ಸ್ಯಾಂಡಲ್ವುಡ್ಗೆ ಸಾಕಷ್ಟು ಜನ ಯಂಗ್ ಹ್ಯಾಂಡ್ಸಮ್ ಹೀರೋಗಳ ಆಗಮನವಾಗುತ್ತಿದೆ. ಒಂದು ಟೈಮ್ನಲ್ಲಿ ಆ ಹೀರೋ ಎಲ್ಲರ ಫೇವರಿಟ್ ಆಗಿದ್ದರು. ಅವರ ನೃತ್ಯಕ್ಕೆ ಸೋಲದೇ ಇರೋ ಪ್ರೇಕ್ಷಕರೇ ಇರಲಿಲ್ಲ. ಹೌದು, ಕನ್ನಡದ ಸುಪ್ರೀಂಮ್ ಹೀರೋ ಆಗಿ ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದ ನಟ ಶಶಿಕುಮಾರ್. ಯಾವ ಮಟ್ಟಿಗೆ ಅಂದರೆ ಶಶಿಕುಮಾರ್ಗೆ ಫ್ಯಾನ್ ಫಾಲೋಯಿಂಗ್ ಕೂಡ ಜಾಸ್ತಿ ಇತ್ತು. ಇಂತಹ ಈ ನಾಯಕ ನಟನ ಪುತ್ರ ಅಕ್ಷಿತ್ ಶಶಿಕುಮಾರ್ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರೋದು ಗೊತ್ತಿರುವ ವಿಚಾರ. ಸೀತಾಯಾಣ ಹಾಗೂ ಓ ಮೈ ಲವ್ ಚಿತ್ರಗಳ ಮುಖಾಂತರ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹತ್ತಿರ ಆಗಿರುವ ಅಕ್ಷಿತ್ ಶಶಿಕುಮಾರ್ ಇದೀಗ ಮರ್ಡರ್ ಮಿಸ್ಟರಿ ಚಿತ್ರದೊಂದಿಗೆ ಈ ವರ್ಷ ಪ್ರೇಕ್ಷಕರ ಮುಂದೆ ಬರ್ತಾ ಇದ್ದಾರೆ.
ಖೆಯೊಸ್ ಎಂಬ ವಿಚಿತ್ರ ಟೈಟಲ್ ಸಿನಿಮಾದಲ್ಲಿ ಅಕ್ಷಿತ್ ಶಶಿಕುಮಾರ್ ಅಭಿನಯಿಸುತ್ತಿದ್ದು, ಸ್ಯಾಂಡಲ್ವುಡ್ ಬೆಡಗಿ ಅದಿತಿ ಪ್ರಭುದೇವ ಜೋಡಿಯಾಗಿದ್ದಾರೆ. ಡಾ.ಜಿ.ವಿ.ಪ್ರಸಾದ್ ಖೆಯೊಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇನ್ನು ಜಿ.ವಿ ಪ್ರಸಾದ್ ಅವರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇದೊಂದು ಮೆಡಿಕಲ್ ಕಾಲೇಜಿನಲ್ಲಿ ನಡೆಯುವ ಕಥೆ. ಆಕ್ಷನ್ ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಮರ್ಡರ್ ಮಿಸ್ಟರಿ ಜಾನರ್ ಎನ್ನಬಹುದು. ಮನಸ್ಸಿನಲ್ಲಾಗುವ ಗೊಂದಲ, ಅಸ್ತವ್ಯಸ್ತ ಇವುಗಳಿಗೆ ಖೆಯೊಸ್ ಎಂದು ಕರೆಯುತ್ತಾರಂತೆ.
ಇನ್ನು ಅಕ್ಷಿತ್ ಶಶಿಕುಮಾರ್ ಹಾಗು ಅದಿತಿ ಪ್ರಭುದೇವ ಅಲ್ಲದೇ ಶಶಿಕುಮಾರ್ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದು, ತಂದೆ, ಮಗ ಇಬ್ಬರೂ ಒಟ್ಟಿಗೆ ಅಭಿನಯಿಸಿರುವ ಮೊದಲ ಚಿತ್ರವಿದು. ಆರ್ ಕೆ ಚಂದನ್, ಸಿದ್ದು ಮೂಲಿಮನಿ ಮೊದಲಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ವಿ.ನಾಗೇಂದ್ರ ಪ್ರಸಾದ್ ಹಾಗೂ ಜಿ.ವಿ.ಪ್ರಸಾದ್ ಬರೆದಿರುವ ಮೂರು ಹಾಡುಗಳು ಚಿತ್ರದಲ್ಲಿದ್ದು, ವಿಜಯ್ ಹರಿತ್ಸ ಸಂಗೀತ ನೀಡಿದ್ದಾರೆ. ದಿಲೀಪ್ ಕುಮಾರ್, ಸಂದೀಪ್ ವಳ್ಳೂರಿ ಛಾಯಾಗ್ರಹಣ ಹಾಗೂ ಮಧು ತುಂಬಿಕೆರೆ, ವೆಂಕಿ ಯುಡಿವಿ ಸಂಕಲನವಿರುವ ಖೆಯೊಸ್ ಚಿತ್ರಕ್ಕೆ ಚೇತನ್ ಡಿಸೋಜ , ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿದೆ. HE BLACK PEBBLE ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಪಾರುಲ್ ಅಗರವಾಲ್ ಹಾಗೂ ಹೇಮಚಂದ್ರ ರೆಡ್ಡಿ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿರೋ ಖೆಯೊಸ್ ಚಿತ್ರ ಫೆಬ್ರವರಿ 17 ಚಿತ್ರ ತೆರೆಗೆ ಬರಲಿದೆ. ಈ ಸಿನಿಮಾ ಆದರು ಅಕ್ಷಿತ್ ಶಶಿಕುಮಾರ್ಗೆ ಒಳ್ಳೆ ಹೆಸರು ತಂದು ಕೊಡುತ್ತಾ ಕಾದು ನೋಡಬೇಕು.
ಕಳೆದ ವರ್ಷ ಕನ್ನಡ ಚಿತ್ರ ಲೋಕಕ್ಕೆ ಪರಿಚಿತರಾದ ಹೊಸ ಹೀರೋಗಳ ಪಟ್ಟಿಯಲ್ಲಿ ಇವರೂ ಇದ್ದರು. ಆದರೆ ಹೆಚ್ಚಿನ ಯಶಸ್ಸು ಇವರ ಚಿತ್ರಕ್ಕೆ ಸಿಕ್ಕಿರಲಿಲ್ಲ. ತಂದೆಯ ಬ್ಯಾಗೌಂಡ್ ಇದ್ದರೂ ನಟನೆ ಅಭ್ಯಾಸ ಮಾಡಿ ಸಿನಿ ಪಯಣ ಆರಂಭಿಸಿದ್ದರು. ಪ್ರಭಾಕರ್ ಅರಿಪಾಕ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಸಿತಾಯಣ ನಿರೀಕ್ಷಿತ ಯಶಸ್ಸು ನೀಡಿರಲಿಲ್ಲ. ಹಾಗೇ ನಂತರ ಬಂದ ಓ ಮೈ ಲವ್ ಕೂಡ. ಸದ್ಯ ಈ ಚಿತ್ರದಲ್ಲಿ ತಂದೆ ಮಗ ಒಟ್ಟಿಗೆ ಬಣ್ಣ ಹಚ್ಚುತ್ತಿದ್ದು ಹೆಚ್ಚಿನ ಯಶಸ್ಸನ್ನು ಎದುರು ನೋಡಲಾಗುತ್ತಿದೆ.
ಇದ್ನನೂ ಓದಿ: 'ನೆನಪಿರಲಿ ಪ್ರೇಮ್' ಪುತ್ರಿ, ಟಗರು ಪಲ್ಯ ಬೆಡಗಿಗೆ ಹುಟ್ಟುಹಬ್ಬದ ಸಂಭ್ರಮ