ಕಾನ್ (ಫ್ರಾನ್ಸ್): ಫ್ರಾನ್ಸ್ನಲ್ಲಿ ನಡೆಯುತ್ತಿರುವ ಕಾನ್ ಚಲನಚಿತ್ರೋತ್ಸವದಲ್ಲಿ ಬಾಲಿವುಡ್ ನಟಿ ಅದಿತಿ ರಾವ್ ಹೈದರಿ ನೀಲಿ ಗೌನ್ ತೊಟ್ಟು ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ನಟಿ ಅಂದಕ್ಕೆ ಅಭಿಮಾನಿಗಳು, ಸ್ನೇಹಿತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇವರೆಲ್ಲರ ಮೆಚ್ಚುಗೆಗಿಂತ ಅದಿತಿ ರಾವ್ ಹೈದರಿಯ ವದಂತಿಯ ಗೆಳೆಯ ನಟ ಸಿದ್ಧಾರ್ಥ್ ಅವರೂ ಕಮೆಂಟ್ ಮಾಡಿದ್ದು, ಸದ್ಯ ಆ ಕಾಮೆಂಟ್ ಎಲ್ಲೆಡೆ ಸದ್ದು ಮಾಡುತ್ತಿದೆ.
ನಟಿ ಅದಿತಿ ರಾವ್ ಹೈದರಿ ಫ್ರಾನ್ಸ್ನಲ್ಲಿ ನಡೆಯುತ್ತಿರುವ 76ನೇ ಕಾನ್ ಚಲನಚಿತ್ರೋತ್ಸವದಲ್ಲಿ ಕಾಣಿಸಿಕೊಂಡು ಎಲ್ಲರ ಹೃದಯವನ್ನು ಕದ್ದಿದ್ದಾರೆ. ಆಕಾಶ ನೀಲಿ ಆಸ್ಕರ್ ಡೆ ಲಾ ರೆಂಟಾ ಉಡುಪಿನಲ್ಲಿ ಕನಸಿನ ರಾಣಿಯಂತೆ ಕಾಣುವ ಅದಿತಿ ಫ್ರೆಂಚ್ ರಿವೇರಿಯಾದಲ್ಲಿ ಹೆಜ್ಜೆ ಹಾಕಿದರು. ಕಾನ್ ರೆಡ್ ಕಾರ್ಪೆಟ್ನಲ್ಲಿ ತೆಗೆದ ಫೋಟೋಗಳನ್ನು ನಟಿ ತಮ್ಮ Instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಡೌಟೇ ಇಲ್ಲ, ನಟಿ ಅದಿತಿ ಚಿತ್ರೋತ್ಸವದಲ್ಲಿ ರಾಜಕುಮಾರಿಯಂತೆ ಕಾಣಿಸಿಕೊಂಡಿದ್ದಾರೆ. ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಲೋರಿಯಲ್ ಪ್ಯಾರಿಸ್ ಬ್ರಾಂಡ್ ಅನ್ನು ಪ್ರತಿನಿಧಿಸುತ್ತಿರುವ ಅದಿತಿ, "ನಿಮ್ಮನ್ನು ಮತ್ತೊಮ್ಮೆ ಭೇಟಿಯಾಗಲು ಸಂತೋಷವಾಗಿದೆ Cannes #walkyourworth, #cannes2023" ಎಂದು ಸರಳವಾಗಿ ಶೀರ್ಷಿಕೆ ನೀಡಿದ್ದಾರೆ. ಅವರ ನೋಟಕ್ಕೆ ಪ್ರೇಕ್ಷಕರಿಂದ ಬಹಳಷ್ಟು ಲೈಕ್ಸ್, ಇಮೋಜಿಗಳು ಹರಿದು ಬಂದಿವೆ.
- " class="align-text-top noRightClick twitterSection" data="
">
ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು "ಆರಾಧ್ಯ" "Adorable," ಎಂದು ಕಾಮೆಂಟ್ ಮಾಡಿದ್ದಾರೆ. "ಸೌಂದರ್ಯ" "Beauty" ಎಂದು ಫ್ಯಾಷನ್ ಸ್ಟೈಲಿಸ್ಟ್ ಅನೈತಾ ಶ್ರಾಫ್ ಅದಾಜಾನಿಯಾ ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಅಭಿಮಾನಿ "ಕಾನ್ನಲ್ಲಿ ಬೆಸ್ಟ್ ಡ್ರೆಸ್ಡ್ ಬಾಲಿವುಡ್ ತಾರೆ" ಎಂದು ಬರೆದಿದ್ದಾರೆ.
ಅದಿತಿಯ ವದಂತಿಯ ಗೆಳೆಯ ಮತ್ತು ನಟ ಸಿದ್ಧಾರ್ಥ್ ಕೂಡ ಚಿತ್ರಗಳಿಗೆ ಪ್ರತಿಕ್ರಿಯಿಸಿದ್ದು, "ಓಹ್ ಮೈ (ಹೃದಯದ ಕಣ್ಣಿನ ಎಮೋಜಿ ಮತ್ತು ಫೈರ್ ಎಮೋಜಿ)" ಎಂದು ಅವರು ಬರೆದಿದ್ದಾರೆ. ಅದಿತಿ 2022 ರಲ್ಲಿ ಸಬ್ಯಸಾಚಿ ಸೀರೆಯಲ್ಲಿ ಕಾನ್ ಚಲನಚಿತ್ರೋತ್ಸವಕ್ಕೆ ಪಾದಾರ್ಪಣೆ ಮಾಡಿದ್ದರು. ಏತನ್ಮಧ್ಯೆ, ಸಿನಿಮಾಗಳನ್ನು ನೋಡುವುದಾರೆ, ಅದಿತಿ ಇಂಡೋ-ಯು.ಕೆ ಸಹ-ನಿರ್ಮಾಣ ಲಯನೆಸ್ ಸಿನಿಮಾದಲ್ಲಿ ನಟಿಸಲು ಸಿದ್ಧರಾಗಿದ್ದಾರೆ.
- " class="align-text-top noRightClick twitterSection" data="
">
2008 ರಲ್ಲಿ ಉಭಯ ದೇಶಗಳು ಸಹಿ ಮಾಡಿದ ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ಮಾಡಲಾಗುತ್ತಿರುವ ಅಧಿಕೃತ ಇಂಡೋ-ಯುಕೆ ಸಹ-ನಿರ್ಮಾಣವಾದ ಲಯನೆಸ್ ಸಿನಿಮಾವನ್ನು, ನಡೆಯುತ್ತಿರುವ ಕಾನ್ ಚಲನ ಚಿತ್ರೋತ್ಸವದಲ್ಲಿ ಇಂಡಿಯಾ ಪೆವಿಲಿಯನ್ (ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆಶ್ರಯದಲ್ಲಿ FICCI ನಿರ್ವಹಿಸುತ್ತದೆ) ನಲ್ಲಿ ಘೋಷಿಸಲಾಯಿತು. ರಾಜಕುಮಾರಿ ಸೋಫಿಯಾ ದುಲೀಪ್ ಅವರ ಕಥೆಯನ್ನು ಕಂಡುಹಿಡಿದ ಇತಿಹಾಸಕಾರ ಪೀಟರ್ ಬ್ಯಾನ್ಸ್ ಅವರ ಸಂಶೋಧನೆಯಿಂದ ಪ್ರೇರಿತವಾದ ಚಲನಚಿತ್ರವು ಯುಕೆಯಲ್ಲಿ ವಾಸಿಸುವ ಇಬ್ಬರು ಬ್ರಿಟಿಷ್ ಪಂಜಾಬಿ ಮಹಿಳೆಯರ ಕಥೆಯಾಗಿದೆ.
ಚಿತ್ರದ ಕಾರ್ಯಕಾರಿ ನಿರ್ಮಾಪಕರಲ್ಲಿ ಪೀಟರ್ ಕೂಡ ಒಬ್ಬರು. ಸಂಜಯ್ ಲೀಲಾ ಬನ್ಸಾಲಿಯವರ ಹೀರಾಮಂಡಿ ಸಿನಿಮಾ ಕೂಡ ಅದಿತಿ ರಾವ್ ಹೈದರಿ ಅವರ ಕೈಯಲ್ಲಿದೆ.
ಇದನ್ನೂ ಓದಿ: ಸನ್ನಿ ಲಿಯೋನ್ ಅಭಿನಯದ 'ಕೆನಡಿ' ಚಿತ್ರಕ್ಕೆ ಕೇನ್ಸ್ನಲ್ಲಿ ಚಪ್ಪಾಳೆಗಳ ಸುರಿಮಳೆ