ETV Bharat / entertainment

Adipurushಗೆ ಮಿಶ್ರ ಪ್ರತಿಕ್ರಿಯೆ: ರಾಮಾಯಣ ಆಧಾರಿತ ಸಿನಿಮಾ ಟೀಕಿಸಿದ ವ್ಯಕ್ತಿಗೆ ಹೈದರಾಬಾದ್‌ನಲ್ಲಿ ಥಳಿತ! - ಕೃತಿ ಸನೋನ್

ಹೈದರಾಬಾದ್​ನಲ್ಲಿ ಚಿತ್ರಮಂದಿರವೊಂದರ ಎದುರು ಆದಿಪುರುಷ್ ಬಗ್ಗೆ ಟೀಕೆ ವ್ಯಕ್ತಪಡಿಸಿದ ವ್ಯಕ್ತಿಗೆ ಅಲ್ಲಿದ್ದ ಜನರು ಥಳಿಸಿದ್ದಾರೆ.

Man beaten up after he criticizes Adipurush
ಆದಿಪುರುಷ್ ಟೀಕಿಸಿದ ವ್ಯಕ್ತಿಗೆ ಥಳಿತ
author img

By

Published : Jun 16, 2023, 5:09 PM IST

ಬಿಗ್​ ಬಜೆಟ್​ ಸಿನಿಮಾ 'ಆದಿಪುರುಷ್​​' ಜಗತ್ತಿನಾದ್ಯಂತ 10,000ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಇಂದಿನಿಂದ ಪ್ರದರ್ಶನ ಆರಂಭಿಸಿದೆ. ಓಂ ರಾವುತ್ ನಿರ್ದೇಶನದ ಚಿತ್ರವು ಮಿಶ್ರ ವಿಮರ್ಶೆ ಸಿಕ್ಕಿದೆ. ಕೆಲವರು ಸಿನಿಮಾವನ್ನು ಶ್ಲಾಘಿಸಿದರೆ, ಮತ್ತಷ್ಟು ಮಂದಿ ಗ್ರಾಫಿಕ್​ ವಿಚಾರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೈದರಾಬಾದ್‌ ಸಿನಿಮಾ ಹಿಂಸಾಚಾರ ಘಟನೆಗೆ ಸಾಕ್ಷಿಯಾಯಿತು. ಆನ್‌ಲೈನ್‌ನಲ್ಲಿ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ, ಪ್ರೇಕ್ಷಕರೊಬ್ಬರು ಹೈದರಾಬಾದ್‌ನ ಚಿತ್ರಮಂದಿರವೊಂದರ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವುದು ಕಂಡುಬಂದಿದೆ. ಆದಿಪುರುಷ್​​ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಾಗ, ಅವರ ಸುತ್ತಲೂ ಸೇರಿದ್ದ ಕೆಲವರು ಅವರನ್ನು ಥಳಿಸಿದ್ದಾರೆ.

Man beaten up after he criticizes Adipurush
ಆದಿಪುರುಷ್ ಟೀಕಿಸಿದ ವ್ಯಕ್ತಿಗೆ ಥಳಿತ

ವೈರಲ್ ವಿಡಿಯೋದಲ್ಲಿ ಏನಿದೆ?: ವೈರಲ್ ವಿಡಿಯೋದಲ್ಲಿ ಪ್ರೇಕ್ಷಕ ತೆಲುಗಿನಲ್ಲಿ ಮಾತನಾಡುತ್ತಾ, "ಪ್ಲೇ ಸ್ಟೇಷನ್ ಆಟಗಳಿಂದ ರಾಕ್ಷಸರನ್ನು ತಂದು ಈ ಚಿತ್ರದಲ್ಲಿ ಇರಿಸಿದ್ದಾರೆ. ಹನುಮಾನ್, ಹಿನ್ನೆಲೆ ಸಂಗೀತ, ಕೆಲ 3D ಶಾಟ್‌ಗಳನ್ನು ಹೊರತುಪಡಿಸಿ ಇಲ್ಲಿ ಏನೂ ಇಲ್ಲ" ಎಂದು ದೂರಿದ್ದಾರೆ. ಅಷ್ಟೇ ಅಲ್ಲ, ರಾಘವ್ ಪಾತ್ರದಲ್ಲಿ ಪ್ರಭಾಸ್ ನಟನೆ ಬಗ್ಗೆ ಕೇಳಿದಾಗ, "ಬಾಹುಬಲಿಯಲ್ಲಿ ಅವರು ರಾಜನಂತೆ ಕಾಣಿಸಿಕೊಂಡಿದ್ದರು. ಅಲ್ಲಿ ಎಲ್ಲವೂ ಅದ್ಧೂರಿ ಆಗಿತ್ತು. ಅದನ್ನು ನೋಡಿ ರಾಘವ್ ಪಾತ್ರಕ್ಕೆ ಪ್ರಭಾಸ್ ಅವರನ್ನು ಆಯ್ಕೆ ಮಾಡಿದರು. ಈ ಪಾತ್ರವನ್ನು ಓಂ ರಾವುತ್ ಸರಿಯಾಗಿ ತೋರಿಸಿಲ್ಲ, ರಾಮನ ಪಾತ್ರ ಪ್ರಭಾಸ್​ಗೆ ಸೂಟ್ ಆಗುತ್ತಿಲ್ಲ" ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದನ್ನು ಕೇಳುತ್ತಿದ್ದಂತೆ ಅವರ ಸುತ್ತಲಿದ್ದ ಜನರು ಅವರನ್ನು ಸುತ್ತಿಕೊಂಡರು. ಬಿಗುವಿನ ವಾತಾವರಣ ಉಂಟಾಗುತ್ತಿದ್ದಂತೆ ಅಂತಿಮವಾಗಿ ಅವರನ್ನು ರಕ್ಷಿಸಬೇಕಾಯಿತು.

ಆದಿಪುರುಷ್​ ಗ್ರಾಫಿಕ್ಸ್​ ಚಿತ್ರದ​ ಮೊದಲ ಟೀಸರ್ ಬಿಡುಗಡೆ ಆದ ಸಮಯದಿಂದಲೇ ಸಿನಿಮಾ ಟೀಕೆಗೆ ಗುರಿಯಾಗಿದೆ. ಸಿನಿಮಾ ಮೇಲಿನ ಅಭಿಪ್ರಾಯ, ಕುತೂಹಲ ವಿಚಾರವಾಗಿ ಹಿನ್ನೆಡೆ ಉಂಟಾಗಿದ್ದರಿಂದ ಚಿತ್ರದ ನಿರ್ಮಾಪಕರು ಅದರ ಬಿಡುಗಡೆ ದಿನಾಂಕವನ್ನು ವಿಳಂಬಗೊಳಿಸಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುವ ಅನೇಕ ಪ್ರತಿಕ್ರಿಯೆಗಳನ್ನು ಆಧರಿಸಿ ಹೇಳುವುದಾದರೆ, ಚಿತ್ರದ VFX ಭಾಗವು ಪರಿಶೀಲನೆಗೆ ಒಳಪಟ್ಟಿದೆ ಎಂದು ತೋರುತ್ತದೆ.

ಪಾತ್ರಗಳು, ನಟರು, ಗ್ರಾಫಿಕ್ಸ್​ ವಿಚಾರವಾಗಿ ಮಿಶ್ರ ಪ್ರತಿಕ್ರಿಯೆ ಮುಂದುವರಿದಿದೆ. ಚಿತ್ರವನ್ನು ಬಹಿಷ್ಕರಿಸುವಂತೆ ಹಲವರು ಒತ್ತಾಯಿಸುತ್ತಿದ್ದಾರೆ. ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಉದ್ದನೆಯ ಗಡ್ಡ, ಮೊನಚಾದ ಕೂದಲು, ದುಷ್ಟನಾಗಿ ಕಾಣಿಸಿಕೊಂಡಿರುವ ರಾವಣನ ದೃಶ್ಯಗಳಿಗೆ ಹಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಲೆದರ್ ಬೆಲ್​​ನಿಂದ ರೆಡಿ ಮಾಡಿದಂತಿರುವ ಉಡುಗೆಯಲ್ಲಿ ಭಗವಾನ್ ಹನುಮಂತನ ದರ್ಶನ ಕಂಡ ಅನೇಕರು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: Adipurush: ರಾಮಾಯಣ ಆಧಾರಿತ ಪೌರಾಣಿಕ ಚಿತ್ರದ ಟ್ವಿಟರ್ ವಿಮರ್ಶೆ.. ಹೇಗಿದೆಯಂತಾ ಗೊತ್ತಾ?

ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದು, "ನಿಜವಾಗಿಯೂ, ರಾವಣ ಯಾವಾಗ ಡಬಲ್ ಡೆಕ್ಕರ್ ತಲೆಗಳನ್ನು ಹೊಂದಿದ್ದ? ವಿಭೂತಿ ಮತ್ತು ತಿಲಕವಿಲ್ಲದ ಮುಖ ಯಾವಾಗ ಇತ್ತು?, ಏನಿದು ಬಣ್ಣಗಳು? ರಾತ್ರಿ ವೇಳೆ ಮಾತ್ರ ಕಥೆ ಸಂಭವಿಸಿದೆಯೇ?, ಈ ಆದಿಪುರುಷ್​ ನಿರ್ಮಾಣಕ್ಕೆ ಎಲ್ಲಿಂದ ಸ್ಫೂರ್ತಿ ಪಡೆದಿದ್ದೀರಿ ಎಂದು ಉಲ್ಲೇಖಿಸಬಹುದೇ? #ಬಾಯ್ಕಾಟ್​ ಆದಿಪುರುಷ್​​'' ಎಂದು ಬರೆದಿದ್ದಾರೆ.

ಮತ್ತೊಬ್ಬರು ಕಾಮೆಂಟ್​ ಮಾಡಿ, "#ಬಾಯ್ಕಾಟ್​ ಆದಿಪುರುಷ್, ಸಿನಿಮಾದಲ್ಲಿ ಏಕೆ ಬಹಳ ಕತ್ತಲೆ ಇದೆ. ಶಾಂತತೆ, ಹೊಳಪಿರಬೇಕಾದ ಜಾಗದಲ್ಲಿ ಕತ್ತಲು. ಸಿನಿಮಾ ನೋಡುತ್ತಿದ್ದರೆ, ನಾವು ಏನನ್ನೋ ಬಹಳ ಗಾಢವಾದ ಆವೃತ್ತಿಯನ್ನು ವೀಕ್ಷಿಸುತ್ತಿರುವಂತೆ ತೋರುತ್ತಿದೆ. ಇದನ್ನು ತೋರಿಸಲು 600 ಕೋಟಿ ಹಣ ಖರ್ಚು ಮಾಡಲಾಯಿತೇ?. ಪ್ರಭಾಸ್​ ಅವರೇ ನಾನು ನಿರಾಶೆಗೊಂಡಿದ್ದೇನೆ'' ಎಂದು ಬರೆದಿದ್ದಾರೆ.

ಇದನ್ನೂ ಓದಿ: 'ಸೀತೆ ಭಾರತದ ಮಗಳು' ಡೈಲಾಗ್​ ಕಟ್: ಮೊದಲ ದಿನ 80 ಕೋಟಿ ಬಾಚಲಿರುವ ಆದಿಪುರುಷ್​

ಸರ್ವ ಬ್ರಾಹ್ಮಣ ಮಹಾಸಭಾವು ಚಿತ್ರದ ನಿರ್ದೇಶಕ ಓಂ ರಾವುತ್‌ ಅವರಿಗೆ ನೋಟಿಸ್ ಕಳುಹಿಸಿದೆ. "ಈ ಚಿತ್ರದಲ್ಲಿ ಹಿಂದೂ ದೇವರು ಮತ್ತು ದೇವತೆಗಳ ಚಿತ್ರಣವನ್ನು ತಪ್ಪಾಗಿ ಮಾಡಲಾಗಿದೆ. ವಿರೂಪವಾಗಿದ್ದು, ಚರ್ಮದ ಬಟ್ಟೆಗಳನ್ನು ಧರಿಸಿ ದೇವರನ್ನು ತೋರಿಸಲಾಗಿದೆ. ಧಾರ್ಮಿಕ ಮತ್ತು ಜಾತಿ ದ್ವೇಷವನ್ನು ಹರಡುವಂತಹ ಸಂಭಾಷಣೆಗಳು ಮತ್ತು ಚಿತ್ರಣಗಳಿವೆ. ರಾಮಾಯಣ ನಮ್ಮ ಇತಿಹಾಸ ಮತ್ತು ನಮ್ಮ ಆತ್ಮ. ಆದರೆ ಚಿತ್ರದಲ್ಲಿ ಹನುಮಂತನನ್ನು ಮೊಘಲ್​ನಂತೆ ತೋರಿಸಲಾಗಿದೆ ಎಂದು ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.