ನಟ ಅಜಯ್ ದೇವಗನ್ ಅಭಿನಯದ, ಬಾಲಿವುಡ್ ಬಹುನಿರೀಕ್ಷಿತ ಚಿತ್ರ 'ಭೋಲಾ' ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ ಮಾರ್ಚ್ 30ರಂದು ತೆರೆ ಕಾಣಲು ಸಜ್ಜಾಗಿರುವ 'ಭೋಲಾ' ಸಿನಿಮಾ ಪ್ರಚಾರ ಬಿರುಸಿನಿಂದ ಸಾಗಿದೆ.
ಆದ್ರೆ ಬಾಲಿವುಡ್ ನಟ ಅಜಯ್ ದೇವಗನ್ ಭೋಲಾ ಪ್ರಚಾರದಿಂದ ವಿರಾಮ ತೆಗೆದುಕೊಂಡು ಟ್ವಿಟರ್ನಲ್ಲಿ ಆಸ್ಕ್ ಮಿ ಎನಿಂಥಿಂಗ್ (ask me anything, ನನಗೆ ಏನು ಬೇಕಾದರೂ ಕೇಳಿ) ಸೆಶನ್ ನಡೆಸಿದರು. ತಮ್ಮ ಮುಂಬರುವ ಚಿತ್ರ ಭೋಲಾದಿಂದ ಹಿಡಿದು ವಿವಿಧ ವಿಷಯಗಳ ಕುರಿತು ತಮ್ಮ ಅಭಿಮಾನಿಗಳೊಂದಿಗೆ ಮಾತನಾಡಿದರು. ಈ ಸೆಶನ್ನಲ್ಲಿ, ಅಜಯ್ ದೇವ್ಗನ್ ಪುತ್ರ ಯುಗ್ ಅವರ ಬಾಲಿವುಡ್ ಎಂಟ್ರಿ ಬಗ್ಗೆ ಕೇಳಲಾಯಿತು. ಅದಕ್ಕೆ ನಟ ತಮಾಷೆಯ ಉತ್ತರ ನೀಡಿದರು.
'ಸಮಯಕ್ಕೆ ಸರಿಯಾಗಿ ಊಟ ಮಾಡಲಿ....'!: ಸೋಶಿಯಲ್ ಮೀಡಿಯಾ ಬಳಕೆದಾರರು, ನಿಮ್ಮ ಮಗನನ್ನು ಸಿನಿಮಾ ಲೋಕದಲ್ಲಿ ಯಾವಾಗ ಲಾಂಚ್ ಮಾಡುತ್ತೀರಿ ಎಂದು ಅಜಯ್ ಅವರಲ್ಲಿ ಪ್ರಶ್ನಿಸಿದರು. ಸಿನಿಮಾ ಕ್ಷೇತ್ರದಲ್ಲಿ ತನ್ನ ಮಗನ ಲಾಂಚ್ ಬಗ್ಗೆ ತನಗೆ ಯಾವುದೇ ಕಲ್ಪನೆಯಿಲ್ಲ, ಆದರೆ ಈ ಸಮಯದಲ್ಲಿ ತನ್ನ ಮಗ ಸಮಯಕ್ಕೆ ಸರಿಯಾಗಿ ಊಟ ಮಾಡಿದರೆ ಅದು ತುಂಬಾ ಒಳ್ಳೆಯದು ಎಂದು ಅವರು ಹೇಳಿದರು.
-
Launch ka pata nahi, abhi toh woh sahi time pe lunch karle wahi badi baat hai https://t.co/w5MvKyECph
— Ajay Devgn (@ajaydevgn) March 14, 2023 " class="align-text-top noRightClick twitterSection" data="
">Launch ka pata nahi, abhi toh woh sahi time pe lunch karle wahi badi baat hai https://t.co/w5MvKyECph
— Ajay Devgn (@ajaydevgn) March 14, 2023Launch ka pata nahi, abhi toh woh sahi time pe lunch karle wahi badi baat hai https://t.co/w5MvKyECph
— Ajay Devgn (@ajaydevgn) March 14, 2023
1999ರ ಫೆಬ್ರವರಿಯಲ್ಲಿ ಅಜಯ್ ದೇವ್ಗನ್ ಅವರು ನಟಿ ಕಾಜೋಲ್ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿದರು. ಈ ದಂಪತಿ ಮೊದಲು ಹಲ್ಚಲ್ (Hulchul) ಸೆಟ್‌ನಲ್ಲಿ ಪರಸ್ಪರ ಭೇಟಿ ಆದರು. 1994ರಲ್ಲಿ ಡೇಟಿಂಗ್ ಪ್ರಾರಂಭಿಸಿ 1999ರಲ್ಲಿ ಮದುವೆ ಆದರು. ರಾಜು ಚಾಚಾ, ಪ್ಯಾರ್ ತೋ ಹೋನಾ ಹಿ ಥಾ, ಇಷ್ಕ್, ದಿಲ್ ಕ್ಯಾ ಕರೆ ಸೇರಿದಂತೆ ಅನೇಕ ಚಲನಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಜೋಡಿ ಕೊನೆಯದಾಗಿ 2020ರಲ್ಲಿ ತಾನ್ಹಾಜಿ: ದಿ ಅನ್‌ಸಂಗ್ ವಾರಿಯರ್‌ನಲ್ಲಿ ಸೈಫ್ ಅಲಿ ಖಾನ್ ಜೊತೆಗೆ ಒಟ್ಟಿಗೆ ಕಾಣಿಸಿಕೊಂಡರು. ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಅಜಯ್ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಯನ್ನು ಪಡೆದರು.
ಇದನ್ನೂ ಓದಿ: ನಾಟು ನಾಟು ಸಾಧನೆಗೆ ಅಮೆರಿಕನ್ ಗಾಯಕ ಪ್ರಶಂಸೆ: ಭಾವುಕರಾದ ಕೀರವಾಣಿ, RRR ತಂಡ
2003ರಲ್ಲಿ ನೈಸಾ ದೇವಗನ್ಗೆ ಕಾಜೋಲ್ ಜನ್ಮ ನೀಡಿದರು ಮತ್ತು 2010ರಲ್ಲಿ ಯುಗ್ ಅವರನ್ನು ಸ್ವಾಗತಿಸಿದರು. ಅಜಯ್ ಮತ್ತು ಕಾಜೋಲ್ ಸಾಮಾನ್ಯವಾಗಿ ತಮ್ಮ ಮಕ್ಕಳೊಂದಿಗೆ ಸಾರ್ವಜನಿಕವಾಗಿ ಗುರುತಿಸಲ್ಪಡುತ್ತಾರೆ. ದಂಪತಿ ತಮ್ಮ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಚಿತ್ರಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಯುಗ್ ಒಮ್ಮೆ ತಮ್ಮ ತಂದೆಯ ಚಲನಚಿತ್ರದ ಸೆಟ್‌ನಲ್ಲಿ ಕಾಣಿಸಿಕೊಂಡರು. ಇದು ಅವರ ಬಾಲಿವುಡ್ ಎಂಟ್ರಿ ಬಗ್ಗೆ ತಿಳಿಯಲಿಚ್ಛಿಸುವ ಅಭಿಮಾನಿಗಳ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿತು.
ಇದನ್ನೂ ಓದಿ: ಕಿಡ್ನಿ ಸಮಸ್ಯೆ, ಆಸ್ಪತ್ರೆಗೆ ದಾಖಲಾದ ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ ಖ್ಯಾತಿಯ ಶಿವಾಂಗಿ ಜೋಶಿ!
'ಭೋಲಾ' ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ಮೂಡಿಬಂದ 2019ರ ತಮಿಳು ಸೂಪರ್ ಹಿಟ್ ಸಿನಿಮಾ 'ಕೈತಿ' ರಿಮೇಕ್. ಹಿಂದಿ ರಿಮೇಕ್ ಅನ್ನು ಸ್ವತಃ ನಟ ಅಜಯ್ ದೇವಗನ್ ಅವರೇ ನಿರ್ದೇಶಿಸಿದ್ದಾರೆ. ಅಜಯ್ ಜೊತೆ ಟಬು ಕಾಣಿಸಿಕೊಳ್ಳಲಿದ್ದಾರೆ. ಇನ್ನು ಅಜಯ್ ಅವರ ಕೊನೆಯ ಚಿತ್ರ ದೃಶ್ಯಂ 2 ಸಹ ಸಾಕಷ್ಟು ಸುದ್ದಿ ಮಾಡಿ, ಹಿಟ್ ಸಾಲಿಗೆ ಸೇರಿದೆ.