ETV Bharat / entertainment

ಸೌತ್​​ನ ಮತ್ತೊಂದು ಚಿತ್ರದ ರಿಮೇಕ್​ಗೆ ಒಪ್ಪಿಕೊಂಡ ಬಾಲಿವುಡ್ ನಟ ಅಜಯ್ ದೇವಗನ್ - ನಟ ಅಜಯ್ ದೇವಗನ್ ಮುಂದಿನ ಸಿನಿಮಾಗಳು

ತಮಿಳುನಲ್ಲಿ ‘ಕೈದಿ’ ಚಿತ್ರವು ಬಾಲಿವುಡ್​ಗೆ ರಿಮೇಕ್​ ಆಗುತ್ತಿದೆ. ಅಜಯ್ ದೇವಗನ್ ಅವರು ಕಾರ್ತಿ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ 'ಬೋಲಾ' ಎಂದು ಹೆಸರಿಡಲಾಗಿದೆ. ಮಾರ್ಚ್‌ 30, 2023ರಂದು ಬಿಡುಗಡೆಯಾಗಲಿದೆ ಎಂದು ಅವರೇ ಟ್ವೀಟ್​ ಮಾಡಿದ್ದಾರೆ. ದೃಶ್ಯಂ, ಸಿಂಗಂ ಮುಂತಾದ ಸಿನಿಮಾಗಳನ್ನು ರಿಮೇಕ್​ ಮಾಡಿ ಗೆಲುವಿನ ರುಚಿ ಕಂಡಿರುವ ಅವರಿಗೆ ಈ ಚಿತ್ರವೂ ಅವರ ರಿಮೇಕ್ ಪಟ್ಟಿಗೆ ಸೇರಲಿದೆ..

Ajay Devgn announces remake of Tamil film Kaithi, title revealed

author img

By

Published : Apr 20, 2022, 1:13 PM IST

Updated : Apr 20, 2022, 1:48 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟ ಅಜಯ್ ದೇವಗನ್ ನಟಿಸಿರುವ ಬಹುನಿರೀಕ್ಷಿತ 'ರನ್‌ ವೇ 34' ಚಿತ್ರವು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ಮಾಹಿತಿ ನೀಡಿದೆ. ಇನ್ನು ಈ ಖುಷಿ ವಿಚಾರದೊಂದಿಗೆ ಅಜಯ್ ದೇವಗನ್ ತಮ್ಮ ನಟನೆಯ ಮತ್ತೊಂದು ಚಿತ್ರವನ್ನು ಘೋಷಿಸಿದ್ದಾರೆ. ಅದಕ್ಕೆ 'ಬೋಲಾ' ಎಂದು ಹೆಸರಿಡಲಾಗಿದೆ. ಮಾರ್ಚ್ 30, 2023ರಂದು ಬಿಡುಗಡೆಯಾಗಲಿದೆ ಎಂದು ಅವರೇ ಟ್ವೀಟ್​ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

'ಭೋಲಾ' ಚಿತ್ರವು ತಮಿಳಿನ ಸೂಪರ್​ ಹಿಟ್ 'ಕೈದಿ' ಚಿತ್ರದ ರಿಮೇಕ್ ಎಂದು ಹೇಳಲಾಗುತ್ತಿದೆ. ಇದೊಂದು ಆ್ಯಕ್ಷನ್​-ಡ್ರಾಮಾ ಸಿನಿಮಾ ಆಗಿದ್ದು, ಮಾರ್ಚ್ 30, 2023ರಂದು ಬಿಡುಗಡೆಯಾಗಲಿದೆಯಂತೆ. ಧರ್ಮೇಂದ್ರ ಶರ್ಮಾ ನಿರ್ದೇಶನ ಮಾಡಲಿರುವ ಈ ಚಿತ್ರದಲ್ಲಿ ಬಾಲಿವುಡ್​​ನ​ ಗ್ರೇಟ್​ ನಟಿ ಟಬು ಕೂಡ ಸೂಪರ್-ಕಾಪ್‌ನ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಸಹಜವಾಗಿ ಇದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

'ಭೋಲಾ' ಇದು ನನ್ನ ಮುಂದಿನ ಸಿನಿಮಾ. ಚಿತ್ರವು 2023 ಮಾ.30ರಂದು ಬಿಡುಗಡೆಯಾಗಲಿದೆ. ಇದನ್ನು ಲೋಕೇಶ್ ಕನಕರಾಜ್ ಬರೆದು ನಿರ್ದೇಶಿಸಿದ್ದಾರೆ ಎಂದು ದೇವಗನ್ ಟ್ವೀಟ್​​ನಲ್ಲಿ ಹೇಳಿಕೊಂಡಿದ್ದಾರೆ. ಅಜಯ್​ ದೇವಗನ್​ ಎಫ್​​ಫಿಲ್ಮ್ಸ್​, ಟಿ-ಸಿರೀಸ್​ ಫಿಲ್ಮ್ಸ್​, ರಿಲಯನ್ಸ್​ ಎಂಟರ್​ಟೇನ್​ಮೆಂಟ್ಸ್​, ಡ್ರೀಮ್​ ವಾರಿಯರ್ಸ್​ ಪಿಕ್ಚರ್ಸ್​ ಜೊತೆಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ದೃಶ್ಯಂ, ಸಿಂಗಂ ಮುಂತಾದ ಸಿನಿಮಾಗಳನ್ನು ರಿಮೇಕ್​ ಮಾಡಿ ಗೆಲುವಿನ ರುಚಿ ಕಂಡ ಅವರಿಗೆ ಈ ಚಿತ್ರವೂ ಅವರ ರಿಮೇಕ್ ಪಟ್ಟಿಗೆ ಸೇರಲಿದೆ.

ಇದನ್ನೂ ಓದಿ: 'ಕಾಣೆಯಾದವರ ಬಗ್ಗೆ ಪ್ರಕಟಣೆ' ಟ್ರೇಲರ್ ಬಿಡುಗಡೆ: ದುನಿಯಾ ‌ವಿಜಯ್,‌ ಡಾಲಿ ಧನಂಜಯ್ ಸಾಥ್

Last Updated : Apr 20, 2022, 1:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.