ETV Bharat / entertainment

ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸಲು ದೆಹಲಿಗೆ ಪ್ರಯಾಣ: ರಣ್​​ಬೀರ್​ ಜೊತೆ ಆಲಿಯಾ ಭಟ್ - ವಿಡಿಯೋ ನೋಡಿ - ಕೃತಿ ಸನೋನ್​

ಗಂಗೂಬಾಯಿ ಕಥಿಯಾವಾಡಿ ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆಯಲು ಬಾಲಿವುಡ್​ ನಟಿ ಆಲಿಯಾ ಭಟ್ ನವದೆಹಲಿ ತಲುಪಿದ್ದಾರೆ. ಬೆಳಗ್ಗೆ ಮುಂಬೈನ ಕಲಿನಾ ವಿಮಾನ ನಿಲ್ದಾಣದ ಬಳಿ ಪತಿ ರಣ್​ಬೀರ್​ ಕಪೂರ್​ ಜೊತೆ ಕಾಣಿಸಿಕೊಂಡರು.

Alia Bhatt jets off to Delhi with Ranbir Kapoor for 69th National Film Awards
ಪ್ರತಿಷ್ಟಿತ ಪ್ರಶಸ್ತಿ ಪಡೆಯಲು ದೆಹಲಿಗೆ ಪ್ರಯಾಣಿಸಿದ ಆಲಿಯಾ ಭಟ್
author img

By ETV Bharat Karnataka Team

Published : Oct 17, 2023, 12:29 PM IST

Updated : Oct 17, 2023, 12:49 PM IST

ನವದೆಹಲಿಯಲ್ಲಿಂದು 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಮೂರು ಗಂಟೆಯಿಂದ ವಿಜ್ಞಾನ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ವಿಜೇತರಿಗೆ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ನಟಿ ಆಲಿಯಾ ಭಟ್ ಅವರು ಗಂಗೂಬಾಯಿ ಕಥಿಯಾವಾಡಿ ಚಿತ್ರಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದ್ದಾರೆ. ಈ ಹಿನ್ನೆಲೆ ಬಾಲಿವುಡ್​ ಅಭಿನೇತ್ರಿ ನವದೆಹಲಿ ತಲುಪಿದ್ದಾರೆ.

ಇಂದು ಬೆಳಗ್ಗೆ ಮುಂಬೈನ ಕಲಿನಾ ವಿಮಾನ ನಿಲ್ದಾಣದ ಬಳಿ ನಟಿ ಆಲಿಯಾ ಭಟ್ ಅವರು ಕಾಣಿಸಿಕೊಂಡರು. ಸೂಪರ್ ಹಿಟ್ ಗಂಗೂಬಾಯಿ ಕಥಿಯಾವಾಡಿ ಸಿನಿಮಾದಲ್ಲಿನ ಅಮೋಘ ಅಭಿನಯಕ್ಕೆ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಬಾಲಿವುಡ್​ ಅಭಿನೇತ್ರಿ ಆಲಿಯಾ ಭಟ್​ ಸ್ವೀಕರಿಸುತ್ತಿರುವ ಚೊಚ್ಚಲ ಪ್ರಶಸ್ತಿ ಇದು. ವಿಮಾನ ನಿಲ್ದಾಣದ ಬಳಿ ಪತಿ, ಬಾಲಿವುಡ್​ ಬಹುಬೇಡಿಕೆ ನಟ ರಣ್​ಬೀರ್ ಕಪೂರ್ ಜೊತೆ ಕಾಣಿಸಿಕೊಂಡರು.

ಗಂಗೂಬಾಯಿ ಕಥಿಯಾವಾಡಿ ಚಿತ್ರದಲ್ಲಿನ ಅಭಿನಯಕ್ಕಾಗಿ ತಮ್ಮ ಮೊದಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸ್ವೀಕರಿಸಲು ಸಿದ್ಧರಾಗಿರುವ ಆಲಿಯಾ ಭಟ್‌ ಅವರಿಗಿಂದು ಮಹತ್ವದ ದಿನ. ಹಿಂದಿ ಚಿತ್ರರಂಗದಲ್ಲಿ ದಶಕ ಪೂರೈಸಿ, ಹಲವು ಹಿಟ್​ ಸಿನಿಮಾಗಳನ್ನು ನೀಡಿ ಇದೇ ಮೊದಲ ಬಾರಿಗೆ ದೇಶದ ಪ್ರತಿಷ್ಟಿತ ಪ್ರಶಸ್ತಿಯನ್ನು ಪಡೆಯಲು ಸಜ್ಜಾಗಿದ್ದಾರೆ. ಆಲಿಯಾ ಭಟ್​ ವೃತ್ತಿಜೀವನದಲ್ಲಿ ಇದೊಂದು ಮೈಲಿಗಲ್ಲು ಎಂದೇ ಹೇಳಬಹುದು.

ಆಗಸ್ಟ್‌ನಲ್ಲಿ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರನ್ನು ಪತ್ರಿಕಾಗೋಷ್ಠಿಯಲ್ಲಿ ಘೋಷಿಸಲಾಯಿತು. ಆಲಿಯಾ ಭಟ್​ ಜೊತೆ ಬಾಲಿವುಡ್​ನ ಮತ್ತೋರ್ವ ಬಹುಬೇಡಿಕೆ ನಟಿ ಕೃತಿ ಸನೋನ್​ ಕೂಡ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದ್ದಾರೆ. ಮಿಮಿ ಚಿತ್ರದಲ್ಲಿನ ಅದ್ಭುತ ಅಭಿನಯಕ್ಕೆ ಕೃತಿ ಈ ಪ್ರಶಸ್ತಿ ಪಡೆಯಲಿದ್ದಾರೆ.

ಇದನ್ನೂ ಓದಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಸಮಯ, ಸ್ಥಳ, ವಿಜೇತರು ಸೇರಿ ಸಂಪೂರ್ಣ ಮಾಹಿತಿ

ಪಾಪರಾಜಿಗಳು ರಾಲಿಯಾ ವಿಡಿಯೋ ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ. ವೈಟ್​ ಟ್ರೆಡಿಶನಲ್ ಸೂಟ್, ಹೀಲ್ಸ್ ಧರಿಸಿದ್ದ ಆಲಿಯಾ ತಮ್ಮ ಕಾರಿನಿಂದ ಹೊರಬರುತ್ತಿರುವ ವೇಳೆ ಪಾಪರಾಜಿಗಳ ಕ್ಯಾಮರಾ ಕಣ್ಣಲ್ಲಿ ಸೆರೆಯಾದರು. ಮೇಕ್​ ಅಪ್​ ಇಲ್ಲದೇ ನ್ಯಾಚುರಲ್​ ಬ್ಯೂಟಿ ಬಹು ಆಕರ್ಷಣೀಯವಾಗಿ ಕಾಣುತ್ತಿದ್ದರು. ಸಣ್ಣ ಕಿವಿಯೋಲೆ, ಬ್ಲ್ಯಾಕ್​ ಹ್ಯಾಂಡ್​ ಬ್ಯಾಗ್, ಬನ್ ಹೇರ್​ಸ್ಟೈಲ್​​​ನೊಂದಿಗೆ ಆಲಿಯಾ ಕಾಣಿಸಿಕೊಂಡಿದ್ದು, ಪಾರರಾಜಿಗಳನ್ನು ಕಂಡು ನಗು ಬೀರಿದರು. ಪತಿ ರಣ್​​​ಬೀರ್ ಕಪೂರ್ ಕೂಡ ಆಲಿಯಾ ಜೊತೆಗಿದ್ದರು. ಬ್ಲ್ಯಾಕ್​ ಡ್ರೆಸ್​ನಲ್ಲಿದ್ದ ಬಾಲಿವುಡ್​ ಬಹುಬೇಡಿಕೆ ನಟ ಪಾಪರಾಜಿಗಳಿಗೆ ಪೋಸ್ ನೀಡಿದರು.

ಇದನ್ನೂ ಓದಿ: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ದೆಹಲಿ ತಲುಪಿದ ಅಲ್ಲು ಅರ್ಜುನ್​, ರಾಜಮೌಳಿ, ಕೀರವಾಣಿ

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದ ಮಾಹಿತಿ:

ಕಾರ್ಯಕ್ರಮ ಜರುಗುವ ಸ್ಥಳ: ನವದೆಹಲಿಯ ವಿಜ್ಞಾನ ಭವನ.

ದಿನಾಂಕ: ಅಕ್ಟೋಬರ್ 17, 2023 (ಮಂಗಳವಾರ/ಇಂದು).

ಸಮಯ: ಮಧ್ಯಾಹ್ನ 3 ಗಂಟೆ.

Last Updated : Oct 17, 2023, 12:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.