ETV Bharat / entertainment

ಪಠಾಣ್​ ರಿಲೀಸ್​ಗೆ ಇನ್ನೆರಡೇ ದಿನ ಬಾಕಿ: ಅಭಿಮಾನಿಗಳಿಗೆ ಶುಭಾಶಯ ಕೋರಿದ ಶಾರುಖ್​ ಖಾನ್​ - ನಟ ಶಾರುಖಾನ್​

ಇದೇ 25 ಕ್ಕೆ ಪಠಾಣ್​ ಸಿನಿಮಾ ಬಿಡುಗಡೆಯಾಗಲಿದ್ದು ಶಾರುಖ್​​ ಖಾನ್​ ತಮ್ಮ ಮನೆ ಮುಂದೆ ನೆರೆದಿದ್ದ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ.

Actor Shah Rukh Khan
ಅಭಿಮಾನಿಗಳಿಗೆ ಪ್ರತಿಕ್ರಿಯಿಸುತ್ತಿರುವ ನಟ ಶಾರುಖಾನ್​
author img

By

Published : Jan 23, 2023, 12:25 PM IST

ಮುಂಬೈ: ಅಂತು ಇಂತೂ ಹಲವು ವಿವಾದಗಳ ನಂತರ ಕಿಂಗ್​ ಖಾನ್​ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಚಿತ್ರ​ ಇನ್ನೆರಡು ದಿನಗಳಲ್ಲಿ ತೆರೆ ಮೇಲೆ ಪ್ರದರ್ಶನಗೊಳ್ಳಲು ಸಜ್ಜಾಗಿದೆ. ಬರೋಬ್ಬರಿ 4 ವರ್ಷಗಳ ಕಾಯುವಿಕೆಯ ನಂತರ ಶಾರುಖ್​​ ಖಾನ್​ ಅಭಿನಯದ ಚಿತ್ರ ತೆರೆಮೇಲೆ ಬರಲಿದೆ. ಇದಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ತೆರೆ ಮೇಲೆ ತಮ್ಮ ನೆಚ್ಚಿನ ನಟನ ಆ್ಯಕ್ಷನ್​​ ದೃಶ್ಯಗಳನ್ನು ನೋಡಲಿದ್ದಾರೆ.

ಶುಭಾಶಯ ಕೋರಿದ ಖಾನ್​: ​ಚಿತ್ರಮಂದಿರಗಳಿಗೆ ತೆರಳಲು ಇನ್ನು ಎರಡು ದಿನ ಬಾಕಿ ಇರುವಾಗಲೇ ಶಾರುಖ್​ ಖಾನ್​ ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರಿದ್ದಾರೆ. ಭಾನುವಾರ ಸಂಜೆ ಅವರ ಅಧಿಕೃತ ನಿವಾಸ ಮನ್ನತ್​ ಗ್ಯಾಲರಿಯಿಂದ ಸಂತಸದ ಶುಭಾಶಯ ಕೋರಿ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ. ಇನ್ನು ಶಾರೂಖ್​ ಖಾನ್​ ಅಭಿಮಾನಿಗಳಂತೂ ಅವರ ನಿವಾಸದ ಮುಂದೆ ಜಮಾಯಿಸಿ, ನೆಚ್ಚಿನ ನಟನೆಗೆ ಭರ್ಜರಿ ಬೆಂಬಲ ನೀಡಿದರು. ಶಾರುಖ್​ ದರ್ಶನದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷ ಎಂದರೆ ಆ ವಿಡಿಯೋದಲ್ಲಿ ನಾವು ಶಾರುಖ್​ ಖಾನ್​ ಅವರ ಸಾವಿರಾರು ಅಭಿಮಾನಿಗಳು ಮನೆಯ ಮುಂದೆ ಜಮಾಯಿಸಿದ್ದರಿಂದ, ಭಾರಿ ಜನ ಸಾಗರದ ಮಧ್ಯ ಕೆಂಪು ಕಾರೊಂದು ಸಿಲುಕಿಕೊಂಡಿತ್ತು. ಇದೀಗ ಆ ಕಾರಿನ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಸಂಚಲನ ದೃಷ್ಟಿಸಿದೆ. ಶಾರುಖ್​ ಖಾನ್​ ಶುಭಾಶಯ ಕೋರಿರುವ ವಿಡಿಯೋ ಹರಿ ಬಿಟ್ಟಿರುವ ನಡುವೆ, ಅದರಲ್ಲಿ ಈ ಕೆಂಪು ಕಾರಿನ ಕುರಿತಾಗಿ ಕಮೆಂಟ್​ ಕೂಡ ಬರೆದು ಹಾಕಿಕೊಂಡಿದ್ದಾರೆ. ಅದೇನೆಂದರೆ, " ಒಂದು ಸುಂದರವಾದ ಭಾನುವಾರದ ಸಂಜೆಗೆ ಧನ್ಯವಾದಗಳು....ಕ್ಷಮಿಸಿ ನನ್ನ ಅಭಿಮಾನಿಗಳ ನಡುವೆ ಸಿಲುಕಿಕೊಂಡ ಕಾರಿನ ಸವಾರರು ಸೀಟ್​ನ ಬೆಲ್ಟ್​ ಹಾಕಿಕೊಂಡಿರುತ್ತಾರೆಂದು ನಾನು ಭಾವಿಸಿರುತ್ತೇನೆ, ಪಠಾಣ್​ಗಾಗಿ ನಿಮ್ಮ ಟಿಕೆಟ್​ಗಳನ್ನು ಬುಕ್​ ಮಾಡಿ ಮತ್ತು ನಾನು ನಿಮ್ಮನ್ನು ಇನ್ನೊಮ್ಮೆ ಕಾಣಲಿದ್ದೇನೆ ಎಂದು" ಎಂದು ಟ್ವೀಟಿಸಿದ್ದಾರೆ.

ಮುಂದುವರಿದು, ತಮ್ಮ ಪಠಾಣ್​ ಚಿತ್ರದ ಕುರಿತು ಮಾತನಾಡಿರುವ ಅವರು, ಆದಿತ್ಯ ಚೋಪ್ರಾ ಅವರ ಮಹಾತ್ವಕಾಂಕ್ಷೆಯ ಚಿತ್ರ ಇದಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಈ ಚಿತ್ರದಲ್ಲಿ ದೊಡ್ಡ ದೊಡ್ಡ ಸೂಪರ್​ ಸ್ಟಾರಗಳಾದ ದೀಪಿಕಾ ಪಡುಕೋಣೆ, ಜಾನ್​ ಅಬ್ರಹಾಂ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಗೆ ಚಿತ್ರದಲ್ಲಿ ಡಿಂಪಲ್ ಕಪಾಡಿಯಾ ಮತ್ತು ಅಶುತೋಷ್ ರಾಣಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಜನವರಿ 25, 2023 ರಂದು ಬಿಡುಗಡೆಯಾಗಲಿದೆ.

ಇದಲ್ಲದೇ ಶಾರುಖ್​ ಖಾನ್​​​ ಅವರ ಎರಡು ನೀರೀಕ್ಷಿತ ಚಿತ್ರಗಳು ಇದೇ ವರ್ಷ ತೆರೆ ಮೇಲೇ ಅಪ್ಪಳಿಸಿಲಿವೆ. ಅವುಗಳೆಂದರೆ ಅಟ್ಲೀ ಕುಮಾರ್​ ನಿರ್ದೇಶನದ ಜವಾನ್​ ಹಾಗೂ ರಾಜ್​ಕುಮಾರ್​ ಹಿರಾನಿ ಅವರೋಂದಿಗಿನ ಡುಂಕಿ ಚಿತ್ರ. ಸದ್ಯ ಇವೆರಡು ನಿರ್ಮಾಣ ಹಂತದಲ್ಲಿದ್ದು, ಜವಾನ್​ ಜೂನ್​ 2 ರಂದು ಹಾಗೂ ಡುಂಕಿ ಡಿಸೆಂಬರ್​ 22 ರಂದು ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲಿವೆ.

ಇದನ್ನೂ ಓದಿ: OTTಯಲ್ಲಿ ಈ ವಾರ ಯಾವ ಸಿನಿಮಾ ಬಿಡುಗಡೆ? ಇಲ್ಲಿದೆ ನೋಡಿ ಡೀಟೈಲ್ಸ್..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.