ETV Bharat / entertainment

ಹೆಡ್ ಬುಷ್ ಸಿನಿಮಾದ ಸುತ್ತ ವಿವಾದ: ವೀರಗಾಸೆ ಕಲಾವಿದರಿಗೆ ಅವಮಾನ ಆರೋಪ

author img

By

Published : Oct 26, 2022, 12:38 PM IST

Updated : Oct 26, 2022, 12:56 PM IST

ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಡಾಲಿ ಧನಂಜಯ್ ನಟನೆಯ ‘ಹೆಡ್ ಬುಷ್’ ಸಿನಿಮಾದಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೇ ಬೆಂಗಳೂರಿನ ಕರಗದ ಬಗ್ಗೆ ಸಹ ಹಗುರವಾದ ಪದ ಬಳಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ವೀರಗಾಸೆ ಕಲಾವಿದರಿಗೆ ಅವಮಾನ ಆರೋಪ
ಹೆಡ್ ಬುಷ್ ಸಿನಿಮಾದ ಸುತ್ತ ವಿವಾದ

ಡಾಲಿ ಧನಂಜಯ್ ಅಭಿನಯಿಸಿ ನಿರ್ಮಾಣ ಮಾಡಿರುವ ಬಹು ನಿರೀಕ್ಷಿತ 'ಹೆಡ್ ಬುಷ್' ಸಿನಿಮಾ ಬಿಡುಗಡೆ ಆಗಿ, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಷ್ಟೇ ಅಲ್ಲ, ಈ ಸಿನಿಮಾ ಬಿಡುಗಡೆ ಆದ ಮೂರೇ ದಿನಕ್ಕೆ ರಾಜ್ಯಾದ್ಯಂತ 9 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಡಾಲಿ ಸಿನಿಮಾ ಜರ್ನಿಯಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ‌. ಇದೀಗ 'ಹೆಡ್ ಬುಷ್' ಸಿನಿಮಾದ ಸುತ್ತ ವಿವಾದಗಳು ಸುತ್ತಿಕೊಂಡಿವೆ.

ವೀರಗಾಸೆ ಕಲಾವಿದರಿಗೆ ಅವಮಾನ: ಮೊದಲನೇಯದಾಗಿ ಈ ಚಿತ್ರದಲ್ಲಿ ವೀರಗಾಸೆ ಕಲಾವಿದರಿಗೆ ಅವಮಾನ‌‌ ಮಾಡಲಾಗಿದೆ‌ ಎಂದು ಆರೋಪಿಸಿ, ಸೋಷಿಯಲ್ ಮೀಡಿಯಾದಲ್ಲಿ ಹೆಡ್ ಬುಷ್ ಸಿನಿಮಾ ಬಯ್ಕಾಟ್​ ಅಭಿಯಾನ‌ ಶುರುವಾಗಿದೆ. ವೀರಗಾಸೆ ಕಲಾವಿದರು ವೀರಗಾಸೆ ಮಾಡುವಾಗ ಶೂ ಧರಿಸುವುದಿಲ್ಲ.‌ ಆದರೆ ಈ ಚಿತ್ರದಲ್ಲಿ ಶೂ ಧರಿಸಿದ್ದು, ಅಲ್ಲದೇ ಅವರನ್ನು ಹೊಡೆಯುವ ದೃಶ್ಯ ಸಹ ಇದೆ ಎಂದು ಆರೋಪ ಮಾಡಲಾಗಿದೆ. ಹಾಗಾಗಿ ನಟ ಧನಂಜಯ್​​ ವೀರಗಾಸೆ ಕಲಾವಿದರನ್ನು ಇಂದು ಭೇಟಿ ಮಾಡಿ, ಅವರ ಬಳಿ ಈ ಬಗ್ಗೆ ಸ್ಪಷ್ಟನೆ‌ ನೀಡಲಿದ್ದಾರೆ.

ಕರಗದ ಬಗ್ಗೆ ಹಗುರವಾದ ಪದ ಬಳಕೆ ಆರೋಪ: ಹೆಡ್ ಬುಷ್ ಚಿತ್ರದಲ್ಲಿ ಬೆಂಗಳೂರು ಕರಗದ ಬಗ್ಗೆ ಅಂದ್ರೆ, ದೈವದ ಬಗ್ಗೆ ಬಹಳ ಹಗುರವಾದ ಪದಗಳ ಬಳಕೆ ಮಾಡಲಾಗಿದೆಯಂತೆ. ಸಂಪ್ರದಾಯಬದ್ಧ ದೈವ ಆಚರಣೆಯನ್ನು ಚಿತ್ರದಲ್ಲಿ ಬೇಕಾಬಿಟ್ಟಿ ತೋರಿಸಲಾಗಿದೆ ಎಂದು ವಹ್ನಿಕುಲ ಕ್ಷತ್ರಿಯ ಹಾಗೂ ತಿಗಳ ಸಮುದಾಯ ಆರೋಪ ಮಾಡಿದೆ. ಈ ಕುರಿತು 'ಈಟಿವಿ ಭಾರತ' ಪ್ರತಿನಿಧಿಯೊಂದಿಗೆ ಮಾತನಾಡಿರುವ ಧರ್ಮರಾಯ ಸ್ವಾಮಿ ದೇವಸ್ಥಾನ ಹಾಗೂ ಕರಗ ಸಮಿತಿ ಅಧ್ಯಕ್ಷ ಸತೀಶ್ ಅವರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ವೀರಗಾಸೆ ಕಲಾವಿದರಿಗೆ ಅವಮಾನ ಆರೋಪ

ಇದನ್ನೂ ಓದಿ: ಬೆಂಗಳೂರು ಭೂಗತ ಲೋಕ ತೆರೆ ಮೇಲೆ.. ಡಾಲಿ ಡಾನ್ ಲುಕ್​ಗೆ ಮೆಚ್ಚುಗೆ

ಇನ್ನು, ಚಿತ್ರದಲ್ಲಿ ಯಾವ ಪದಗಳ ಬಳಕೆ ಹಾಗೂ ದೃಶ್ಯಕ್ಕೆ ಆಕ್ಷೇಪ ಅಂತ ನೋಡೋದಾದ್ರೆ.., ವಹ್ನಿಕುಲ ಕ್ಷತ್ರಿಯ ಹಾಗೂ ತಿಗಳ ಸಮುದಾಯದವರು ಬಹಳ ಶ್ರದ್ಧೆ ಹಾಗೂ ಭಕ್ತಿಯಿಂದ ಕರಗವನ್ನು ಆಚರಣೆ ಮಾಡುತ್ತಾರೆ. ಬೆಂಗಳೂರಿನ ಕರಗ ವಿಶ್ವವಿಖ್ಯಾತಿ ಪಡೆದಿದೆ. ಇಂತಹ ಕರಗದ ಬಗ್ಗೆ ಚಿತ್ರದಲ್ಲಿ "ಜುಜುಬಿ" ಕರಗ ಅಂತ ಹಗುರವಾಗಿ ಪದ ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು: ಅಲ್ಲದೇ 18 ವರ್ಷ ಯಶಸ್ವಿಯಾಗಿ ಕರಗ ಹೊತ್ತು ನಮ್ಮ ಸಮುದಾಯದಲ್ಲಿ ದೇವರ ಸ್ವರೂಪವಾಗಿದ್ದ, ಶಿವಶಂಕರ್ ಅವರನ್ನು ಏಕವಚನದಲ್ಲಿ ಅವನು, ಇವನು ಅಂತ ಪದ ಬಳಕೆ ಮಾಡಲಾಗಿದೆ. ಈ ಸಂಬಂಧ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡುವುದಾಗಿ ಧರ್ಮರಾಯ ಸ್ವಾಮಿ ದೇವಸ್ಥಾನ ಹಾಗೂ ಕರಗ ಸಮಿತಿ ಅಧ್ಯಕ್ಷ ಸತೀಶ್ ತಿಳಿಸಿದ್ದಾರೆ.

Last Updated : Oct 26, 2022, 12:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.