ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಮುಂದಿನ ಹೆಸರಿಡದ ಚಿತ್ರದ ಫಸ್ಟ್ ಲುಕ್ ಲೀಕ್ ಆಗಿದೆ. ಸೋರಿಕೆಯಾದ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರನ್ನು ಪಂಜಾಬಿ ವೇಷದಲ್ಲಿ, ಕೃಷಿ ಭೂಮಿಯಲ್ಲಿ ನಿಂತಿರುವಂತೆ, ಕಠೋರ ನೋಟದಲ್ಲಿ ಕಾಣಬಹುದು.
ಅಕ್ಷಯ್ ಕುಮಾರ್ ತಮ್ಮ ತಲೆಯ ಮೇಲೆ ಪೇಟದ(ಟರ್ಬನ್) ಜೊತೆಗೆ ಪಟ್ಟೆಯುಳ್ಳ ತಿಳಿ ನೀಲಿ ಶರ್ಟ್ ಧರಿಸಿದ್ದಾರೆ. ಇದು ಪಂಜಾಬಿ ಲುಕ್ ನೀಡುತ್ತಿದೆ. ನಟ ತನ್ನ ಪಾತ್ರಕ್ಕಾಗಿ ಗಡ್ಡ ಜೊತೆಗೆ ಕನ್ನಡಕವನ್ನು ಧರಿಸಿದ್ದಾರೆ.
ಇದನ್ನೂ ಓದಿ: ವಿಕ್ರಮ್ ಫ್ಯಾನ್ಸ್ಗೆ ಖುಷಿ ಸುದ್ದಿ.. 'ಕೋಬ್ರಾ' ಆಡಿಯೊ ಲಾಂಚ್ ಡೇಟ್ ರಿವೀಲ್
ಅಕ್ಷಯ್ ಕುಮಾರ್ ಅಭಿನಯದ ಈ ಚಿತ್ರವನ್ನು ಪೂಜಾ ಎಂಟರ್‌ಟೈನ್‌ಮೆಂಟ್ ನಿರ್ಮಿಸಲಿದೆ. ಈ ಚಿತ್ರದ ಶೀರ್ಷಿಕೆ ಇನ್ನಷ್ಟೇ ಘೋಷಣೆಯಾಗಬೇಕಿದೆ. ಬಲ್ಲ ಮೂಲಗಳ ಪ್ರಕಾರ ಚಿತ್ರದ ಶೂಟಿಂಗ್ ಲಂಡನ್‌ನಲ್ಲಿ ಪ್ರಾರಂಭವಾಗಲಿದೆ. ಚಿತ್ರ ಕಥೆ ಕಲ್ಲಿದ್ದಲು ಗಣಿಯಿಂದ ಹಿಡಿದು ರಕ್ಷಣಾ ಕಾರ್ಯಾಚರಣೆಯ ಘಟನೆಯ ಸುತ್ತ ಸುತ್ತುತ್ತದೆ. ಅಕ್ಷಯ್ ಅವರ ಈ ನೋಟವು ನಿಜಕ್ಕೂ ಕುತೂಹಲಕಾರಿಯಾಗಿದೆ.