ETV Bharat / entertainment

ಫ್ರಾನ್ಸ್​ ಪ್ರವಾಸದಲ್ಲಿ ರಾಮ್​ಚರಣ್​ ದಂಪತಿ; ಮುಂದಿನ ವಾರ 'ಗೇಮ್​ ಚೇಂಜರ್'​ ಶೂಟಿಂಗ್​ ಪುನಾರಂಭ - ಈಟಿವಿ ಭಾರತ ಕನ್ನಡ

Ram Charan to resume Game Changer shoot: ಪತ್ನಿ ಜೊತೆ ಫ್ರಾನ್ಸ್​ ಪ್ರವಾಸದಲ್ಲಿರುವ ನಟ ರಾಮ್​ಚರಣ್​ ಮುಂದಿನ ವಾರದಿಂದ 'ಗೇಮ್​ ಚೇಂಜರ್'​ ಶೂಟಿಂಗ್​ ಪುನಾರಂಭಿಸಲಿದ್ದಾರೆ.

Game Changer
ರಾಮ್​ಚರಣ್​
author img

By ETV Bharat Karnataka Team

Published : Sep 9, 2023, 10:03 AM IST

'ಆರ್​ಆರ್​ಆರ್'​ ಖ್ಯಾತಿಯ ನಟ ರಾಮ್​ಚರಣ್​ ಕೈಯಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳಿವೆ. ಈ ಬ್ಯುಸಿ ಶೆಡ್ಯೂಲ್​ ಮಧ್ಯೆಯೂ ಕೊಂಚ ಬ್ರೇಕ್​ ತೆಗದುಕೊಂಡು ಪತ್ನಿ ಉಪಾಸನಾ ಕಾಮಿನೇನಿ ಜೊತೆ ಫ್ರಾನ್ಸ್​ ಪ್ರವಾಸ ಕೈಗೊಂಡಿದ್ದಾರೆ. ತಮ್ಮ ಪುಟ್ಟ ಮಗಳು ಕ್ಲಿನ್ ಕಾರ ಹುಟ್ಟಿದ ನಂತರ ದಂಪತಿಯ ಮೊದಲ ಟ್ರಿಪ್​ ಇದಾಗಿದೆ. ಫ್ರೆಂಚ್​ನ ವೈನ್​, ಚೀಸ್​ ಮತ್ತು ಕೆಲವು ಸುಂದರವಾದ ಪ್ರದೇಶಗಳಲ್ಲಿ ರಾಮ್​ಚರಣ್​ ದಂಪತಿ ಮಗಳ ಜೊತೆ ಸುತ್ತಾಡಿದ್ದಾರೆ.

ರಾಮ್​ಚರಣ್​ ಕೆಲಸದ ಒತ್ತಡಗಳು, ಬ್ಯುಸಿ ಶೆಡ್ಯೂಲ್​ ನಡುವೆಯೂ ಫ್ಯಾಮಿಲಿಗೆಂದು ಸಮಯವನ್ನು ಮೀಸಲಿಡುತ್ತಾರೆ. ಅವರ ಮುಂದಿನ ಯೋಜನೆಯಾದ 'ಗೇಮ್​ ಚೇಂಜರ್' ಶೂಟಿಂಗ್​ ಪ್ರಾರಂಭಕ್ಕೂ ಮುನ್ನವೇ ಹೆಂಡತಿ ಮತ್ತು ಮಗಳ ಜೊತೆ ಸುಂದರ ಕ್ಷಣವನ್ನು ಆನಂದಿಸಿದ್ದಾರೆ. ಫ್ರಾನ್ಸ್​ ಪ್ರವಾಸಕ್ಕೆ ತೆರಳಿ ಎಲ್ಲಾ ಕಡೆ ಸುತ್ತಾಡಿದ್ದಾರೆ. ಅಲ್ಲೇ ಒಂದು ಮದುವೆ ಕಾರ್ಯಕ್ರಮದಲ್ಲೂ ದಂಪತಿ ಭಾಗಿಯಾಗಿದ್ದಾರೆ. ರಾಮ್​ಚರಣ್​ ತಮ್ಮ ಅತ್ಯುತ್ತಮ ಸಮಯವನ್ನು ಫ್ಯಾಮಿಲಿ ಜೊತೆ ಕಳೆದಿದ್ದಾರೆ.

ಮುಂದಿನ ವಾರ 'ಗೇಮ್​ ಚೇಂಜರ್'​ ಶೂಟಿಂಗ್​ ಶುರು: ಮಾಧ್ಯಮ ವರದಿಗಳ ಪ್ರಕಾರ, ನಟ ರಾಮ್​ಚರಣ್​ ಮುಂದಿನ ವಾರ ಭಾರತಕ್ಕೆ ಮರಳುವ ನಿರೀಕ್ಷೆಯಿದೆ. ಸೆಪ್ಟಂಬರ್​ 13 ರಂದು ಹೈದರಾಬಾದ್​ನಲ್ಲಿ ಅರ್ಧಕ್ಕೆ ನಿಂತಿರುವ 'ಗೇಮ್​ ಚೇಂಜರ್' ಚಿತ್ರದ ಶೂಟಿಂಗ್​ ಪ್ರಾರಂಭವಾಗಲಿದೆ. ಶಂಕರ್​ ನಿರ್ದೇಶನದ ಈ ಚಿತ್ರವು ಹೈ- ಆಕ್ಟೇನ್​ ಆ್ಯಕ್ಷನ್​ ಥ್ರಿಲ್ಲರ್​ ಆಗಲಿದೆ. ಗೇಮ್​ ಚೇಂಜರ್​ನ ಸಂಪೂರ್ಣ ಶೂಟಿಂಗ್​ ವೇಳಾಪಟ್ಟಿಯು ನವೆಂಬರ್​ 2023ರ ವೇಳೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ: ರಾಮ್ ​ಚರಣ್ ಪುತ್ರಿಗೆ ಬಂಗಾರದ ಉಡುಗೊರೆ ಕೊಟ್ಟ ಜೂ. ಎನ್​ಟಿಆರ್​, ಅಲ್ಲು ಅರ್ಜುನ್

ಶಂಕರ್ ಆ್ಯಕ್ಷನ್​ ಕಟ್​ ಹೇಳುತ್ತಿರುವ 'ಗೇಮ್ ಚೇಂಜರ್' ಸೆಟ್ಟೇರಿ ಬಹುಸಮಯವಾಗಿದೆ. ನಿರ್ಮಾಣ ಹಂತದಲ್ಲಿರುವ 'ಗೇಮ್ ಚೇಂಜರ್​' ಅಪ್​​ಡೇಟ್ಸ್​ಗೆ ಅಭಿಮಾನಿಗಳು ಕಾತರರಾಗಿದ್ದಾರೆ. ಇದೀಗ ಸದ್ಯದ ಮಾಹಿತಿ ಪ್ರಕಾರ ಚಿತ್ರದ ಶೂಟಿಂಗ್​ ಮುಂದಿನ ವಾರದಿಂದ ಪ್ರಾರಂಭವಾಗಲಿದೆ. ಸಿನಿಮಾದಲ್ಲಿ ರಾಮ್​ಚರಣ್​ಗೆ ನಾಯಕಿಯಾಗಿ ಬಾಲಿವುಡ್​ ನಟಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳಲಿದ್ದಾರೆ. 2019 ರಲ್ಲಿ ತೆರೆಕಂಡ ವಿನಯ ವಿಧೇಯ ರಾಮ ಸಿನಿಮಾದಲ್ಲಿ ಮೊದಲ ಬಾರಿ ತೆರೆ ಹಂಚಿಕೊಂಡಿದ್ದರು. ಗೇಮ್​ ಚೇಂಜರ್ ಈ ಜೋಡಿಯ ಎರಡನೇ ಸಿನಿಮಾ. ಆನ್​ ಸ್ಕ್ರೀನ್​​ನಲ್ಲಿ ಈ ಜೋಡಿಯ ಕೆಮಿಸ್ಟ್ರಿ ಅದ್ಭುತವಾಗಿದ್ದರೆ, ಆಫ್​ ಸ್ಕ್ರೀನ್​ನಲ್ಲೂ ಉತ್ತಮ ಸ್ನೇಹಿತರಾಗಿ ಮುಂದುವರಿದಿದ್ದಾರೆ.

ಪ್ರತಿಭಾವಂತ ನಿರ್ದೇಶಕ ಶಂಕರ್ ಮತ್ತು ನಟ ರಾಮ್ ಚರಣ್ ಅವರೊಂದಿಗೆ ಕೆಲಸ ಮಾಡುವ ಬಗ್ಗೆ ಈ ಹಿಂದೆ ಕಿಯಾರಾ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ್ದರು. ಈ ಸಿನಿಮಾ ನನಗೆ ಅಮೂಲ್ಯ ಕಲಿಕೆಯ ಅನುಭವ ನೀಡಲಿದೆ ಎಂದು ತಿಳಿಸಿದ್ದರು. ಈ ಪ್ರಾಜೆಕ್ಟ್​​ ನಟಿಗೆ ಬಹಳ ಪ್ರಮುಖವಾಗಿದೆ. ಏಕೆಂದರೆ ಇದು ನಟಿಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಪ್ರಾದೇಶಿಕ ಗಡಿ ಮೀರಿ ಜನಪ್ರಿಯತೆ ಹೆಚ್ಚಿಸಿಕೊಳ್ಳಲಿದ್ದಾರೆ. ಇನ್ನು, ರಾಮ್ ಚರಣ್ ಸಿನಿಮಾ ಬಗ್ಗೆ ಕುತೂಹಲ, ನಿರೀಕ್ಷೆ ಬೆಟ್ಟದಷ್ಟಿದೆ. ಆರ್​ಆರ್​ಆರ್​ ಸಿನಿಮಾದ ಅದ್ಭುತ ಯಶಸ್ಸಿನ ನಂತರ ನಟಿಸುತ್ತಿರುವ ಚಿತ್ರವಿದು.

ಇದನ್ನೂ ಓದಿ: ಪುತ್ರಿ ಕ್ಲಿನ್ ಕಾರಾ ಜೊತೆಗೆ ಮೊದಲ ವರಲಕ್ಷ್ಮಿ ವೃತ ಆಚರಿಸಿದ ರಾಮ್ ಚರಣ್ ಪತ್ನಿ ಉಪಾಸನಾ...

ETV Bharat Logo

Copyright © 2024 Ushodaya Enterprises Pvt. Ltd., All Rights Reserved.