2022ರ ಟಾಲಿವುಡ್ ಬ್ಲಾಕ್‌ಬಸ್ಟರ್ ಆರ್‌ಆರ್‌ಆರ್ ಸಿನಿಮಾದ 'ನಾಟು ನಾಟು'ಗೆ ಅತ್ಯುತ್ತಮ ಮೂಲ ಗೀತೆಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಂದಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಬುಧವಾರ ಸಿನಿಮಾ ತಂಡವನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದು, ಚರ್ಚೆಗೆ ಕಾರಣವಾಗಿದೆ. ಬಾಲಿವುಡ್ ಗಾಯಕ ಅದ್ನಾನ್ ಸಮಿ ಅವರು ಜಗನ್ ಮೋಹನ್ ರೆಡ್ಡಿಯವರ 'ತೆಲುಗು ಧ್ವಜ' ಎಂಬ ಪದವನ್ನು ಬಳಸಿದ್ದಕ್ಕಾಗಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
-
The #Telugu flag is flying high! On behalf of all of #AndhraPradesh, I congratulate @mmkeeravaani, @ssrajamouli, @tarak9999, @AlwaysRamCharan and the entire team of @RRRMovie. We are incredibly proud of you! #GoldenGlobes2023 https://t.co/C5f9TogmSY
— YS Jagan Mohan Reddy (@ysjagan) January 11, 2023 " class="align-text-top noRightClick twitterSection" data="
">The #Telugu flag is flying high! On behalf of all of #AndhraPradesh, I congratulate @mmkeeravaani, @ssrajamouli, @tarak9999, @AlwaysRamCharan and the entire team of @RRRMovie. We are incredibly proud of you! #GoldenGlobes2023 https://t.co/C5f9TogmSY
— YS Jagan Mohan Reddy (@ysjagan) January 11, 2023The #Telugu flag is flying high! On behalf of all of #AndhraPradesh, I congratulate @mmkeeravaani, @ssrajamouli, @tarak9999, @AlwaysRamCharan and the entire team of @RRRMovie. We are incredibly proud of you! #GoldenGlobes2023 https://t.co/C5f9TogmSY
— YS Jagan Mohan Reddy (@ysjagan) January 11, 2023
ಜಗನ್ ರೆಡ್ಡಿ ಟ್ವೀಟ್ ಏನಾಗಿತ್ತು?: 'ತೆಲುಗು ಬಾವುಟವು ಎತ್ತರಕ್ಕೆ ಹಾರುತ್ತಿದೆ. ಇಡೀ ತಂಡವನ್ನು ನಾನು ಅಭಿನಂದಿಸುತ್ತೇನೆ. ನಿಮ್ಮ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ.' ಎಂದು ರೆಡ್ಡಿ ಟ್ವೀಟಿಸಿದ್ದರು. ಈ ಟ್ವೀಟ್ ಟೀಕಿಸಿರುವ ಅದ್ನಾನ್ ಸಮಿ, ಮುಖ್ಯಮಂತ್ರಿಯವರ ಪದಗಳ ಆಯ್ಕೆಯನ್ನು ಪ್ರಶ್ನಿಸಿದ್ದಾರೆ. ಅವರು ಭಾರತೀಯ ಧ್ವಜವನ್ನು ಬಳಸಬೇಕಿತ್ತು ಎಂದಿದ್ದಾರೆ. ಜಗನ್ ಪ್ರತ್ಯೇಕತಾವಾದಿ ಧೋರಣೆ ಹೊಂದಿದ್ದಾರೆ ಎಂದು ದೂರಿದ್ದಾರೆ.
-
Telugu flag? You mean INDIAN flag right? We are Indians first & so kindly stop separating yourself from the rest of the country…Especially internationally, we are one country!
— Adnan Sami (@AdnanSamiLive) January 11, 2023 " class="align-text-top noRightClick twitterSection" data="
This ‘separatist’ attitude is highly unhealthy as we saw in 1947!!!
Thank you…Jai HIND!🇮🇳 https://t.co/rE7Ilmcdzb
">Telugu flag? You mean INDIAN flag right? We are Indians first & so kindly stop separating yourself from the rest of the country…Especially internationally, we are one country!
— Adnan Sami (@AdnanSamiLive) January 11, 2023
This ‘separatist’ attitude is highly unhealthy as we saw in 1947!!!
Thank you…Jai HIND!🇮🇳 https://t.co/rE7IlmcdzbTelugu flag? You mean INDIAN flag right? We are Indians first & so kindly stop separating yourself from the rest of the country…Especially internationally, we are one country!
— Adnan Sami (@AdnanSamiLive) January 11, 2023
This ‘separatist’ attitude is highly unhealthy as we saw in 1947!!!
Thank you…Jai HIND!🇮🇳 https://t.co/rE7Ilmcdzb
ಅದ್ನಾನ್ ಸಮಿ ಅತೃಪ್ತಿ: 'ತೆಲುಗು ಧ್ವಜವೇ? ನಾವು ಮೊದಲು ಭಾರತೀಯರು. ದಯವಿಟ್ಟು ದೇಶದ ಇತರ ಭಾಗಗಳಿಂದ ನಿಮ್ಮನ್ನು ನೀವು ಬೇರ್ಪಡಿಸುವುದನ್ನು ನಿಲ್ಲಿಸಿ. ವಿಶೇಷವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ, ನಾವು ಒಂದೇ ದೇಶವಾಗಿದ್ದೇವೆ. 1947ರಲ್ಲಿ ನಾವು ಕಂಡಂತೆ ಈ 'ಪ್ರತ್ಯೇಕತಾವಾದಿ' ಧೋರಣೆ ಅತ್ಯಂತ ಅನಾರೋಗ್ಯಕರ. ಜೈ ಹಿಂದ್' ಎಂದು ತಮ್ಮ ಅದ್ನಾನ್ ಸಮಿ ಟ್ವೀಟ್ ಮಾಡಿದ್ದಾರೆ.
ಟ್ವಿಟರ್ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ: ಸಮಿ ಅವರ ಟ್ವೀಟ್ ನಂತರ ಟ್ವಿಟರ್ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆ ಹರಿದು ಬಂದಿದೆ. ಹಲವಾರು ಬಳಕೆದಾರರು ಗಾಯಕನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ನಾವು ಭಾರತ ಮತ್ತು ತೆಲುಗಿನ ಬಗ್ಗೆಯೂ ಹೆಮ್ಮೆ ಪಡಬಹುದು. ಇದರಲ್ಲಿ ಪ್ರತ್ಯೇಕತಾವಾದ ಏನೂ ಇಲ್ಲ' ಎಂದು ಕೆಲವರು ತಿಳಿಸಿದ್ದಾರೆ.
ಆರ್‌ಆರ್‌ಆರ್‌ಗೆ ಗೋಲ್ಡನ್ ಗ್ಲೋಬ್: ದೇಶದ ಖ್ಯಾತ ಸಿನಿಮಾ ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡು ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ 2023ರ ಅತ್ಯುತ್ತಮ ಮೂಲ (ಸ್ವತಂತ್ರ ರಚನೆ) ಹಾಡು ಪ್ರಶಸ್ತಿ ಸಂದಿದೆ. ಚಿತ್ರ ದೇಶ, ವಿದೇಶಗಳಲ್ಲಿ ಸೂಪರ್ ಹಿಟ್ ಆಗಿತ್ತು. ಭಾರತ ಮಾತ್ರವಲ್ಲ, ವಿದೇಶದ ಥಿಯೇಟರ್ಗಳಲ್ಲಿಯೂ ಧೂಳೆಬ್ಬಿಸಿತ್ತು.
ದಕ್ಷಿಣ ಭಾರತದ ಜನಪ್ರಿಯ ತಾರೆಯರಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅದ್ಭುತ ಅಭಿನಯಕ್ಕೆ ಫ್ಯಾನ್ಸ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. 1,200 ಕೊಟಿ ರೂ.ಗೂ ಅಧಿಕ ಗಳಿಕೆ ಮಾಡಿರುವ ಸಿನಿಮಾ ಈಗಾಗಲೇ ಹಲವು ಪ್ರಶಸ್ತಿಗಳನ್ನು ಪಡೆದಿದೆ. ಇದೀಗ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, ಭಾರತೀಯ ಚಿತ್ರರಂಗದ ಹಿರಿಮೆ ಹೆಚ್ಚಿಸಿದೆ.
ಇದನ್ನೂ ಓದಿ: ಬಾಲಿವುಡ್ನ ಹಾರಾರ್ ಥ್ರಿಲ್ಲರ್ ಸಿನಿಮಾದಲ್ಲಿ ತುಪ್ಪದ ಬೆಡಗಿ ರಾಗಿಣಿ