ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ತಮ್ಮ ಟ್ವಿಟರ್ ಬ್ಲೂಟಿಕ್ ಚಂದಾದಾರಿಕೆ ವಾಪಸ್ ಪಡೆದ ಹಿನ್ನೆಲೆ ಟ್ವಿಟರ್ ಸಂಸ್ಥೆ ಮಾಲೀಕ ಎಲೋನ್ ಮಸ್ಕ್ ಅವರಿಗೆ ತಮ್ಮದೇ ಶೈಲಿಯಲ್ಲಿ ಧನ್ಯವಾದ ತಿಳಿಸಿದ್ದಾರೆ. ಟ್ವಿಟರ್ ಬ್ಲೂಟಿಕ್ ಸೇವೆಯ ಶುಲ್ಕ ಪಾವತಿಸದ ಹಿನ್ನೆಲೆ ಹಲವು ಸೆಲೆಬ್ರಿಟಿಗಳ ಬ್ಲೂಟಿಕ್ ಮಾಯವಾಗಿತ್ತು. ಇದಿಗ ಅಮಿತಾಭ್ ಬಚ್ಚನ್ ಅವರು ತಮ್ಮ ಬ್ಲೂಟಿಕ್ ಅನ್ನು ಮರು ಸಂಪಾದಿಸಿದ್ದಾರೆ.
ಮೆಗಾಸ್ಟಾರ್ ತಮ್ಮ ಟ್ವಿಟರ್ನಲ್ಲಿ ಬ್ಲೂಟಿಕ್ ಚಂದಾದಾರಿಕೆ ವಾಪಸ್ ಪಡೆದ ನಂತರ 1994ರ "ಮೊಹ್ರಾ" ಚಲನಚಿತ್ರದ "ತು ಚೀಸ್ ಬಡಿ ಹೈ ಮಸ್ತ್ ಮಸ್ತ್" ಹಾಡಿನ ಸಾಹಿತ್ಯವನ್ನು ಬಳಸಿ ಎಲೋನ್ ಮಸ್ಕ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. 'ತು ಚೀಸ್ ಬಡಿ ಹೈ ಮಸ್ಕ್ ಮಸ್ಕ್' ಎಂದು ಬಿಗ್ ಬಿ ಬರೆದುಕೊಂಡಿದ್ದಾರೆ.
-
T 4624 -
— Amitabh Bachchan (@SrBachchan) April 21, 2023 " class="align-text-top noRightClick twitterSection" data="
ए Musk भैया ! बहुत बहुत धन्यवाद देत हैं हम आपका !
उ , नील कमल ✔️ लग गवा हमार नाम के आगे !
अब का बताई भैया ! 😁
गाना गये का मन करत है हमार !
सनबो का ?
इ लेओ सुना :
"तू चीज़ बड़ी है musk musk ... तू चीज़ बड़ी है, musk " 🎶
">T 4624 -
— Amitabh Bachchan (@SrBachchan) April 21, 2023
ए Musk भैया ! बहुत बहुत धन्यवाद देत हैं हम आपका !
उ , नील कमल ✔️ लग गवा हमार नाम के आगे !
अब का बताई भैया ! 😁
गाना गये का मन करत है हमार !
सनबो का ?
इ लेओ सुना :
"तू चीज़ बड़ी है musk musk ... तू चीज़ बड़ी है, musk " 🎶T 4624 -
— Amitabh Bachchan (@SrBachchan) April 21, 2023
ए Musk भैया ! बहुत बहुत धन्यवाद देत हैं हम आपका !
उ , नील कमल ✔️ लग गवा हमार नाम के आगे !
अब का बताई भैया ! 😁
गाना गये का मन करत है हमार !
सनबो का ?
इ लेओ सुना :
"तू चीज़ बड़ी है musk musk ... तू चीज़ बड़ी है, musk " 🎶
ಅಮಿತಾಭ್ ಬಚ್ಚನ್ ಟ್ವೀಟ್: "ಹೇ ಮಸ್ಕ್ ಸಹೋದರ, ನಾವು ನಿಮಗೆ ಬಹಳ ಧನ್ಯವಾದಗಳನ್ನು ಅರ್ಪಿಸುತ್ತೇವೆ. ನನ್ನ ಹೆಸರಿನ ಮುಂದೆ ನೀಲಿ ಕಮಲ (ಬ್ಲೂ ಟಿಕ್) ಸೇರಿಸಲಾಗಿದೆ. ಈಗ ನಾನು ನಿಮಗೆ ಏನು ಹೇಳಲಿ, ಸಹೋದರ? ನನಗೆ ಹಾಡೊಂದನ್ನು ಹಾಡಬೇಕೆಂದು ಅನಿಸುತ್ತಿದೆ. ನೀವು ಕೇಳಲು ಇಷ್ಟ ಪಡುತ್ತೀರಾ? ಸರಿ ಕೇಳಿ, 'ತು ಚೀಸ್ ಬಡಿ ಹೈ ಮಸ್ಕ್ ಮಸ್ಕ್.....ತು ಚೀಸ್ ಬಡಿ ಹೈ ಮಸ್ಕ್ ಮಸ್ಕ್' ಎಂದು ಬಚ್ಚನ್ ಅವರು ಬರೆದುಕೊಂಡಿದ್ದಾರೆ.
ಬ್ಲೂ ಟಿಕ್ ಮಾಯವಾಗಿದ್ದ ವೇಳೆ, ಸಾಮಾಜಿಕ ಮಾಧ್ಯಮ ವೇದಿಕೆಗೆ ತೆರಳಿ ತಮ್ಮ ನೀಲಿ ಟಿಕ್ ಅನ್ನು ಹಿಂದಿರುಗಿಸುವಂತೆ ಕೇಳಲು ಅದನ್ನು ಅವರು "ನೀಲಿ ಕಮಲ" ಎಂದು ಉಲ್ಲೇಖಿಸಿದ್ದರು. ಹಿರಿಯ ನಟನ ಈ ಹಿಂದಿನ ಟ್ವೀಟ್ನಲ್ಲಿ, ತಮ್ಮ ಬ್ಲೂ ಟಿಕ್ ವಾಪಸ್ ಕೊಡಿ ಎಂದು ಕೇಳಿಕೊಂಡಿದ್ದರು. ನಾನು ಈಗಾಗಲೇ ಹಣ ಪಾವತಿಸಿದ್ದೇನೆ ಎಂದು ತಿಳಿಸಿದ ಬಿಗ್ ಬಿ, ಕೈ ಮುಗಿಯುವ ಎಮೋಜಿ ಬಳಸಿ ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: ಬ್ಲೂ ಟಿಕ್ ಸೇವೆ ಕಳೆದು ಕೊಳ್ಳುತ್ತಿದ್ದಂತೆ ಮೆಮ್ಗೆ ಒಳಗಾದ ಬಾಲಿವುಡ್ ಸೆಲೆಬ್ರಿಟಿಗಳು
ಟ್ವಿಟರ್ ಸಂಸ್ಥೆ ಮಾಲೀಕ ಎಲೋನ್ ಮಸ್ಕ್ ಈಗಾಗಲೇ ಕೆಲ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಬ್ಲೂಟಿಕ್ ಚಂದಾದಾರಿಕೆ ಕೂಡ ಒಂದು. ಟ್ವಿಟರ್ ಬ್ಲೂಟಿಕ್ ಸೇವೆಗೆ ಹಣ ಪಾವತಿಸಬೇಕು. ಯಾರೆಲ್ಲ ಹಣ ಪಾವತಿಸಿರಲಿಲ್ಲವೋ ಅವರು ಏಪ್ರಿಲ್ 20ರ ರಾತ್ರಿಯಿಂದ ತಮ್ಮ ಖಾತೆಯ ಬ್ಲೂ ಟಿಕ್ ಕಳೆದುಕೊಂಡಿದ್ದಾರೆ. ನಟ ಅಮಿತಾಭ್ ಬಚ್ಚನ್ ಈಗಾಗಲೇ ಹಣ ಪಾವತಿಸಿರುವ ಹಿನ್ನೆಲೆ ತಮ್ಮ ಬ್ಲೂ ಟಿಕ್ ಅನ್ನು ವಾಪಸ್ ಪಡೆದಿದ್ದಾರೆ.
ಇದನ್ನೂ ಓದಿ: ಟ್ವಿಟರ್ ಬ್ಲೂಟಿಕ್ ಕಳೆದುಕೊಂಡ ಸೆಲೆಬ್ರಿಟಿಗಳು!
ಸೆಲೆಬ್ರಿಟಿ, ಗಣ್ಯ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಖಾತೆ ತೆರೆದು ಆ ಮೂಲಕ ನಡೆಯುವ ಸಮಸ್ಯೆಗಳನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಈ ಟ್ವಿಟರ್ ಬ್ಲೂಟಿಕ್ ಚಂದಾದಾರಿಕೆಗಾಗಿ ಒಂದು ತಿಂಗಳಿಗೆ 900 ಅಥವಾ ವರ್ಷಕ್ಕೆ 9400 ರೂಪಾಯಿ ಪಾವತಿಸಬೇಕು. 2009ರಲ್ಲೇ ಈ ಬ್ಲೂ ಟಿಕ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.