ETV Bharat / entertainment

OMG 2 Teaser: ಅಕ್ಷಯ್​ ಕುಮಾರ್ ಅಭಿನಯದ ಓ ಮೈ ಗಾಡ್ 2 ಟೀಸರ್​ ಅನಾವರಣ - ಅಕ್ಷಯ್​ ಕುಮಾರ್ ಸಿನಿಮಾಗಳು

ಅಕ್ಷಯ್​ ಕುಮಾರ್​ ನಟನೆಯ 'ಓ ಮೈ ಗಾಡ್​​' ಟೀಸರ್​​ ಇಂದು ರಿವೀಲ್ ಆಗಿದೆ.

OMG 2 teaser out
ಓ ಮೈ ಗಾಡ್ 2 ಟೀಸರ್
author img

By

Published : Jul 11, 2023, 12:33 PM IST

2023ರ ಬಹು ನಿರೀಕ್ಷಿತ ಚಿತ್ರಗಳ ಪೈಕಿ 'OMG 2' ಕೂಡ ಒಂದು. ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್ ಮುಖ್ಯಭೂಮಿಕೆಯ ಈ ಸಿನಿಮಾ ಕುರಿತು ಪ್ರೇಕ್ಷಕರ ನಿರೀಕ್ಷೆ ಬೆಟ್ಟದಷ್ಟಿದೆ. 2011ರ ಸೂಪರ್​ ಹಿಟ್ ಚಿತ್ರ 'ಓ ಮೈ ಗಾಡ್​​'ನ ಮುಂದುವರಿದ ಭಾಗ ಇದು. ಆಗಸ್ಟ್ ತಿಂಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆಗಪ್ಪಳಿಸಲು ಸಜ್ಜಾಗಿರುವ ಈ ಚಿತ್ರದ ಟೀಸರ್​ ಇಂದು ಅನಾವರಣಗೊಂಡಿದೆ.

ಭಾನುವಾರದಂದು ಸೂಪರ್​ ಸ್ಟಾರ್ ಅಕ್ಷಯ್ ಕುಮಾರ್ ಅವರು ಚಲನಚಿತ್ರಕ್ಕೆ ಸಂಬಂಧಿಸಿದ ಸಣ್ಣ ತುಣುಕನ್ನು ಹಂಚಿಕೊಂಡಿದ್ದರು. ಭಗವಾನ್ ಶಿವನ ಪಾತ್ರದ ತಮ್ಮ ನೋಟವನ್ನು ಅನಾವರಣಗೊಳಿಸಿದ್ದರು. ಟೀಸರ್ ಬಿಡುಗಡೆ ದಿನಾಂಕವನ್ನೂ ಸಹ ಈ ಸ್ಪೆಷಲ್​ ವಿಡಿಯೋದೊಂದಿಗೆ ಬಹಿರಂಗಪಡಿಸಿದ್ದರು. ಓ ಮೈ ಗಾಡ್ 2 ಟೀಸರ್ ಜುಲೈ 11ರಂದು ಎಂಬ ಶೀರ್ಷಿಕೆಯೊಂದಿಗೆ ತಮ್ಮ ಕಿರು ವಿಡಿಯೋವನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ, ನಟ ಅಕ್ಷಯ್ ಕುಮಾರ್ ಅವರು ಶಿವನ ವೇಷದಲ್ಲಿ ಕಾಣಿಸಿಕೊಂಡಿದ್ದು, ಹಿನ್ನೆಲೆಯಲ್ಲಿ "ಹರ್ ಹರ್ ಮಹಾದೇವ್" ಸಂಗೀತ ಕೇಳಿಬಂದಿತ್ತು. ಇಂದು ಓ ಮೈ ಗಾಡ್ 2 ಟೀಸರ್ ಅನಾವರಣಗೊಳಿಸಿ ಅಭಿಮಾನಿಗಳ ಕಾಯುವಿಕೆಯನ್ನು ದೂರ ಮಾಡಿದ್ದಾರೆ. ಅಮಿತ್ ರೈ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿದೆ.

  • " class="align-text-top noRightClick twitterSection" data="">

ಅಮಿತ್ ರೈ ನಿರ್ದೇಶನದ ಓ ಮೈ ಗಾಡ್ 2 ಸಿನಿಮಾದಲ್ಲಿ ಪರೇಶ್ ರಾವಲ್, ಪಂಕಜ್ ತ್ರಿಪಾಠಿ, ಯಾಮಿ ಗೌತಮ್ ಮತ್ತು ಅರುಣ್ ಗೋವಿಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಆಗಸ್ಟ್ 11 ರಂದು ಈ ಚಿತ್ರ ಥಿಯೇಟರ್​ಗಳಲ್ಲಿ ಬಿಡುಗಡೆ ಆಗಲಿದೆ. ಅದೇ ದಿನ ಮತ್ತು ಆಗಸ್ಟ್​​ ತಿಂಗಳಲ್ಲಿ ಕೆಲ ಸಿನಿಮಾಗಳು ರಿಲೀಸ್ ಆಗಲಿದ್ದು, ಬಾಕ್ಸ್ ಆಫೀಸ್​ನಲ್ಲಿ ಸ್ಪರ್ಧೆ ಏರ್ಪಡಲಿದೆ. ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ನಟನೆಯ ಬಹುನಿರೀಕ್ಷಿತ ಚಿತ್ರ ಗದರ್ 2 ಕೂಡ ಆಗಸ್ಟ್ 11 ರಂದು ಬಿಡುಗಡೆ ಅಗಲಿದೆ. ಹಾಗಾಗಿ ಈ ಎರಡೂ ಸಿನಿಮಾಗಳು ಪೈಪೋಟಿ ನಡೆಸಲಿದ್ದು, ಪ್ರೇಕ್ಷಕರು ಯಾವ ಸಿನಿಮಾ ಸ್ವೀಕರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಸೌಂದರ್ಯ ಸ್ಪರ್ಧೆಯ ಕಿರೀಟ ಮುಡಿಗೇರಿಸಿಕೊಂಡ ತೃತೀಯಲಿಂಗಿ.. ಇತಿಹಾಸ ಸೃಷ್ಟಿಸಿದ ರಿಕ್ಕಿ

ಹೌಸ್‌ಫುಲ್ 5: ಕೆಲ ದಿನಗಳ ಹಿಂದೆ 'ಹೌಸ್‌ಫುಲ್'ನ ಮತ್ತೊಂದು ಭಾಗ ನಿರ್ಮಾಣವಾಗಲಿದೆ ಎಂದು ಘೋಷಿಸಿದ ಅಕ್ಷಯ್​ ಕುಮಾರ್​​ ಸಿನಿಮಾ ಬಿಡುಗಡೆ ದಿನಾಂಕವನ್ನೂ ಪ್ರಕಟಿಸಿದ್ದಾರೆ. ಸಾಜಿದ್ ನಾಡಿಯಾಡ್ವಾಲಾ ನಿರ್ಮಾಣದ ಈ ಸಿನಿಮಾಗೆ ನಿರ್ದೇಶಕ ಚ ಆ್ಯಕ್ಷನ್​ ಕಟ್​ ಹೇಳಲಿದ್ದಾರೆ. ಮುಂಬರುವ ದೀಪಾವಳಿ ಸಂದರ್ಭ ಚಿತ್ರಮಂದಿರಗಳಲ್ಲಿ ಹೌಸ್​ಫುಲ್​ 5 ತೆರೆಕಾಣಲಿದೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್​ ಕಿಲಾಡಿಯ ಸಿನಿಮಾಗಳು ಸೋತಿದ್ದು, ಅವರ ಮುಂದಿನ ಸಿನಿಮಾಗಳ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.

ಇದನ್ನೂ ಓದಿ: ಧೋನಿ ನಿರ್ಮಾಣದ ಮೊದಲ ಸಿನಿಮಾ 'ಎಲ್​​ಜಿಎಂ' ಟ್ರೇಲರ್​ ರಿಲೀಸ್: ಕಾರ್ಯಕ್ರಮದ ಫೋಟೋಗಳನ್ನು ನೋಡಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.