ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಬಹುನಿರೀಕ್ಷಿತ ಸೈಕಲಾಜಿಕಲ್ ಥ್ರಿಲ್ಲರ್ ಕಟ್‌ಪುಟ್ಲಿ ಸಿನಿಮಾ ಸೆಪ್ಟೆಂಬರ್ 2ರಂದು ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿದೆ. ಕಟ್‌ಪುಟ್ಲಿ ಟ್ರೈಲರ್ ಬಿಡುಗಡೆ ಆಗಿದ್ದು, ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ರಕುಲ್ ಪ್ರೀತ್ ಸಿಂಗ್, ಸರ್ಗುನ್ ಮೆಹ್ತಾ, ಚಂದ್ರಚೂಡ್ ಸಿಂಗ್, ರಂಜಿತ್ ತಿವಾರಿ, ಜಾಕಿ ಭಗ್ನಾನಿ ಮತ್ತು ದೀಪಶಿಖಾ ದೇಶಮುಖ್, ಅಕ್ಷಯ್ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಕಂಟೆಂಟ್ ಹೆಡ್ ಮತ್ತು ಹೆಚ್ಎಸ್ಮ್ ಎಂಟರ್‌ಟೈನ್‌ಮೆಂಟ್ ನೆಟ್‌ವರ್ಕ್ ಮುಖ್ಯಸ್ಥ ಗೌರವ್ ಬ್ಯಾನರ್ಜಿ ಅವರು ಕಟ್‌ಪುಟ್ಲಿ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸೈಕಲಾಜಿಕಲ್ ಥ್ರಿಲ್ಲರ್ ಕಟ್‌ಪುಟ್ಲಿ ಸಿನಿಮಾ ಟ್ರೈಲರ್ನಲ್ಲಿ, ಹಿಮಾಚಲ ಪ್ರದೇಶದ ಕಸೌಲಿ ಪ್ರದೇಶದಲ್ಲಿ ಸರಣಿ ಕೊಲೆಗಾರನನ್ನು ಪತ್ತೆ ಹಚ್ಚುವ ಕಾರ್ಯಾಚರಣೆಯಲ್ಲಿ ಪೊಲೀಸ್ ಅಧಿಕಾರಿಯಾಗಿ ನಟ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದಾರೆ. ಈ ಚಲನಚಿತ್ರವು ಹಿಂದಿನ ಸೋವಿಯತ್ ಒಕ್ಕೂಟದ ಸರಣಿ ಕೊಲೆಗಾರ ಅನಾಟೊಲಿ ಯೆಮೆಲಿಯಾನೋವಿಚ್ ಸ್ಲಿವ್ಕೊ (Anatoly Yemelianovich Slivko) ಅವರ ನಿಜ ಜೀವನದ ಕುರಿತಾಗಿದೆ. ಇದು ತಮಿಳು ಸಿನಿಮಾ Ratsasan ನ ಹಿಂದಿ ರೀಮೇಕ್ ಆಗಿದೆ.
- " class="align-text-top noRightClick twitterSection" data="">
ಇದನ್ನೂ ಓದಿ: ಅಕ್ಷಯ್ ಕುಮಾರ್ ಸಿನಿಮಾಗಳು ಫೇಲ್ಯೂರ್.. ಇದಕ್ಕೆ ನಾನೇ ಕಾರಣ, ಬದಲಾವಣೆ ಅಗತ್ಯ ಎಂದ ಸೂಪರ್ ಸ್ಟಾರ್
ರಂಜಿತ್ ಎಂ ತಿವಾರಿ ನಿರ್ದೇಶನದ ಈ ಸಿನಿಮಾಗೆ ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಅಸೀಮ್ ಅರೋರಾ ಬರೆದಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಛಾಯಾಗ್ರಾಹಕ ರಾಜೀವ್ ರವಿ ಕ್ಯಾಮರಾ ವರ್ಕ್ ಮಾಡಿದ್ದಾರೆ. ವಶು ಭಗ್ನಾನಿ, ಜಾಕಿ ಭಗ್ನಾನಿ ಮತ್ತು ದೀಪ್ಶಿಖಾ ದೇಶ್ಮುಖ್ ಅವರು ಪೂಜಾ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ.