ETV Bharat / entertainment

SRK Jawan: ಕಿಂಗ್​ ಖಾನ್ ನಟನೆಯ 'ಜವಾನ್​' ಸಾಂಗ್ ರಿಲೀಸ್​ಗೆ ರೆಡಿ​ - ಜವಾನ್ ಲೇಟೆಸ್ಟ್ ನ್ಯೂಸ್

ಬಹುನಿರೀಕ್ಷಿತ 'ಜವಾನ್​' ಸಿನಿಮಾ ಸಾಂಗ್​ ಶೀಘ್ರದಲ್ಲೇ ಅನಾವರಣಗೊಳ್ಳಲಿದೆ.

Jawan song release date
ಜವಾನ್​ ಸಾಂಗ್ ರಿಲೀಸ್​ ಡೇಟ್
author img

By

Published : Jul 25, 2023, 4:58 PM IST

ಬಾಲಿವುಡ್​ ಕಿಂಗ್​​ ಶಾರುಖ್​ ಖಾನ್​ ಅಭಿನಯದ ಮುಂಬರುವ ಬಹುನಿರೀಕ್ಷಿತ 'ಜವಾನ್​' ಸಿನಿಮಾದ ಪ್ರಿವ್ಯೂ ಇತ್ತೀಚೆಗಷ್ಟೇ ಅನಾವರಣಗೊಂಡು ಟ್ರೆಂಡಿಂಗ್​ನಲ್ಲಿದೆ. ಆ್ಯಕ್ಷನ್​ ದೃಶ್ಯಗಳು ಅಭಿಮಾನಿಗಳಲ್ಲಿ ಹೆಚ್ಚಿನ ಕುತೂಹಲ, ನಿರೀಕ್ಷೆಗಳನ್ನು ಹುಟ್ಟುಹಾಕಿವೆ. ಪೋಸ್ಟರ್, ಪ್ರಿವ್ಯೂನಲ್ಲಿ ಸೆಲೆಬ್ರಿಟಿಗಳ ನೋಟಕ್ಕೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಒಂದಾದ ಮೇಲೊಂದರಂತೆ ಪೋಸ್ಟರ್​ಗಳು ಅನಾವರಣಗೊಳ್ಳುತ್ತಿದ್ದು, ಜವಾನ್ ಸುತ್ತಲಿನ ಪ್ರೇಕ್ಷಕರ ಉತ್ಸಾಹವು ಹೆಚ್ಚುತ್ತಲೇ ಇದೆ. ಸದ್ಯ ಸಿನಿ ಪ್ರಿಯರ ಗಮನ ಚಿತ್ರದ ಹಾಡುಗಳ ಮೇಲಿದ್ದು, ಶೀಘ್ರವೇ ಬಿಡುಗಡೆ ಆಗಲಿದೆ ಎಂದು ವರದಿಯಾಗಿದೆ.

ಜಿಂದಾ ಬಂದಾ.. ಜವಾನ್ ಸಿನಿಮಾದ ಮೊದಲ ಸಾಂಗ್​ ಅನ್ನು ಅನಾವರಣಗೊಳಿಸಲು ಚಿತ್ರತಯಾರಕರು ಸಿದ್ಧರಾಗಿದ್ದಾರೆ ಎಂದು ವರದಿಗಳು ಹೇಳಿವೆ. ವರದಿ ಪ್ರಕಾರ, ಜಿಂದಾ ಬಂದಾ (Zinda Banda) ಶೀರ್ಷಿಕೆಯ ಹಾಡಿದು. ಸಿನಿಮಾದಲ್ಲಿ ಇದು ಅತ್ಯಂತ ಆಕರ್ಷಕ ಹಾಡು. ಈ ಹಾಡಿನಲ್ಲಿ ಶಾರುಖ್ ಖಾನ್ ಹೆಜ್ಜೆ ಹಾಕಿದ್ದು, ದೊಡ್ಡ ಮಟ್ಟದಲ್ಲಿ ಚಿತ್ರೀಕರಿಸಲಾಗಿದೆ.

ಅನಿರುಧ್ ರವಿಚಂದರ್ ಅವರ ಚೊಚ್ಚಲ ಹಿಂದಿ ಸಾಂಗ್.. ಚಿತ್ರದ ಹಾಡುಗಳ ದೃಶ್ಯಗಳು ನೋಡುಗರನ್ನು ಬೆರಗುಗೊಳಿಸಲಿವೆ ಎಂದು ಚಿತ್ರ ತಯಾರಕರು ವಿಸ್ವಾಸ ವ್ಯಕ್ತಪಡಿಸಿದ್ದಾರೆ. ಖ್ಯಾತ ಸಂಗೀತ ಸಂಯೋಜಕ ಅನಿರುಧ್ ರವಿಚಂದರ್ ಅವರು ಉತ್ತಮ ಟ್ಯೂನ್ ಹಾಕಿರುವುದರಿಂದ ಜಿಂದಾ ಬಂದಾ ಆಡಿಯೋ ಜನಪ್ರಿಯವಾಗಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. 'ಜವಾನ್' ಸಿನಿಮಾ ಸಾಂಗ್​​ ಅನಿರುಧ್ ರವಿಚಂದರ್ ಅವರ ಚೊಚ್ಚಲ ಆಲ್ಬಂ.

ಇದನ್ನೂ ಓದಿ: ಡಿಫ್ರೆಂಟ್​ ಸ್ಟೈಲ್​ನಲ್ಲಿ ರಣ್​​ವೀರ್​ ಆಲಿಯಾ ಮೋಡಿ: ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ ಡೀಟೆಲ್ಸ್ ನಿಮಗಾಗಿ

ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆ.. ವರದಿಗಳ ಪ್ರಕಾರ, ಚಿತ್ರ ತಯಾರಕರು ಹಾಡು ಬಿಡುಗಡೆ ದಿನಾಂಕವನ್ನು ಇನ್ನೂ ನಿಗದಿಪಡಿಸಿಲ್ಲ. ಆದರೆ ಚಿತ್ರದ ಮೊದಲ ಹಾಡು ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಟ್ರೇಲರ್ ಅನ್ನು ಸಹ ರೆಡಿ ಮಾಡಲಾಗಿದೆ. ಆದರೆ ಸಿನಿಮಾ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಟ್ರೇಲರ್​ ಅನ್ನು ಅನಾವರಣಗೊಳಿಸಲಾಗುತ್ತದೆ. ದೇಶೀಯ ಬಾಕ್ಸ್ ಆಫೀಸ್​ ದಾಖಲೆಗಳನ್ನು ಬ್ರೇಕ್ ಮಾಡಿ, ಅತಿ ಹೆಚ್ಚು ಹಣ ಸಂಪಾದಿಸಿದಿದ 'ಪಠಾಣ್​' ನಂತರ ಎಸ್‌ಆರ್‌ಕೆ ಅವರ ಎರಡನೇ ಸಾಹಸ ಚಿತ್ರವಾಗಿದೆ.

ಇದನ್ನೂ ಓದಿ: 'ಅಲ್ಲು ಅರ್ಜುನ್ ಸಿನಿಮಾ ನೋಡ್ತಾ ಬೆಳೆದಿದ್ದೇನೆ' ಎಂದ ಸಾಕ್ಷಿ ಫುಲ್ ಟ್ರೋಲ್! ಧೋನಿ ಪತ್ನಿ ವಯಸ್ಸು ಕೇಳಿದ ನೆಟ್ಟಿಗರು!

ಸೆಪ್ಟೆಂಬರ್ 7 ರಂದು ಸಿನಿಮಾ ತೆರೆಗೆ: ಜವಾನ್ ಶಾರುಖ್​ ಅವರ 'ರೆಡ್ ಚಿಲ್ಲೀಸ್​ ಎಂಟರ್‌ಟೈನ್‌ಮೆಂಟ್' ಅಡಿ ನಿರ್ಮಾಣವಾಗಿದ್ದು, ದಕ್ಷಿಣ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಅಟ್ಲೀ ನಿರ್ದೇಶಿಸಿದ್ದಾರೆ. ಗೌರಿ ಖಾನ್ ಮತ್ತು ಗೌರವ್ ವರ್ಮಾ ಸಹ-ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಶಾರುಖ್​ ಜೊತೆ ದೀಪಿಕಾ ಪಡುಕೋಣೆ, ನಯನತಾರಾ ಮತ್ತು ವಿಜಯ್ ಸೇತುಪತಿ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಸಿನಿಮಾ ಇದೇ ಸಾಲಿನ ಸೆಪ್ಟೆಂಬರ್ 7 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.