ETV Bharat / entertainment

ಮುಂಬೈನಲ್ಲಿ ಅಮೆರಿಕನ್​ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಶೋ: ಬಾಲಿವುಡ್​​ ಸಿನಿಗಣ್ಯರು ಭಾಗಿ - ಅಮೆರಿಕನ್​ ಬ್ಯಾಕ್‌ಸ್ಟ್ರೀಟ್ ಬಾಯ್ಸ್

ಮುಂಬೈನಲ್ಲಿ ನಿನ್ನೆ ಸಂಜೆ ಅಮೆರಿಕದ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ತಂಡ ಸಂಗೀತ ಕಾರ್ಯಕ್ರಮ ನೀಡಿದ್ದು, ಕೆಲ ಬಾಲಿವುಡ್​​ ಮಂದಿ ಆಗಮಿಸಿದ್ದರು.

American Backstreet Boys performance
ಅಮೆರಿಕನ್​ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಶೋ
author img

By

Published : May 5, 2023, 12:28 PM IST

ಜನಪ್ರಿಯ ಅಮೆರಿಕನ್ ಬಾಯ್ ಬ್ಯಾಂಡ್ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಗುರುವಾರ ಮುಂಬೈನಲ್ಲಿ ಪ್ರದರ್ಶನ ನೀಡಿತು. ಈ ಸಂಗೀತ ಕಾರ್ಯಕ್ರಮಕ್ಕೆ ಬಾಲಿವುಡ್​ ಸಿನಿ ತಾರೆಯರು ಆಗಮಿಸಿದ್ದರು. ಬಾಲಿವುಡ್​​ ಫಿಟ್ನೆಸ್​ ಐಕಾನ್​​ ಮಲೈಕಾ ಅರೋರಾ, ಬಹುಬೇಡಿಕೆ ನಟಿ ಶ್ರದ್ಧಾ ಕಪೂರ್ ಸೇರಿದಂತೆ ಹಲವು ಜನಪ್ರಿಯ ಸೆಲೆಬ್ರಿಟಿಗಳು ಬ್ಯಾಕ್‌ಸ್ಟ್ರೀಟ್ ಬಾಯ್ಸ್ ತಂಡದ ಸಂಗೀತ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು. ಮಲೈಕಾ ಶ್ರದ್ಧಾ ಅಲ್ಲದೇ ಜಾಕ್ವೆಲಿನ್ ಫರ್ನಾಂಡಿಸ್, ಮೀಜಾನ್ ಜಾಫ್ರಿ, ನಟ ವರುಣ್ ಧವನ್ ಅವರ ಪತ್ನಿ ನತಾಶಾ ದಲಾಲ್, ಡಯಾನಾ ಪೆಂಟಿ ಮತ್ತು ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಕೂಡ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಲೈವ್ ಶೋ ವೀಕ್ಷಿಸಲು ಮುಂಬೈನ ಬಿಕೆಸಿಯ ಜಿಯೋ ಗಾರ್ಡನ್ಸ್‌ಗೆ ಆಗಮಿಸಿದ್ದರು. ಬಿ ಟೌನ್ ತಾರೆಗಳೆಲ್ಲರೂ ಕ್ಯಾಶುಯಲ್ ಡ್ರೆಸ್​ನಲ್ಲಿಯೂ ಕೊಲ್ಲುವ ನೋಟ ಬೀರಿದ್ದರು.

  • What cool surprise arriving at the hotel here in Mumbai India. The hotel staff had a full out Bollywood style dance prepared remixing all our songs. I guess we really do have fans all over the world. 🙏🏻 pic.twitter.com/w6QyVlFO0Y

    — Nick Carter (@nickcarter) May 3, 2023 " class="align-text-top noRightClick twitterSection" data=" ">

ಈ ಕಾರ್ಯಕ್ರಮದ ಹಲವಾರು ಚಿತ್ರಗಳು ಮತ್ತು ವಿಡಿಯೋಗಳು ಆನ್‌ಲೈನ್‌ನಲ್ಲಿ ವೈರಲ್​ ಆಗುತ್ತಿದೆ. ಐ ವಾನ್ನಾ ಬಿ ವಿತ್ ಯು ಎಂಬ ಹಿಟ್ ಗೀತೆಯೊಂದಿಗೆ ಶೋ ಆರಂಭಿಸಿದ ಅಮೆರಿಕನ್​ ತಂಡ ಸುಮಾರು ಎರಡು ಗಂಟೆಗಳ ಕಾರ್ಯಕ್ರಮ ನೀಡಿತು. ದಿ ಕಾಲ್ ಮತ್ತು ಡೋಂಟ್ ವಾಂಟ್ ಯು ಬ್ಯಾಕ್ ನಂತಹ ಹಾಡುಗಳೊಂದಿಗೆ ದೇಸಿ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಈ ತಂಡ ಯಶಸ್ವಿಯಾಯಿತು.

American Backstreet Boys performance
ಸಮಾರಂಭಕ್ಕೆ ಸಾಕ್ಷಿಯಾದ ಬಾಲಿವುಡ್​​ ಸಿನಿಗಣ್ಯರು

ಎರಡು ಗಂಟೆಗಳ ಕಾಲದ ಸಂಗೀತ ಕಾರ್ಯಕ್ರಮದ ನಡುವೆ ಅಮೆರಿಕನ್ ಬಾಯ್ ಬ್ಯಾಂಡ್‌ನ ಸದಸ್ಯ ನಿಕ್ ಕಾರ್ಟರ್ ಅವರು ಭಾರತದಲ್ಲಿರುವ ಅಭಿಮಾನಿಗಳ ಬಗ್ಗೆ ಮಾತನಾಡಿದರು. ಭಾರತದ ತಾಪಮಾನದ ಕುರಿತು ಯಾರಾದರೂ ಬ್ಯಾಂಡ್‌ಗೆ ಎಚ್ಚರಿಕೆ ನೀಡಬೇಕಿತ್ತು. ಹವಾಮಾನದ ಬಿಸಿ ಬಗ್ಗೆ ನಾನು ಮಾತನಾಡುತ್ತಿಲ್ಲ, ನಿಮ್ಮೆಲ್ಲರ ಅಭಿಮಾನ, ಜೋಶ್​ ಬಗ್ಗೆ ಮಾತನಾಡುತ್ತಿದ್ದೇನೆ. ನಾವು ಇಲ್ಲಿ ಹಲವಾರು BSB (Backstreet Boys) ಅಭಿಮಾನಿಗಳನ್ನು ಹೊಂದಿದ್ದೇವೆ ಎಂದು ನಮಗೆ ತಿಳಿದಿರಲಿಲ್ಲ. ಸದ್ಯ ನಾವು ಅದನ್ನು ನೋಡುತ್ತಿದ್ದೇವೆ. ನಾವು ನಿಮ್ಮನ್ನು, ನಿಮ್ಮ ಈ ಅಭಿಮಾನವನ್ನು ಇಷ್ಟ ಪಡುತ್ತೇವೆ. ಇದು ಭಾರತಕ್ಕೆ ನಮ್ಮ ಎರಡನೇ ಭೇಟಿ. ಭಾರತ ವಿಶೇಷವಾಗಿ ಮುಂಬೈಗೆ ಬರಲು ನಾವು ಬಹಳ ಸಮಯದಿಂದ ಕಾಯುತ್ತಿದ್ದೆವು. ಇಂದು ಸಾಕಾರವಾಯಿತು ಎಂದು ತಿಳಿಸಿದರು.

ಇದನ್ನೂ ಓದಿ: ಅಪರ್ಣಾ ಸಮಂತಾ ಪ್ರೀತಿಯಲ್ಲಿ ಜೆಕೆ.. ನಿಶ್ಚಿತಾರ್ಥ ಮಾಡಿಕೊಂಡ್ರಾ ಅಶ್ವಿನಿ ನಕ್ಷತ್ರ ಹೀರೋ?

ಸುಮಾರು 13 ವರ್ಷಗಳ ನಂತರ ಅಮೆರಿಕನ್ ಬಾಯ್ ಬ್ಯಾಂಡ್ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಭಾರತದಲ್ಲಿ ಪ್ರದರ್ಶನ ನೀಡಿದರು. ಬುಧವಾರ ಮುಂಬೈಗೆ ಬಂದಿಳಿದಿದ್ದರು. ಮುಂಬೈನ ಹೋಟೆಲ್‌ನಲ್ಲಿ ಈ ತಂಡದ ಸದಸ್ಯರಿಗೆ ಹೇಗೆ ಆತ್ಮೀಯ ಸ್ವಾಗತ ಸಿಕ್ಕಿತು ಎಂಬುದನ್ನು ತೋರಿಸುವ ವಿಡಿಯೋವನ್ನು ಬ್ಯಾಂಡ್ ಸದಸ್ಯ ನಿಕ್ ಕಾರ್ಟರ್ ಶೇರ್​ ಮಾಡಿದ್ದಾರೆ. "ಭಾರತದ ಮುಂಬೈ ಹೋಟೆಲ್‌ಗೆ ಆಗಮಿಸಿದ ಕ್ಷಣ ನಮಗೆ ಸರ್ಪ್ರೈಸ್​ ಎನಿಸಿತು. ಹೋಟೆಲ್ ಸಿಬ್ಬಂದಿ ನಮಗೆ ಸಹಕರಿಸಿದ್ದಾರೆ. ನಮ್ಮ ಎಲ್ಲ ಹಾಡುಗಳನ್ನು ರೀಮಿಕ್ಸ್ ಮಾಡಿ ಸಂಪೂರ್ಣ ಬಾಲಿವುಡ್ ಶೈಲಿಯಲ್ಲಿ ಹಾಡು, ನೃತ್ಯ ಸಿದ್ಧಪಡಿಸಿದ್ದಾರೆ. ನಾವು ನಿಜವಾಗಿಯೂ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದೇವೆ ಎಂದು ನಾನು ಭಾವಿಸುತ್ತೇನೆ" ಎಂದು ಶೇರ್ ಮಾಡಿರುವ ವಿಡಿಯೋಗೆ ನಿಕ್ ತಮ್ಮ ಅನಿಸಿಕೆ​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಜನಿ, ಶಿವರಾಜ್‌ ಕುಮಾರ್ ಅಭಿನಯದ 'ಜೈಲರ್​' ಬಿಡುಗಡೆಗೆ ಮುಹೂರ್ತ ಫಿಕ್ಸ್

ಬ್ಯಾಕ್‌ಸ್ಟ್ರೀಟ್ ಬಾಯ್ಸ್ ತಂಡದಲ್ಲಿ ಎಜೆ ಮೆಕ್ಲೀನ್, ಬ್ರಿಯಾನ್ ಲಿಟ್ರೆಲ್, ನಿಕ್ ಕಾರ್ಟರ್, ಹೋವಿ ಡೊರೊ ಮತ್ತು ಕೆವಿನ್ ರಿಚರ್ಡ್‌ಸನ್ ಇದ್ದರು. ಅವರು ತಮ್ಮ ಐದನೇ ವಿಶ್ವ ಪ್ರವಾಸದಲ್ಲಿದ್ದಾರೆ. ಈ ತಂಡ ಇಂದು ಗುರುಗ್ರಾಮ್‌ನಲ್ಲಿ ಪ್ರದರ್ಶನ ನೀಡಲು ನಿರ್ಧರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.