ETV Bharat / entertainment

ಡೆನಿಮ್​ ಲುಕ್​ನಲ್ಲಿ ಕಂಗೊಳಿಸಿದ ಆಲಿಯಾ: ಈ ಉಡುಗೆ ಬೆಲೆ ಬರೋಬ್ಬರಿ 12 ಲಕ್ಷವಂತೆ!

author img

By

Published : May 15, 2023, 12:34 PM IST

ಐಷಾರಾಮಿ ಬ್ರಾಂಡ್​ ಆಗಿರುವ ಗುಚ್ಚಿಗೆ ಜಾಗತಿಕವಾಗಿ ಭಾರತದ ರಾಯಭಾರಿಯಾಗಿ ಆಲಿಯಾ ಭಟ್​​ ನೇಮಕಗೊಂಡಿದ್ದಾರೆ.

Alia Bhatt dressed at the airport in a dress worth Rs 12 lakh

ಮುಂಬೈ: ಬಾಲಿವುಡ್​ ನಟಿ - ನಿರ್ಮಾಪಕಿ ಆಗಿರುವ ಆಲಿಯಾ ಭಟ್​​ ಪ್ರತಿಷ್ಟಿತ ಬ್ರಾಂಡ್​ ಗುಚ್ಚಿ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂಬಂಧ ದಕ್ಷಿಣ ಕೊರಿಯಾದ ಸಿಯೋಲ್​ಗೆ ಹಾರಿದ್ದಾರೆ. ತಾಯಿಯಾದ ಬಳಿಕವೂ ತಮ್ಮ ಸ್ಟೈಲಿಶ್​ ಲುಕ್​ಗೆ ಮರಳಿರುವ ಅವರು ವಿಮಾನ ನಿಲ್ದಾಣದಲ್ಲಿ ಭಾನುವಾರ ರಾತ್ರಿ ಕಾಣಿಸಿಕೊಂಡರು. ಈ ವೇಳೆ, ನೀಲಿ ಬಣ್ಣದ ಡೆನಿಮ್​ನ ಕ್ಯಾಶುವಲ್​ ಲುಕ್​ ಎಲ್ಲರ ಮನಸು ಸೆಳೆದಿದೆ.

ವಿಮಾನ ನಿಲ್ದಾಣದಲ್ಲಿ ಕಾರಿನಿಂದ ಇಳಿದು ಆಲಿಯಾ ನೀಲಿ ಬಣ್ಣದ ಡೆನಿಮ್​ ಪ್ಯಾಂಟ್​​ಗೆ ಬಿಳಿ ಬಣ್ಣದ ಶರ್ಟ್​ ಧರಿಸಿದ್ದರು. ಇದರ ಮೇಲೆ ಮತ್ತೆ ನೀಲಿ ಬಣ್ಣದ ಡೆನಿಮ್​ ಜಾಕೆಟ್​ ಧರಿಸಿದ್ದರು. ಸಂಪೂರ್ಣವಾಗಿ ಗುಚ್ಚಿ ಬ್ರಾಂಡ್​ಗಳನ್ನು ಧರಿಸಿ, ಸಿಕ್ಕಾಪಟ್ಟೆ ಮುದ್ದು ಮುದ್ದಾಗಿ ಕಂಡು ಬಂದರು. ಜೊತೆಗೆ ತಮ್ಮ ಮೆಚ್ಚಿನ ಗುಚ್ಚಿ ಬ್ಯಾಗ್​ ಅನ್ನು ಕೂಡ ಕೈಯಲ್ಲಿ ಹಿಡಿದಿದ್ದರು. ಆಲಿಯಾ ತೊಟ್ಟ ಈ ಸಿಂಪಲ್​​ ಉಡುಗೆಯ ಬೆಲೆ 12 ಲಕ್ಷ ಅಷ್ಟೇ ಎಂಬುದು ಅಭಿಮಾನಿಗಳು ಗಮನ ಸೆಳೆದಿರುವ ಅಂಶ.

ಆಲಿಯಾ ತೊಟ್ಟ ಐವರಿ ಶರ್ಟ್​​ನ ಬೆಲೆ 2,800 ಡಾಲರ್​ ಆದರೆ, ಡೆನಿಮ್​ ಕೋಟ್​ ಬೆಲೆ 6,000 ಡಾಲರ್​ ಇನ್ನು ಅವರ ತೊಟ್ಟ ಡೆನಿಲ್​ ಕಂಫರ್ಟ್​​ ಫಿಟ್​ ಪ್ಯಾಂಟ್​ ಬೆಲೆ ಜಸ್ಟ್​ 1,150 ಡಾಲರ್​​. ಇನ್ನು ಅವರ ಕೈಯಲ್ಲಿದ್ದ ಕಂದು ಬಣ್ಣದ ಗುಚ್ಚಿ ಸಿಗ್ನೆಚರ್​​ ಬ್ಯಾಬೂ ಕಲೆಕ್ಷನ್​ನ ಬ್ಯಾಗ್​​ ಬೆಲೆ 4,700 ಡಾಲರ್​. ಈ ಎಲ್ಲ ಉಡುಗೆಗಳ ಲೆಕ್ಕವನ್ನು ಹಾಕಿದಾಗ ಅವರು ಏರ್ಪೋಟ್​ನಲ್ಲಿ ಕಂಡ ಲುಕ್​ ಬೆಲೆ ಬರೋಬ್ಬರಿ 12,76,929 ರೂ ಆಗಿದೆ.

ಗುಚ್ಚಿ ಬ್ರಾಂಡ್​​ ರಾಯಭಾರಿ: ಗುಚ್ಚಿ ಬ್ರಾಂಡ್​​ನ ರಾಯಭಾರಿಯಾಗಿ ನೇಮಕಗೊಂಡಿರುವ ಆಲಿಯಾ, ಈ ಅದ್ದೂರಿ ಸಮಾರಂಭದಲ್ಲಿ ಮೊದಲ ಬಾರಿಗೆ ಹಾಜರಾಗುತ್ತಿದ್ದಾರೆ. ಜಾಗತಿಕ ಐಷಾರಾಮಿ ಫ್ಯಾಷನ್​ ಬ್ರಾಂಡ್​ ಆಗಿರುವ ಗುಚ್ಚಿಯ ಭಾರತದ ಮೊದಲ ಜಾಗತಿಕ ರಾಯಭಾರಿಯಾಗಿ ಆಲಿಯಾ ಭಟ್​​ ನೇಮಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ದಕ್ಷಿಣ ಕೋರಿಯಾದಲ್ಲಿ ನಡೆಯುತ್ತಿರುವ ಗುಚ್ಚಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.

ರಾಹಾ ಜನನವಾದ ಬಳಿಕ ತಮ್ಮ ತಾಯ್ತನದ ಲಾಲನೆ ಪಾಲನೆಯಿಂದಾಗಿ ಆಲಿಯಾ ಕೊಂಚ ಕಾಲ ಇದರಿಂದ ದೂರವಿದ್ದರು. ಈ ಬ್ರೇಕ್​ ಬಳಿಕ ಈಗ ಅವರಯ ಮತ್ತೆ ಆ್ಯಕ್ಟಿವ್​ ಆಗಿದ್ದಾರೆ. ಅಷ್ಟೇ ಅಲ್ಲ ತಮ್ಮ ಸಿನಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲಿ ಅವರು ಕರಣ್​ ಜೋಹರ್​ ನಿರ್ದೇಶನ ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ಚಿತ್ರದಲ್ಲಿ ಆಲಿಯಾಗೆ ನಟ ರಣವೀರ್ ಸಿಂಗ್​​​​ ಜೊತೆಯಾಗಲಿದ್ದಾರೆ. ಈ ಹಿಂದೆ ಗಲ್ಲಿ ಬಾಯ್​ನಲ್ಲಿ ಆಲಿಯಾ ಭಟ್​​ ರಣವೀರ್​ ಸಿಂಗ್​ ಜೋಡಿ ಸಿಕ್ಕಾಪಟ್ಟೆ ಹಿಟ್​ ಆಗಿತ್ತು. ಇದೀಗ ಮತ್ತೊಮ್ಮೆ ಈ ಚಿತ್ರದ ಮೂಲಕ ಮೋಡಿ ಮಾಡಲು ಈ ಜೋಡಿ ಸಿದ್ದವಾಗಿದ್ದು, ಜುಲೈ 28ರಂದು ಇಬ್ಬರು ತೆರೆಮೇಲೆ ಬರಲು ಸಜ್ಜಾಗಿದ್ದಾರೆ. ಇನ್ನು ಮುದ್ದು ಮಗಳು ರಾಹಾ ಜನ್ಮಕ್ಕೂ ಮೊದಲು ರಣಬೀರ್​ ಕಪೂರ್​​​ ಜೊತೆ ನಟಿ ಆಲಿಯಾ ಭಟರ್​​ ಬ್ರಹ್ಮಾಸ್ತ್ರ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ನಿಗದಿತ ಸಮಯಕ್ಕೆ ಪ್ರಭಾಸ್​ ಅಭಿನಯದ 'ಸಲಾರ್' ಸಿನಿಮಾ ಬಿಡುಗಡೆ: ಚಿತ್ರತಂಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.