅಲ್ಲದೇ "ನೀವಿಬ್ಬರು (ಅನನ್ಯಾ - ಆದಿತ್ಯ) ಒಟ್ಟಿಗೆ ಚೆನ್ನಾಗಿ ಕಾಣುತ್ತೀರಿ" ಎಂದು ಕೂಡ ಹೇಳಿದ್ದು, ಇದಕ್ಕೆ ಅನನ್ಯಾ ಪಾಂಡೆ ಮುಗುಳ್ನಕ್ಕು, ಕೆನ್ನೆ ಕೆಂಪು ಮಾಡಿಕೊಂಡರು. ನಟಿ ನಾಚಿ ನೀರಾಗಿರುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಇದನ್ನೂ ಓದಿ: ವರ್ಷ ಪೂರೈಸಿದ 'RRR'.. ಈಗಲೂ ಇದೆ ನಾಟು ನಾಟು ಕ್ರೇಜ್​​

ಕರಣ್ ಜೋಹರ್ ತಮ್ಮ ಚಾಟ್ ಶೋ 'ಕಾಫಿ ವಿತ್ ಕರಣ್ 7'ನಲ್ಲಿ ಅನನ್ಯಾರನ್ನು ಗೇಲಿ ಮಾಡಿದ ನಂತರ ಆದಿತ್ಯ ಮತ್ತು ಅನನ್ಯಾ ಬಗೆಗಿನ ಡೇಟಿಂಗ್ ವದಂತಿ ಜೋರಾಗಿ ಹರಡಲು ಪ್ರಾರಂಭಿಸಿದೆ. ಕಳೆದ ವರ್ಷ, ಕರಣ್​​ ಅವರು ಇಬ್ಬರ ನಡುವೆ ಪ್ರೀತಿ ಇದೆ ಎಂಬ ಸುಳಿವು ನೀಡಿದ್ದರು. ಈ ಇಬ್ಬರೂ ಕಲಾವಿದರು ಆಗಾಗ್ಗೆ ಬಾಲಿವುಡ್ ಕಾರ್ಯಕ್ರಮಗಳಲ್ಲಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಕಳೆದ ವರ್ಷ ನಟಿ ಕೃತಿ ಸನೋನ್ ಅವರ ದೀಪಾವಳಿ ಪಾರ್ಟಿಯಲ್ಲಿ ಕೂಡ ಒಟ್ಟಿಗೆ ಕಾಣಿಸಿಕೊಂಡಿದ್ದರು. ವದಂತಿಯ ಲವ್​ ಬರ್ಡ್ಸ್​​ ಇತ್ತೀಚೆಗೆ ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿಯೂ ಜೋಡಿಯಾಗಿ ಕಾಣಿಸಿಕೊಂಡರು. ಆದಾಗ್ಯೂ, ಎರಡೂ ಕಡೆಯಿಂದ ಅವರ ಸಂಬಂಧದ ಬಗ್ಗೆ ಯಾವುದೇ ದೃಢೀಕರಣವಿಲ್ಲ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮುಂದಿನ ಚಿತ್ರಕ್ಕೆ ಚಾಲನೆ: ಮುಹೂರ್ತ ಸಮಾರಂಭಕ್ಕೆ ಸಾಕ್ಷಿಯಾದ ಚಿರಂಜೀವಿ

ಕೆಲಸದ ವಿಚಾರ ಗಮನಿಸುವುದಾದರೆ, ವರ್ಧನ್ ಕೇತ್ಕರ್ ಅವರ ಮುಂಬರುವ ಚಿತ್ರ ಗುಮ್ರಾದಲ್ಲಿ ಆದಿತ್ಯ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಲನಚಿತ್ರವು 2019ರಲ್ಲಿ ಬಿಡುಗಡೆಯಾದ ತಮಿಳು ಚಲನಚಿತ್ರ ಥಡಮ್‌ನ ರೀಮೇಕ್. ಅನನ್ಯಾ ಕೊನೆಯದಾಗಿ ಪುರಿ ಜಗನ್ನಾಥ್ ಅವರ ಆ್ಯಕ್ಷನ್ ಡ್ರಾಮಾ ಲೈಗರ್‌ನಲ್ಲಿ ಅರ್ಜುನ್​ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಜೊತೆಗೆ ಕಾಣಿಸಿಕೊಂಡಿದ್ದರು. ಮುಂದೆ ರಾಜ್ ಶಾಂಡಿಲ್ಯ ಅವರ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಡ್ರೀಮ್ ಗರ್ಲ್ 2 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಜುಲೈ 7ರಂದು ಬಿಡುಗಡೆ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.