ETV Bharat / entertainment

ನಟಿ ಶೆಹನಾಜ್ ಹೊಗಳಿದ ನಟ ರಾಘವ್ ಜುಯಲ್.. ಕಾರಣ?

author img

By

Published : Apr 17, 2023, 6:16 PM IST

ರಾಘವ್ ಜುಯಲ್ ಮತ್ತು ಬಿಗ್ ಬಾಸ್ - 13ರ ಖ್ಯಾತಿಯ ಶೆಹನಾಜ್ ಗಿಲ್ ಅವರ ಡೇಟಿಂಗ್ ವದಂತಿಗಳು ಭಾರೀ ಸದ್ದು ಮಾಡುತ್ತಿವೆ. ಈ ಮಧ್ಯೆಯೇ ರಾಘವ್ ಜುಯಲ್, ಶೆಹನಾಜ್ ಗಿಲ್ ಅವಳನ್ನು ಹೊಗಳಿದ್ದಾರೆ. ಹೌದು ರಾಘವ್ ಜುಯಲ್ ಅವರು, ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಶೆಹನಾಜ್ ತನಗೆ ತಿಳಿದಿರುವ ಶಕ್ತಿಶಾಲಿ ಹುಡುಗಿ ಹೇಗೆ ಎಂಬುದರ ಕುರಿತು ಮಾತನಾಡಿದ್ದಾರೆ.

Raghav Juyal fuels dating rumours
ನಟಿ ಶೆಹನಾಜ್​ ಹಾಗೂ ನಟ ರಾಘವ್ ಜುಯಲ್

ಹೈದರಾಬಾದ್: ಮುಂಬರುವ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದೊಂದಿಗೆ ಸಲ್ಮಾನ್ ಖಾನ್ ಗಲ್ಲಾಪೆಟ್ಟಿಗೆ ಆಳಲು ಸಿದ್ಧರಾಗಿದ್ದಾರೆ. ಈ ಚಿತ್ರದಲ್ಲಿ ಶೆಹನಾಜ್ ಗಿಲ್, ನಟ ರಾಘವ್ ಜುಯಲ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪ್ರಚಾರಗಳು ಉತ್ತುಂಗದಲ್ಲಿರುವಾಗ, ಶೆಹನಾಜ್ ಮತ್ತು ರಾಘವ್ ಅವರ ಡೇಟಿಂಗ್ ವದಂತಿಗಳು ಮಾಧ್ಯಮಗಳಲ್ಲಿ ಭಾರೀ ಸುದ್ದಿ ಮಾಡುತ್ತಿವೆ. ಇದೆಲ್ಲದರ ನಡುವೆ ರಾಘವ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ಶೆಹನಾಜ್​ಳನ್ನು ಹೊಗಳಿದ್ದಾರೆ. ರಾಘವ್ ಅವರು, ಅಸ್ತಿತ್ವದಲ್ಲಿರುವ ಅತ್ಯಂತ ಶಕ್ತಿಶಾಲಿ ಹುಡುಗಿ ಎಂದು ಅವರು ಬಣ್ಣಿಸಿದ್ದಾರೆ. ಅವಳಿಗಿಂತ ಬಲಶಾಲಿ ಯಾರೂ ಇಲ್ಲ ಎಂದೂ ಹೊಗಳಿಕೆ ವ್ಯಕ್ತಪಡಿಸಿದ್ದಾರೆ.

ಶೆಹನಾಜ್ ಮುಕ್ತ ಕಂಠದಿಂದ ಹೊಗಳಿದ ರಾಘವ್: ''ನೀವು ಕಲೆ ಪ್ರಕಾರ ಅಥವಾ ಕರಕುಶಲತೆಯಲ್ಲಿ ಪ್ರಾಮಾಣಿಕತೆ ಕಲಿಯಲು ಬಯಸಿದರೆ, ಅದು ಶೆಹನಾಜ್ ಅವರಿಂದ ಸೂಚನೆಗಳನ್ನು ಸ್ವೀಕರಿಸುವುದು ಒಳ್ಳೆಯದು. ಅವರು ಉತ್ತಮ ವ್ಯಕ್ತಿಯಾಗಿದ್ದಾರೆ'' ಎಂದು ರಾಘವ್ ಮುಂದುವರಿದು ಹೇಳಿದ್ದಾರೆ. ಅವಳು ತುಂಬಾ ಪ್ರಾಮಾಣಿಕಳು. ಪ್ರತಿದಿನ ತಮಗೆ ಸ್ಫೂರ್ತಿ ನೀಡುತ್ತಾಳೆ ಎಂದೂ ಹೇಳಿದ್ದಾರೆ.

ಅನೇಕ ಪಾತ್ರಗಳಿಂದ ತುಂಬಾ ಪ್ರಶಂಸೆ ಗಳಿಸಿದ ರಾಘವ್: ಬಾಲಿವುಡ್​ ಅಂಗಳಲ್ಲಿ ರಾಘವ್ ಜುಯಲ್, ನಿರೂಪಕ, ನರ್ತಕ ಮತ್ತು ನಟ, ಅವರ ನೃತ್ಯ ಮತ್ತು ಹೋಸ್ಟಿಂಗ್ ಸಾಮರ್ಥ್ಯಗಳಿಂದ ಖ್ಯಾತಿ ಗಳಿಸಿದ್ದಾರೆ. ಅಭಯ್ 2, ಬಹುತ್ ಹುವಾ ಸಮ್ಮಾನ್, ಸ್ಟ್ರೀಟ್ ಡ್ಯಾನ್ಸರ್ 3D ಮತ್ತು ನವಾಬ್ಜಾದೆಯಂತಹ ಚಲನಚಿತ್ರಗಳಲ್ಲಿನ ಅವರ ಅನೇಕ ಪಾತ್ರಗಳಿಂದಾಗಿಯೇ ತುಂಬಾ ಪ್ರಶಂಸೆ ಪಡೆದಿದ್ದಾರೆ.

ಇದನ್ನೂ ಓದಿ:'ಟ್ಯಾಕ್ಸಿ ಡ್ರೈವರ್​ಗೆ ಹಣ ಕೊಡದೇ ಓಡಿ ಹೋಗಿದ್ದೆ': ಕಷ್ಟದ ದಿನಗಳನ್ನು ಸ್ಮರಿಸಿದ ಸಲ್ಮಾನ್​ ಖಾನ್​​

''ಸಿದ್ನಾಜ್'' ಎಂದು ಕರೆದಿದ್ದ ಅಭಿಮಾನಿಗಳು: ಇದಕ್ಕೂ ಮೊದಲು, 2021ರಲ್ಲಿ ನಿಧನರಾದ ನಟ ಸಿದ್ಧಾರ್ಥ್ ಶುಕ್ಲಾ ಅವರೊಂದಿಗೆ ಶೆಹನಾಜ್ ಇದ್ದರು. ಕಪಿಲ್ ಶರ್ಮಾ ಅವರ ಶೋನಲ್ಲಿ, ಶೆಹನಾಜ್ ಮತ್ತು ದಿವಂಗತ ನಟ ಸಿದ್ಧಾರ್ಥ್ ಶುಕ್ಲಾ ಅವರ ಅಭಿಮಾನಿಗಳಿಗೆ ಸಂದೇಶವೊಂದನ್ನು ಕೂಡಾ ನೀಡಿದ್ದರು. ''ಸಿದ್ನಾಜ್'' ಎಂದೂ ಅವರನ್ನು ಅಭಿಮಾನಿಗಳು ಕರೆದಿದ್ದರು. ಶೆಹನಾಜ್‌ಳನ್ನು ಒಂಟಿಯಾಗಿ ಬಿಟ್ಟು ಆಕೆ ಜೀವನದಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡಿ ಎಂದು ಅಭಿಮಾನಿಗಳು ಮನವಿ ಮಾಡಿದ್ದರು.

ಇದನ್ನೂ ಓದಿ: ಭಾರತದಾದ್ಯಂತ ಪೊನ್ನಿಯಿನ್ ಸೆಲ್ವನ್ 2 ಪ್ರಚಾರ: ಪ್ರೈವೆಟ್ ಜೆಟ್​ನಲ್ಲಿ ಹೊರಟ ಚಿತ್ರತಂಡ

ಸ್ಟಾರ್ ಸ್ಟಡ್ಡ್ ಚಲನಚಿತ್ರ: ಈ ಹಿಂದೆ ಟ್ರೇಲರ್ ಬಿಡುಗಡೆ ವೇಳೆ, ಸಲ್ಮಾನ್ ಆಕೆಗೆ ಮುಂದಿನ ಜೀವನದ ಬಗ್ಗೆ ಯೋಚನೆ ಮಾಡುವಂತೆ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ನಟಿ "ತಾನು ತನ್ನ ಮುಂದಿನ ಜೀವನದ ಚಿಂತಿಸುತ್ತೇನೆ'' ಎಂದು ಉತ್ತರಿಸಿದರು. ಫರ್ಹಾದ್ ಸಾಮ್ಜಿ ನಿರ್ದೇಶನದ ಚಿತ್ರದಲ್ಲಿ ಪೂಜಾ ಹೆಗ್ಡೆ, ವೆಂಕಟೇಶ್ ದಗ್ಗುಬಾಟಿ, ಭೂಮಿಕಾ ಚಾವ್ಲಾ ಮತ್ತು ಇತರ ಪ್ರಮುಖ ನಟರು ಮಹತ್ವದ ಪಾತ್ರಗಳಲ್ಲಿ ಒಟ್ಟಿಗೆ ಬರಲಿದ್ದಾರೆ. ಸ್ಟಾರ್ ಸ್ಟಡ್ಡ್ ಚಲನಚಿತ್ರವು ಏಪ್ರಿಲ್ 21, 2023ರಂದು ಥಿಯೇಟರ್‌ಗಳಲ್ಲಿ ಪ್ರಥಮ ಪ್ರದರ್ಶನಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ: ಗೋವುಗಳೊಂದಿಗೆ ಜನ್ಮದಿನ ಆಚರಿಸಿಕೊಂಡ ರಿಷಬ್​ ಶೆಟ್ಟಿ ಪುತ್ರ: ಮುದ್ದಾದ ವಿಡಿಯೋ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.