ಋಷಿಕೇಶ (ಉತ್ತರಾಖಂಡ್): ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಇತ್ತೀಚೆಗೆ ಬಿಡುಗಡೆಯಾದ 'ಆರ್ಆರ್ಆರ್' ಚಿತ್ರವನ್ನು ವೀಕ್ಷಿಸಿದ್ದಾರೆ. 'ಗುಡ್ ಬೈ' ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿ ಇರುವ ಬಿಗ್-ಬಿ ಬಿಡುವು ಮಾಡಿಕೊಂಡು ದಕ್ಷಿಣ ಭಾರತದ ಸೂಪರ್ಹಿಟ್ ಚಿತ್ರ 'ಆರ್ಆರ್ಆರ್' ನೋಡಿದ್ದಾರೆ.
'ಗುಡ್ ಬೈ' ಸಿನಿಮಾದ ಶೂಟಿಂಗ್ಗಾಗಿ ಅಮಿತಾಭ್ ಬಚ್ಚನ್ ಸದ್ಯ ಉತ್ತರಾಖಂಡದಲ್ಲಿದ್ದಾರೆ. ಹರಿದ್ವಾರ ಮತ್ತು ಋಷಿಕೇಶದ ವಿವಿಧ ಸ್ಥಳಗಳಲ್ಲಿ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಬುಧವಾರ ರಾತ್ರಿ 'ಆರ್ಆರ್ಆರ್' ಋಷಿಕೇಶದ ರಾಮ ಪ್ಯಾಲೇಸ್ನಲ್ಲಿ ವೀಕ್ಷಿಸಿದರು. ರಾಮ ಪ್ಯಾಲೇಸ್ಗೆ ಬಂದಾಗ ಅವರನ್ನು ಮಾಲೀಕ ಅಶೋಕ್ ಗೋಯೆಲ್ ಮತ್ತು ಪುತ್ರ ಹಿಮಾಂಶು ಗೋಯಲ್ ಸ್ವಾಗತಿಸಿದರು.
ಇದೇ ವೇಳೆ ಬಿಗ್-ಬಿ ಅವರಿಗೆ ಆರತಿ ಬೆಳಗಿ, ಕುಂಕುಮವಿಟ್ಟ ಮಹಿಳೆಯರು ಬರಮಾಡಿಕೊಂಡರು. ಚಿತ್ರ ವೀಕ್ಷಿಸಲು ರಾಮಾ ಪ್ಯಾಲೇಸ್ಗೆ ಅಮಿತಾಭ್ ಬಚ್ಚನ್ ಬಂದಿದ್ದಾರೆ ಎಂದು ವಿಷಯ ತಿಳಿದ ಅಭಿಮಾನಿಗಳು ರಾಮಾ ಪ್ಯಾಲೇಸ್ ಸುತ್ತ-ಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಇನ್ನು, ತೆಹ್ರಿ ಜಿಲ್ಲೆಯ ನರೇಂದ್ರನಗರದ ಆನಂದ ಹೋಟೆಲ್ನಲ್ಲಿ ಅಮಿತಾಭ್ ಬಚ್ಚನ್ ಉಳಿದುಕೊಂಡಿದ್ದಾರೆ. ಸರಿ ಸುಮಾರು 47 ವರ್ಷಗಳ ಬಳಿಕ ಅಮಿತಾಬ್ ಬಚ್ಚನ್ ರಿಷಿಕೇಶ್ ಮತ್ತು ಸುತ್ತ-ಮುತ್ತಲಿನ ಸ್ಥಳಗಳಲ್ಲಿ ಚಿತ್ರೀಕರಣಕ್ಕಾಗಿ ಬಂದಿದ್ದಾರೆ ಎನ್ನಲಾಗುತ್ತಿದೆ. ಮಾ.26ರಿಂದ 'ಗುಡ್ ಬೈ' ಚಿತ್ರದ ಶೂಟಿಂಗ್ ಶುರುವಾಗಿದೆ. ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದಾರೆ.
ಇದನ್ನೂ ಓದಿ: ನೆರವಿಗೆ ಬಂದ ಆತ್ಮರಕ್ಷಣೆ ಕಲೆ.. ತಡರಾತ್ರಿ ಮನೆಗೆ ನುಗ್ಗಿದ ದರೋಡೆಕೋರರನ್ನು ಹಿಮ್ಮೆಟ್ಟಿಸಿದ ಯುವತಿ!