ETV Bharat / entertainment

Adipurush controversy: ಸೀತೆ ಭಾರತವಲ್ಲ, ನೇಪಾಳದ ಮಗಳು: ಹಿಮ ರಾಷ್ಟ್ರದಲ್ಲಿ ಆದಿಪುರುಷ್​ ಸಿನಿಮಾ ಪ್ರದರ್ಶನ ಬಂದ್​ - Adipurush movie

ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗಿರುವ ಆದಿಪುರುಷ್​ ಸಿನಿಮಾ ಒಂದಲ್ಲೊಂದು ಕಾರಣಕ್ಕೆ ವಿವಾದಕ್ಕೆ ಸಿಲುಕುತ್ತಿದೆ.

ಆದಿಪುರುಷ್​ ಸಿನಿಮಾ ಪ್ರದರ್ಶನ ಬಂದ್​
ಆದಿಪುರುಷ್​ ಸಿನಿಮಾ ಪ್ರದರ್ಶನ ಬಂದ್​
author img

By

Published : Jun 19, 2023, 4:06 PM IST

ಕಠ್ಮಂಡು(ನೇಪಾಳ): ಸಂಭಾಷಣೆ ಮತ್ತು ಚಿತ್ರಕಥೆ ಕಾರಣಕ್ಕಾಗಿ ತೀವ್ರ ವಿವಾದಕ್ಕೀಡಾಗಿರುವ ತೆಲುಗು ನಟ ಪ್ರಭಾಸ್​ ಅಭಿನಯದ ಆದಿಪುರುಷ್ ಸಿನಿಮಾ ಪ್ರದರ್ಶನಕ್ಕೆ ನೇಪಾಳದಲ್ಲಿ ನಿಷೇಧಿಸಲು ನಿರ್ಧರಿಸಲಾಗಿದೆ. ಸೀತೆಯನ್ನು ಭಾರತದ ಮಗಳೆಂದು ಬಿಂಬಿಸಲಾಗಿದೆ. ಜಾನಕಿ ಜನಿಸಿದ್ದು ನೇಪಾಳದ ಜನಕಪುರದಲ್ಲಿ. ಈ ಬಗ್ಗೆ ಸುಳ್ಳು ಹೇಳಿದ್ದಕ್ಕೆ ದೇಶದಲ್ಲಿ ಸಿನಿಮಾ ಪ್ರದರ್ಶನವನ್ನು ನಿರ್ಬಂಧಿಸಲಾಗಿದೆ.

ಪ್ರಸಿದ್ಧ ಹಿಂದೂ ಮಹಾಕಾವ್ಯ ರಾಮಾಯಣ ಆಧರಿಸಿ ಆದಿಪುರುಷ ಸಿನಿಮಾದಲ್ಲಿ ಸೀತೆಯ ಮೂಲದ ಬಗ್ಗೆ ಸುಳ್ಳು ಹೇಳಲಾಗಿದೆ. ರಾಮಾಯಣದಲ್ಲಿ ಹೇಳಿದಂತೆ, ಸೀತೆ ನೇಪಾಳದ ಜನಕಪುರದಲ್ಲಿ ಜನಿಸಿದಳು. ಭಗವಾನ್ ಶ್ರೀರಾಮ ಬಂದು ಆಕೆಯನ್ನು ಮದುವೆಯಾದ. ಆದರೆ, ಚಿತ್ರದಲ್ಲಿ ಸೀತೆಯನ್ನು ಭಾರತದ ಹೆಣ್ಣೆಂದು ತೋರಿಸಲಾಗಿದೆ ಎಂದು ನೇಪಾಳ ಆಕ್ಷೇಪ ವ್ಯಕ್ತಪಡಿಸಿದೆ.

ತಪ್ಪು ತಿದ್ದಲು ಸೂಚನೆ: ಕಠ್ಮಂಡು ಮೇಯರ್​ ಬಾಲೆನ್ ಶಾ ಸಿನಿಮಾ ಪ್ರದರ್ಶನ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಅವರು ಫೇಸ್​ಬುಕ್​ನಲ್ಲಿ ಪೋಸ್ಟ್​ ಹಾಕಿಕೊಂಡಿದ್ದು, 'ನಮ್ಮ ದೇಶದ ಸೀತೆಯನ್ನು ಭಾರತದ ಮಗಳು' ಎಂದು ಹೇಳಲಾಗಿದೆ. ಈ ಸಂಭಾಷಣೆಯನ್ನು ಬದಲಿಸಬೇಕು. ಅಲ್ಲಿಯವರೆಗೂ ದೇಶದಲ್ಲಿ ಚಿತ್ರ ಪ್ರದರ್ಶನ ಮಾಡುವಂತಿಲ್ಲ ಎಂದು ಬರೆದುಕೊಂಡಿದ್ದರು. ಅಲ್ಲದೇ, ಚಿತ್ರತಂಡಕ್ಕೆ ಮೂರು ದಿನಗಳ ಹಿಂದೆಯೇ ಆಕ್ಷೇಪ ಸಲ್ಲಿಸಿದ್ದಾರೆ. ಆದರೆ, ಈವರೆಗೂ ಸಿನಿಮಾ ತಂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನೇಪಾಳದ ಸಂವಿಧಾನದ 5 ಮತ್ತು 56 (6) ನೇ ವಿಧಿಗಳನ್ನು ಉಲ್ಲೇಖಿಸಿರುವ ಮೇಯರ್​ ಶಾ, ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಫೆಡರಲ್, ಪ್ರಾಂತೀಯ ಮತ್ತು ಸ್ಥಳೀಯ ಸರ್ಕಾರಗಳು ಹೊಂದಿವೆ. ಯಾವುದೇ ಬದಲಾವಣೆಗಳಿಲ್ಲದೆ ಚಲನಚಿತ್ರದ ಪ್ರದರ್ಶನಕ್ಕೆ ಅವಕಾಶ ನೀಡುವುದು ನೇಪಾಳದ ರಾಷ್ಟ್ರೀಯತೆಗೆ ಹಾನಿಯನ್ನುಂಟು ಮಾಡಿದಂತಾಗುತ್ತದೆ. ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ಗುರುತನ್ನು ಬಿಟ್ಟುಕೊಟ್ಟಂತಾಗುತ್ತದೆ ಎಂದು ಹೇಳಿದ್ದರು.

ಮೇಯರ್ ಎಚ್ಚರಿಕೆ ನೀಡಿದ ನಂತರ, ಭದ್ರತಾ ಕಾರಣಗಳಿಂದಾಗಿ ಕಠ್ಮಂಡುವಿನಾದ್ಯಂತ ಚಿತ್ರಮಂದಿರಗಳಲ್ಲಿ ಆದಿಪುರುಷ ಸಿನಿಮಾ ಪ್ರದರ್ಶನವನ್ನು ನಿಲ್ಲಿಸಲಾಗಿದೆ. ಇದೇ ವೇಳೆ ನೇಪಾಳದ ಸೆನ್ಸಾರ್ ಮಂಡಳಿಯೂ ಚಿತ್ರಕ್ಕೆ ನೀಡಿದ ಅನುಮತಿಯನ್ನೂ ತಡೆಹಿಡಿಯಲು ನಿರ್ಧರಿಸಿದೆ. ಭದ್ರತಾ ಕಾರಣಗಳಿಗಾಗಿ ನಾವು ಚಲನಚಿತ್ರದ ಪ್ರದರ್ಶನವನ್ನು ನಿಲ್ಲಿಸಲು ನಿರ್ಧರಿಸಿದ್ದೇವೆ ಎಂದು ನೇಪಾಳ ಚಲನಚಿತ್ರ ಒಕ್ಕೂಟದ ಉಪಾಧ್ಯಕ್ಷ ಭಾಸ್ಕರ್ ಧುಂಗನಾ ಹೇಳಿದ್ದಾರೆ.

ನೇಪಾಳದಲ್ಲಿ 'ಆದಿಪುರುಷ' ಸಿನಿಮಾ ಏಕೈಕ ವಿತರಕರಾದ ಮನೋಜ್ ರಾಠಿ ದೇಶದಾದ್ಯಂತ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ಸೀತೆಯ ಜನ್ಮಸ್ಥಳದ ವಿವಾದವನ್ನು ಸರಿಪಡಿಸುವವರೆಗೆ ಚಿತ್ರವನ್ನು ಸ್ಕ್ರೀನ್​ ಮಾಡದಂತೆ ಜೂನ್ 15ರಂದು ಕಠ್ಮಂಡು ಮೇಯರ್ ಚಿತ್ರಮಂದಿರಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಆದಿಪುರುಷ ಕಲೆಕ್ಷನ್​: ಓಂ ರಾವುತ್ ಅವರ ನಿರ್ದೇಶನದ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿದ್ದು, ಚಿತ್ರ ಬಿಡುಗಡೆಯಾದ ಮೊದಲ ದಿನವೇ 140 ಕೋಟಿ ರೂಪಾಯಿ ಕೊಳ್ಳೆ ಹೊಡೆದಿತ್ತು. ಎರಡನೇ ದಿನ 100 ಕೋಟಿ ರೂಪಾಯಿ ದಾಖಲಿಸಿತ್ತು. ಭಾನುವಾರ ಮೂರನೇ ದಿನ ಚಿತ್ರ ವಿಶ್ವಾದ್ಯಂತ 85 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ನಿರ್ಮಾಣ ಸಂಸ್ಥೆ ಟಿ-ಸಿರೀಸ್​ ತಿಳಿಸಿದೆ.

ಇದನ್ನೂ ಓದಿ: Adipurush box office collection: ವಿವಾದದ ಮಧ್ಯೆ ಮೂರೇ ದಿನದಲ್ಲಿ 300 ಕೋಟಿ ಕ್ಲಬ್​ ಸೇರಿದ 'ಆದಿಪುರುಷ್​'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.