ಬಾಲಿವುಡ್ನ ಸೂಪರ್ ಸ್ಟಾರ್ ಅಮಿತಾಭ್ ಮತ್ತು ಕುಟುಂಬಸ್ಥರು 'ಬಚ್ಚನ್' ಹೆಸರಿನಲ್ಲೇ ಗುರುತಿಸಿಕೊಂಡಿರುವ ತಾರೆಯರು. ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು 'ಬಚ್ಚನ್' ಮೂಲತಃ ತಮ್ಮ ತಂದೆ, ಹೆಸರಾಂತ ಕವಿ ಹರಿವಂಶ್ ರೈ ಅವರ ಕಾವ್ಯನಾಮ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
'ಬಚ್ಚನ್' ಅನ್ನೋದು ಅಂತಿಮವಾಗಿ ಕವಿ ಹರಿವಂಶ್ ಅವರ ಗುರುತಾಯಿತು. ಹಾಗಾಗಿ ಅವರ ಮಗ ಅಮಿತಾಭ್ ಶಾಲಾ ಪ್ರವೇಶಕ್ಕಾಗಿ ಅವರು 'ಬಚ್ಚನ್' ಎಂಬ ಉಪನಾಮವನ್ನು ಆರಿಸಿಕೊಂಡರು.
"ನನ್ನ ತಂದೆ ಎಂದಿಗೂ ಜಾತಿಯ ಕಟ್ಟುಪಾಡುಗಳಲ್ಲಿ ನಮ್ಮನ್ನು ಇರಿಸಲು ಬಯಸಲಿಲ್ಲ. ಅವರ ಕಾವ್ಯನಾಮ 'ಬಚ್ಚನ್' ಆಗಿತ್ತು. ನನ್ನ ಶಾಲಾ ಪ್ರವೇಶದ ಸಮಯದಲ್ಲಿ, ಶಿಕ್ಷಕರು ನನ್ನ ಉಪನಾಮ ಏನೆಂದು ನನ್ನ ಪೋಷಕರನ್ನು ಕೇಳಿದರು. ಆಗ ನನ್ನ ತಂದೆ ಸ್ಥಳದಲ್ಲೇ ನನ್ನ ಉಪನಾಮ 'ಬಚ್ಚನ್' ಎಂದು ನಿರ್ಧರಿಸಿದರು. ನಾನು 'ಬಚ್ಚನ್' ಎಂಬುದಕ್ಕೆ ಮೊದಲ ಉದಾಹರಣೆ ಎಂದು ಹಿರಿಯ ನಟ ಅಮಿತಾಭ್ ಬಚ್ಚನ್ ತಿಳಿಸಿದರು.
ಪ್ರಸ್ತುತ ರಸಪ್ರಶ್ನೆ ಆಧಾರಿತ ರಿಯಾಲಿಟಿ ಶೋ 'ಕೌನ್ ಬನೇಗಾ ಕರೋಡ್ಪತಿ 14' ಅನ್ನು ಹೋಸ್ಟ್ ಮಾಡುತ್ತಿರುವ ಬಿಗ್ ಬಿ ಅಮಿತಾಭ್ ಬಚ್ಚನ್, ಉಪನಾಮಗಳ ಬಗ್ಗೆ ಸ್ಪರ್ಧಿ ರುಚಿ ಅವರ ದೃಷ್ಟಿಕೋನದಿಂದ ಸಾಕಷ್ಟು ಪ್ರಭಾವಿತರಾಗಿದ್ದಾರೆ.
ಗುರುಗ್ರಾಮ್‌ನಿಂದ ಬಂದ ಸ್ಪರ್ಧಿ ರುಚಿ ಅವರು ಉಪನಾಮವನ್ನು ಹೊಂದಿಲ್ಲದ ಕಾರಣವನ್ನು ಕೇಳಿದಾಗ, ನನ್ನ ಪೂರ್ಣ ಹೆಸರು ರುಚಿ. ಉಪನಾಮವು ನಿಮ್ಮನ್ನು ಜಾತಿಯ ಬ್ರಾಕೆಟ್‌ಗೆ ಸೇರಿಸುತ್ತದೆ ಎಂದು ನಾನು ಭಾವಿಸುತ್ತೇನೆ. ನಿಮ್ಮ ಮೊದಲ ಹೆಸರು ಸಾಕೆನಿಸುತ್ತದೆ, ಸ್ವಾವಲಂಬಿಯಾಗಿದೆ ಎಂದು ನಾನು ಭಾವಿಸುತ್ತೇನೆ, ಅದು ನಿಮ್ಮ ವೈಯಕ್ತಿಕ ಗುರುತು. ಮತ್ತು ನನ್ನಂತೆ, ನನ್ನ ಪತಿಗೂ ತನ್ನದೇ ಆದ ಗುರುತಿದೆ. ಬಾಲ್ಯದಿಂದಲೂ ನನ್ನನ್ನು ರುಚಿ ಎಂದು ಮಾತ್ರ ಸಂಬೋಧಿಸಲಾಗುತ್ತಿತ್ತು. 'ಕೌನ್ ಬನೇಗಾ ಕರೋಡ್ ಪತಿ' ವೇದಿಕೆಯಲ್ಲಿ ನಾನು ರುಚಿ ಮಾತ್ರ ಎಂದು ಬಿಗ್ ಬಿ ಅಲ್ಲಿ ಉತ್ತರಿಸಿದ್ದಾರೆ.
ವೃತ್ತಿಯಲ್ಲಿ ಮಾಧ್ಯಮ ವಿಶ್ಲೇಷಕರಾಗಿರುವ ರುಚಿ ಅವರು ವಿವಿಧ ವಿಷಯಗಳ ಕುರಿತು ಅಮಿತಾಭ್ ಅವರೊಂದಿಗೆ ಚರ್ಚಿಸಿದರು ಮತ್ತು ತಮ್ಮ ಕುಟುಂಬದ ಬಗ್ಗೆಯೂ ಮಾತನಾಡಿದರು. "ಸರ್ ನೀವು ನನ್ನಂತೆಯೇ ಇನ್ಕ್ರೆಡಿಬಲ್ ಇಂಡಿಯಾಗೆ ಉತ್ತಮ ಉದಾಹರಣೆ. ಬಿಹಾರ ನನ್ನ ಮೂಲ ಮತ್ತು ನನ್ನ ಪತಿ ಪಂಜಾಬ್‌ನವರು. ನಾವು ಹರಿಯಾಣದಲ್ಲಿ ಉಳಿದುಕೊಂಡಿದ್ದೇವೆ. ನಾವು ದೆಹಲಿಯಲ್ಲಿ ಅಧ್ಯಯನ ಮಾಡಿದ್ದೇವೆ. ಹಾಗಾಗಿ ನಮ್ಮ ಜೋಡಿ ಅನೇಕ ರಾಜ್ಯಗಳ ಸಂಯೋಜನೆಗೆ ಒಂದು ಉದಾಹರಣೆ ಎಂದರು.
ಇದನ್ನೂ ಓದಿ: 'ಅಪ್ಪು ಎಂದರೆ ಅಪ್ಪುಗೆ' - ಪುನೀತ್ ಜೊತೆಗಿನ ತಮ್ಮ ಒಡನಾಟ ಸ್ಮರಿಸಿದ ಹಿರಿಯ ನಟರು
ನಂತರ ಬಿಗ್ ಬಿ, ವಿವಿಧತೆಯಲ್ಲಿ ಏಕತೆ ಮತ್ತು ವಿವಿಧ ಭಾಷೆಗಳನ್ನು ಮಾತನಾಡುವ ಹಲವಾರು ಸಮುದಾಯಗಳಿಗೆ ಸೇರಿದ ನಂತರವೂ ನಾವು ಹೇಗೆ ಒಂದಾಗಿದ್ದೇವೆ ಎಂಬುದರ ಕುರಿತು ಪ್ರತಿಕ್ರಿಯಿಸಿದರು. ಜೊತೆಗೆ 'ಬಚ್ಚನ್' ಹೆಸರು ಹೇಗೆ ಬಂತು ಎಂಬುದರ ಬಗ್ಗೆ ಮಾತನಾಡಿದರು.