ETV Bharat / entertainment

ಬಾಲಿವುಡ್​ನ ಹಿರಿಯ ಚಿತ್ರಕಥೆಗಾರ ಪ್ರಯಾಗ್​ ರಾಜ್​ ನಿಧನ; ಬಿಗ್​ ಬಿ, ಅನಿಲ್​ ಕಪೂರ್​ ಸಂತಾಪ - ಅಮಿತಾಭ್​ ಬಚ್ಚನ್

Prayag Raj dies: ಬಾಲಿವುಡ್​ನ ಹಿರಿಯ ಚಿತ್ರಕಥೆಗಾರ ಪ್ರಯಾಗ್​ ರಾಜ್​ ಅವರು ವಯೋಸಹಜ ಕಾಯಿಲೆಯಿಂದ ಶನಿವಾರ ಸಂಜೆ ಬಾಂದ್ರಾ ನಿವಾಸದಲ್ಲಿ ನಿಧನರಾದರು.

Amar Akbar Anthony writer Prayag Raj dies, Anil Kapoor, Shabana Azmi and others mourn demise
ಬಾಲಿವುಡ್​ನ ಹಿರಿಯ ಚಿತ್ರಕಥೆಗಾರ ಪ್ರಯಾಗ್​ ರಾಜ್​ ನಿಧನ; ಬಿಗ್​ ಬಿ, ಅನಿಲ್​ ಕಪೂರ್​ ಸಂತಾಪ
author img

By ETV Bharat Karnataka Team

Published : Sep 24, 2023, 7:55 PM IST

ಬಾಲಿವುಡ್​ನ ಹಿರಿಯ ಚಿತ್ರಕಥೆಗಾರ (screenwriter) ಪ್ರಯಾಗ್​ ರಾಜ್​ ವಯೋಸಹಜ ಖಾಯಿಲೆಯಿಂದ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಪ್ರಯಾಗ್​ ರಾಜ್​ ಅವರು ಬಿಗ್​ ಬಿ ಅಮಿತಾಭ್​ ಬಚ್ಚನ್​ ಅವರ ಬ್ಲಾಕ್​ಬಸ್ಟರ್​ ಸಿನಿಮಾಗಳಾದ 'ಅಮರ್​ ಅಕ್ಬರ್​ ಆಂಥೋನಿ', 'ನಸೀಬ್'​ ಮತ್ತು 'ಕೂಲಿ'ಯಲ್ಲಿನ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ.

ಪ್ರಯಾಗ್​ ರಾಜ್​ ಅವರು ಶನಿವಾರ ಸಂಜೆ ಬಾಂದ್ರಾ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಅವರ ಮಗ ಆದಿತ್ಯ ತಿಳಿಸಿದ್ದಾರೆ. "ಪ್ರಯಾಗ್​ ರಾಜ್​ ಅವರು ಶನಿವಾರ ಸಂಜೆ 4 ಗಂಟೆಗೆ ಬಾಂದ್ರಾದಲ್ಲಿನ ಅವರ ನಿವಾಸದಲ್ಲಿ ನಿಧನರಾದರು. ಅವರು 8-10 ವರ್ಷಗಳಿಂದ ಹೃದ್ರೋಗ ಮತ್ತು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು" ಎಂದು ಆದಿತ್ಯ ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ.

  • I'm truly saddened by the loss of the late Prayag Raj. Working with him on "Hifazat" was a privilege. May his soul rest in peace.🙏🏻 pic.twitter.com/Al4RP7poFb

    — Anil Kapoor (@AnilKapoor) September 24, 2023 " class="align-text-top noRightClick twitterSection" data=" ">

ಬಾಂದ್ರಾದ ದಾದರ್​ನಲ್ಲಿರುವ ಶಿವಾಜಿ ಪಾರ್ಕ್​ ಚಿತಾಗಾರದಲ್ಲಿ ಭಾನುವಾರ ಬೆಳಗ್ಗೆ ಪ್ರಯಾಗ್​ ರಾಜ್​ ಅವರ ಅಂತ್ಯಕ್ರಿಯೆ ನೆರವೇರಿದೆ. ಈ ವೇಳೆ ಅವರ ಕುಟುಂಬದವರು ಮತ್ತು ಸ್ನೇಹಿತರು ಉಪಸ್ಥಿತರಿದ್ದರು.

ಪ್ರಯಾಗ್​ ರಾಜ್ ಬಗ್ಗೆ.. ಅಮಿತಾಭ್​ ಬಚ್ಚನ್​ ಅವರ ನಸೀಬ್​, ಸುಹಾಗ್​, ಕೂಲಿ ಮತ್ತು ಮರ್ದ್​ ಚಿತ್ರಗಳಿಗೆ ಕಥೆಗಳನ್ನು ಬರೆದಿರುವ ಪ್ರಯಾಗ್​ ರಾಜ್​, ಬರಹಗಾರರಾಗಿ ಮತ್ತು ಗೀತರಚನೆಕಾರರಾಗಿ ಸುಮಾರು 100ಕ್ಕೂ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ರಜನಿಕಾಂತ್​, ಬಿಗ್​ ಬಿ ಮತ್ತು ಕಮಲ್​ ಹಾಸನ್​ ಅಭಿನಯದ ಗೆರಾಫ್ತರ್​ ಚಿತ್ರಕ್ಕೂ ಇವರೇ ಕಥೆಯನ್ನು ಬರೆದಿದ್ದಾರೆ. ರಾಜೇಶ್​ ಖನ್ನಾ ಅವರ ರೋಟಿ, ಧರ್ಮೇಂದ್ರ ಮತ್ತು ಜಿತೇಂದ್ರ ಅವರ ಧರಮ್​ ವೀರ್​ ಹಾಗೂ ಅಮರ್​ ಅಕ್ಬರ್​ ಆಂಥೋನಿ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಬರಹಗಾರರಾಗಿ ಅವರ ಕೊನೆಯ ಚಿತ್ರ ದಿವಂಗತ ಎಸ್​ ರಾಮನಾಥನ್​ ನಿರ್ದೇಶಿಸಿದ 'ಜಮಾನತ್​'.

ಇದನ್ನೂ ಓದಿ: 'ಚಕ್​ ದೇ ಇಂಡಿಯಾ' ಖ್ಯಾತಿಯ ಬಾಲಿವುಡ್​ ನಟ ರಿಯೊ ಕಪಾಡಿಯಾ ನಿಧನ

ಬಿಗ್​ ಬಿ, ಅನಿಲ್​ ಕಪೂರ್​, ಶಬಾನಾ ಅಜ್ಮಿ ಸಂತಾಪ: ಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್ ಮತ್ತು ಅನಿಲ್​ ಕಪೂರ್​​ ಅವರು ಪ್ರಯಾಗ್​ ರಾಜ್​ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ಕಳೆದ ಸಂಜೆ ನಾವು ನಮ್ಮ ಶ್ರೇಷ್ಠ ಚಲನಚಿತ್ರೋದ್ಯಮದ ಮತ್ತೊಂದು ಆಧಾರ ಸ್ತಂಭವನ್ನು ಕಳೆದುಕೊಂಡಿದ್ದೇವೆ" ಎಂದು ಅಮಿತಾಭ್​ ಬಚ್ಚನ್​ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ರಾಜ್​ ಬರೆದ ಹಿಫಾಜತ್​ನಲ್ಲಿ ಕೆಲಸ ಮಾಡಿದ ಅನಿಲ್​ ಕಪೂರ್​, "ದಿಗ್ಗಜರ ನಿಧನದಿಂದ ನಾನು ದುಃಖಿತನಾಗಿದ್ದೇನೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. "ಪ್ರಯಾಗ್​ ರಾಜ್​ ಅವರ ನಿಧನದಿಂದ ನಾನು ನಿಜವಾಗಿಯೂ ದುಃಖಿತನಾಗಿದ್ದೇನೆ. ಹಿಫಾಜತ್​ನಲ್ಲಿ ಅವರೊಂದಿಗೆ ಕೆಲಸ ಮಾಡಿರುವುದು ಒಂದು ಸೌಭಾಗ್ಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಸಿನಿಮಾ ಸೆಟ್​ನಲ್ಲಿ ಪ್ರಯಾಗ್​ ರಾಜ್​ ಜೊತೆಗೆ ತೆಗೆದ ಫೋಟೋವನ್ನು ಎಕ್ಸ್​ನಲ್ಲಿ ಹಂಚಿಕೊಂಡು ಕ್ಯಾಪ್ಶನ್​ ನೀಡಿದ್ದಾರೆ.

"ಲೇಖಕ ನಿರ್ದೇಶಕ ನಟ ಪ್ರಯಾಗ್​ ರಾಜ್​ ಅವರ ನಿಧನದ ಸುದ್ದಿ ಕೇಳಿ ಬೇಸರವಾಯಿತು. RIP" ಎಂದು ಅಮರ್​ ಅಕ್ಬರ್​ ಆಂಥೋನಿ ಚಿತ್ರದ ನಟಿ ಶಬಾನಾ ಅಜ್ಮಿ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: 'ತ್ರಿ ಈಡಿಯಟ್ಸ್' ಸಿನಿಮಾ ಖ್ಯಾತಿಯ ಅಖಿಲ್​ ಮಿಶ್ರಾ ನಿಧನ: ಅಡುಗೆ ಮನೆಯಲ್ಲಿ ಕುಸಿದು ಬಿದ್ದು ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.