ETV Bharat / entertainment

ಬಾಲಿವುಡ್​ನ ಇನ್ನೂ 4 ತಾರೆಯರಿಗೆ ಆ್ಯಕ್ಷನ್​ ಕಟ್​ ಹೇಳುವಾಸೆ: 'ಜವಾನ್​' ನಿರ್ದೇಶಕ ಅಟ್ಲೀ ಮನದಿಂಗಿತ - ಈಟಿವಿ ಭಾರತ ಕನ್ನಡ

'ಜವಾನ್​' ಬ್ಲಾಕ್​ಬಸ್ಟರ್​ ಖುಷಿಯಲ್ಲಿರುವ ನಿರ್ದೇಶಕ ಅಟ್ಲೀ, ಕೆಲವು ಬಾಲಿವುಡ್ ಸ್ಟಾರ್​​ ನಟರೊಂದಿಗೆ ಕೆಲಸ ಮಾಡಲು ಬಯಸುತ್ತಿರುವುದಾಗಿ ಹೇಳಿದ್ದಾರೆ.

Atlee
ಅಟ್ಲೀ
author img

By ETV Bharat Karnataka Team

Published : Sep 12, 2023, 4:57 PM IST

ವಿಶ್ವದಾದ್ಯಂತ 'ಜವಾನ್'​ ಸಿನಿಮಾದ ಅಬ್ಬರ ಜೋರಾಗಿದೆ. ಸೆಪ್ಟಂಬರ್​ 7ರಂದು ತೆರೆಕಂಡ ಚಿತ್ರ ನಿರೀಕ್ಷೆಗೂ ಮೀರಿ ಕಲೆಕ್ಷನ್​ ಮಾಡುವುದಲ್ಲದೇ, ದಿನಕ್ಕೊಂದು ದಾಖಲೆ ಬರೆಯುತ್ತಿದೆ. ತಮಿಳು ಖ್ಯಾತ ನಿರ್ದೇಶಕ ಅಟ್ಲೀ ಆ್ಯಕ್ಷನ್​ ಕಟ್​ಗೆ ಥಿಯೇಟರ್​ಗಳಲ್ಲಿ ಚಪ್ಪಾಳೆ, ಶಿಳ್ಳೆ ಜೋರಾಗಿದೆ. ಇದೇ ಖುಷಿಯಲ್ಲಿರುವ ನಿರ್ದೇಶಕ ಅಟ್ಲೀ ಅವರು ಕೆಲವು ಬಾಲಿವುಡ್​ ನಟರೊಂದಿಗೆ ಕೆಲಸ ಮಾಡಲು ಬಯಸುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಹಿಂದಿ ಸೂಪರ್​ಸ್ಟಾರ್​ ನಟರಿಗೆ ಆ್ಯಕ್ಷನ್ ಕಟ್​ ಹೇಳಲು ಇಚ್ಛಿಸುತ್ತಿರುವುದಾಗಿ ಹೇಳಿದ್ದಾರೆ. ​

ಯಾರು ಆ ಸೂಪರ್​ಸ್ಟಾರ್ಸ್?​: ಜವಾನ್​ ಸಿನಿಮಾದ ಮೂಲಕ ಬಾಲಿವುಡ್​ ಸೂಪರ್​ಸ್ಟಾರ್​ ಶಾರುಖ್​ ಖಾನ್​ಗೆ ಅಟ್ಲೀ ಆ್ಯಕ್ಷನ್ ಕಟ್​ ಹೇಳಿದ್ದಾರೆ. ಇತ್ತೀಚೆಗೆ ಅವರಿಗೆ ನೀವು ಬೇರೆ ಯಾವ ಬಾಲಿವುಡ್​ ನಟರೊಂದಿಗೆ ಕೆಲಸ ಮಾಡಲು ಬಯಸುತ್ತೀರಾ? ಎಂಬ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, ಖಂಡಿತಾ ನನಗೆ ಒಳ್ಳೆಯ ನಟರ ಜೊತೆ ಕೆಲಸ ಮಾಡಲು ಇಷ್ಟ ಇದೆ ಎಂಬುದಾಗಿ ಹೇಳಿದ್ದಾರೆ. ಹೆಸರನ್ನು ಬಹಿರಂಗಪಡಿಸುವಂತೆ ಕೇಳಿದಾಗ, ಅಮೀರ್​ ಖಾನ್​, ಸಲ್ಮಾನ್​ ಖಾನ್​ ಮತ್ತು ರಣ್​ವೀರ್​ ಸಿಂಗ್​ ಹಾಗೂ ಹೃತಿಕ್​ ರೋಷನ್​ ಜೊತೆ ಸಿನಿಮಾ ಮಾಡಲು ಬಯಸುತ್ತಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಬಿಡುಗಡೆಯಾದ ಮೊದಲ ದಿನವೇ ಬಾಂಗ್ಲಾದೇಶದಲ್ಲಿ 'ಜವಾನ್​' ಪ್ರದರ್ಶನ; ಶಾರುಖ್​ಗೆ ಮತ್ತೊಂದು ಯಶಸ್ಸು!

ದಾಖಲೆ ಬರೆಯುತ್ತಿರುವ 'ಜವಾನ್​': ಜವಾನ್​ ಸಿನಿಮಾ ಪ್ರತಿ ದಿನದ ಕಲೆಕ್ಷನ್​ನೊಂದಿಗೆ ಹೊಸ ಹೊಸ ದಾಖಲೆಯನ್ನು ಬರೆಯುತ್ತಿದೆ. ಮೊದಲ ದಿನವೇ 75 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ ಭಾರತದಲ್ಲಿ ಭರ್ಜರಿ ಓಪನಿಂಗ್​ ಪಡೆದ ಮೊದಲ​ ಹಿಂದಿ ಚಿತ್ರವಿದು. ಅಲ್ಲದೇ ನಾಲ್ಕನೇ ದಿನದಂದು ವಿಶ್ವದಾದ್ಯಂತ 500 ಕೋಟಿ ರೂಪಾಯಿ ಗಡಿ ದಾಟುವ ಮೂಲಕ ಅತ್ಯಂತ ವೇಗವಾಗಿ ಇಷ್ಟೊಂದು ಕಲೆಕ್ಷನ್​ ಮಾಡಿದ ಬಾಲಿವುಡ್​ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಜೊತೆಗೆ ಐದನೇ ದಿನ ಭಾರತದಲ್ಲಿ 300 ಕೋಟಿ ರೂಪಾಯಿ ಗಡಿ ದಾಟಿದೆ.

ಐದನೇ ದಿನದ ಗಳಿಕೆ: 'ಜವಾನ್​' ಸಿನಿಮಾ ಮೊದಲ ದಿನ ದೇಶದಲ್ಲಿ 75 ಕೋಟಿ ರೂಪಾಯಿ ಕಲೆಕ್ಷನ್​ನೊಂದಿಗೆ ಭರ್ಜರಿ ಓಪನಿಂಗ್​ ಪಡೆಯಿತು. ಎರಡನೇ ದಿನ ಕೊಂಚ ಕಡಿಮೆ ಎನಿಸಿದರೂ 53 ಕೋಟಿ ರೂಪಾಯಿ ಗಳಿಸಿತು. ಮೂರನೇ ದಿನ 74 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್​ ಮಾಡಿತು. ನಾಲ್ಕನೇ ದಿನ 81 ಕೋಟಿ ರೂಪಾಯಿ ಗಳಿಸಿತು. ಈವರೆಗಿನ ಅತ್ಯಧಿಕ ಕಲೆಕ್ಷನ್​ ಇದಾಗಿದೆ. ಇದೀಗ ಐದನೇ ದಿನದಂದು ಕೊಂಚ ಕುಸಿತ ಕಂಡಿದ್ದು, 28 ರಿಂದ 30 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಆರನೇ ದಿನವಾದ ಇಂದು 27.50 ಕೋಟಿ ರೂಪಾಯಿ ಗಳಿಸುವ ಸಾಧ್ಯತೆಯಿದೆ.

ಇದನ್ನೂ ಓದಿ: ಬಾಕ್ಸ್​ ಆಫೀಸ್​ನಲ್ಲಿ 8 ದಾಖಲೆ ಬರೆದ ಶಾರುಖ್​ ಖಾನ್​​ರ 'ಜವಾನ್​' ಸಿನಿಮಾ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.