ETV Bharat / entertainment

ಆದಿಪುರುಷ್​ ಕಲೆಕ್ಷನ್​ನಲ್ಲಿ ಭಾರಿ ಕುಸಿತ: ಒಂದು ವಾರದಲ್ಲಿ ಸಿನಿಮಾ ಸಂಪಾದಿಸಿದ್ದೆಷ್ಟು ಗೊತ್ತಾ?

ಆದಿಪುರುಷ್ ಸಿನಿಮಾ ಕಳೆದ ದಿನ ಕಲೆಕ್ಷನ್​ ಮಾಡಿದ್ದು ಕೇವಲ 5.5 ಕೋಟಿ ರೂ.

Adipurush collection
ಆದಿಪುರುಷ್​ ಕಲೆಕ್ಷನ್
author img

By

Published : Jun 23, 2023, 11:18 AM IST

ಪೌರಾಣಿಕ ಸಿನಿಮಾ ಆದಿಪುರುಷ್​ ಓಟ ನಿಲ್ಲಿಸುವಂತೆ ತೋರುತ್ತಿದೆ. ಅದ್ಭುತ ಆರಂಭ ಪಡೆದ ಸಿನಿಮಾ ನಾಲ್ಕನೇ ದಿನದಲ್ಲೇ ಕಲೆಕ್ಷನ್ ಕುಸಿತ ಕಾಣಲು ಪ್ರಾರಂಭಿಸಿತು. ಮೊದಲ ದಿನ 140 ಕೋಟಿ ರೂ. ಸಂಪಾದಿಸಿದ ಈ ಚಿತ್ರದ ಬಾಕ್ಸ್​ ಆಫೀಸ್​ ಕಲೆಕ್ಷನ್​ ಸಂಖ್ಯೆ ಅಂತಿಮವಾಗಿ ಒಂದಂಕಿಗೆ ಬಂದು ನಿಂತಿದೆ. ಮೂರೇ ದಿನದೊಳಗೆ ಸಿನಿಮಾ ಸಾಕಷ್ಟು ಟೀಕೆಗೆ ಒಳಗಾಗಿದೆ. ಓಂ ರಾವುತ್ ಆ್ಯಕ್ಷನ್​ ಕಟ್​ ಹೇಳಿರುವ ಆದಿಪುರುಷ್​ ಸಿನಿಮಾ ಗುರುವಾರದಂದು ಭಾರತದಲ್ಲಿ ಎಲ್ಲ ಭಾಷೆಗಳು ಸೇರಿ ಸುಮಾರು 5.5 ಕೋಟಿ ರೂ. ಸಂಪಾದಿಸಿದೆ. ವಿವಾದಕ್ಕೊಳಗಾದ ಸಂಭಾಷಣೆಗಳನ್ನು ಬದಲಾಯಿಸಿದ ನಂತರವೂ ಬಾಕ್ಸ್​ ಆಫೀಸ್​​ ಕಲೆಕ್ಷನ್​​ ಅಂಕಿ - ಅಂಶಗಳು ಕಡಿಮೆಯಾಗುತ್ತಲೇ ಇವೆ.

ಆದಿಪುರುಷ್ ಒಟ್ಟು ಕಲೆಕ್ಷನ್: Sacnilk.com ಪ್ರಕಾರ, ಸಿನಿಮಾ 7ನೇ ದಿನದಂದು 5.5 ಕೋಟಿ ರೂ. ಗಳಿಸಿತು. ಎಲ್ಲಾ ಭಾಷೆಗಳು ಸೇರಿದಂತೆ ದೇಶೀಯ ಬಾಕ್ಸ್ ಆಫೀಸ್​ನಲ್ಲಿ ಚಿತ್ರದ ಮೊದಲ ವಾರದ ಒಟ್ಟು ಕಲೆಕ್ಷನ್​​ 260.55 ಕೋಟಿ ರೂಪಾಯಿ. ವಿಶ್ವಾದ್ಯಂತ ಆರು ದಿನಗಳಲ್ಲಿ ಸಿನಿಮಾ 410 ಕೋಟಿ ರೂ. ಗಳಿಸಿದೆ ಎಂದು ಟಿ-ಸೀರಿಸ್ ಗುರುವಾರ ಪ್ರಕಟಿಸಿದೆ.

ಬಾಕ್ಸ್​ ಆಫೀಸ್ ಕಲೆಕ್ಷನ್​ ಸಂಖ್ಯೆ ದಿನೇ ದಿನೆ ಕುಸಿತ ಕಾಣುತ್ತಿದೆ. ಸುಮಾರು 500-600 ಕೋಟಿ ರೂ. ಬಜೆಟ್​​​ನಲ್ಲಿ ನಿರ್ಮಾಣವಾದ ಆದಿಪುರುಷ್​​ ಕೇವಲ ಮೂರು ದಿನಗಳಲ್ಲಿ 340 ಕೋಟಿ ರೂ. ಗಳಿಸಿತು. ಮೊದಲ ದಿನ ವಿಶ್ವಾದ್ಯಂತ 140 ಕೋಟಿ ರೂ. ಸಂಪಾದಿಸಿತು. ನಂತರದ ಎರಡು ದಿನ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ತಲಾ 100 ಕೋಟಿ ರೂ. ಸಂಪಾದಿಸಿತು. ಆದಾಗ್ಯೂ, ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಿನಿಮಾ ಕಲೆಕ್ಷನ್​​ನಲ್ಲಿ ಭಾರಿ ಕುಸಿತ ಆಯಿತು.

ಆದಿಪುರುಷ್​​ ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ್ದರೂ, ಹಲವು ವಿಮರ್ಶಕರು ಚಿತ್ರದಲ್ಲಿ ಪಾತ್ರಗಳನ್ನು ತುಂಬಾನೇ ಆಧುನೀಕರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಗ್ರಾಫಿಕ್​ ಅಲ್ಲದೇ ಡೈಲಾಗ್ಸ್​​ಗಳು ಸಹ ಟೀಕಾಕಾರರ ಗುರಿಯಾದವು. ಭಗವಾನ್​ ಹನುಮಂತನ ಸಂಭಾಷಣೆಗೆ ತೀವ್ರ ವಿರೋಧ ವ್ಯಕ್ತವಾಯಿತು. ದೇವರ ಬಾಯಲ್ಲಿ ತೀರಾ ಸ್ಥಳೀಯ, ಆಡು ಭಾಷೆಯಲ್ಲಿ ಡೈಲಾಗ್ಸ್​ ಹೇಳಿಸಲಾಗಿದೆ ಎಂದು ಹಲವರು ಕಿಡಿ ಕಾರಿದರು. ತೀವ್ರ ಟೀಕೆ ವ್ಯಕ್ತವಾದ ಬೆನ್ನಲ್ಲೇ ಆ ಡೈಲಾಗ್ಸ್​ ಅನ್ನು ಸರಿಪಡಿಸಲಾಗಿದೆ.

ಇದನ್ನೂ ಓದಿ: Urvashi Rautela Photo: ಸೌಂದರ್ಯದ ಖನಿ ಊರ್ವಶಿ ರೌಟೇಲಾ ಮುಡಿಗೇರಿತು ವಿಶೇಷ ಪ್ರಶಸ್ತಿ

ಇನ್ನೂ ನೇಪಾಳದ ನ್ಯಾಯಾಲಯವು ಆದಿಪುರುಷ್​​ ಸೇರಿದಂತೆ ಹಿಂದಿ ಚಲನಚಿತ್ರಗಳ ಮೇಲಿನ ನಿಷೇಧವನ್ನು ಗುರುವಾರ ರದ್ದುಗೊಳಿಸಿತು. ದೇಶದ ಸೆನ್ಸಾರ್ ಮಂಡಳಿಯು ಅನುಮೋದಿಸಿದ ಯಾವುದೇ ಚಲನಚಿತ್ರದ ಪ್ರದರ್ಶನವನ್ನು ನಿಷೇಧಿಸದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಆದಿಪುರುಷ್​ ಸಿನಿಮಾದಲ್ಲಿ ಸೀತೆಯನ್ನು "ಭಾರತದ ಮಗಳು" ಎಂದು ಉಲ್ಲೇಖಿಸಿರುವ ಸಂಭಾಷಣೆಯು ಕಠ್ಮಂಡು ಮೇಯರ್ ಬಾಲೇಂದ್ರ ಶಾ ಅವರನ್ನು ಕೆರಳಿಸಿತು. ಎಲ್ಲಾ ಹಿಂದಿ ಚಲನಚಿತ್ರಗಳ ಮೇಲೆ ನಿಷೇಧ ಹೇರಲು ಪ್ರೇರೇಪಿಸಿತು. ಜಾನಕಿ ಎಂದೂ ಕರೆಯಲ್ಪಡುವ ಸೀತೆ ಆಗ್ನೇಯ ನೇಪಾಳದಲ್ಲಿರುವ ಜನಕಪುರದಲ್ಲಿ ಜನಿಸಿದಳು ಎಂದು ಹಲವರು ನಂಬುತ್ತಾರೆ. 'ಜಾನಕಿ ಭಾರತದ ಮಗಳು' ಎಂಬ ಡೈಲಾಗ್​ ಸಿನಿಮಾ ಮೇಲೆ ನಿಷೇಧ ಹೇರಲು ಕಾರಣವಾಗಿತ್ತು.

ಇದನ್ನೂ ಓದಿ: 'ಮ್ಯಾನೇಜರ್ ವಂಚಿಸಿಲ್ಲ, ಪರಸ್ಪರ ಒಪ್ಪಿಗೆಯಿಂದ ಪ್ರತ್ಯೇಕವಾಗಿದ್ದೇವೆ': ರಶ್ಮಿಕಾ ಮಂದಣ್ಣ ಸ್ಪಷ್ಟನೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.