ETV Bharat / entertainment

Adipurush ಬಿಡುಗಡೆಗೆ ಕ್ಷಣಗಣನೆ: ಮುಂಗಡ ಬುಕ್ಕಿಂಗ್​ನಲ್ಲಿ ಕೆಜಿಎಫ್​, ಪಠಾಣ್​ ದಾಖಲೆ ಮುರಿಯಲಿದೆಯಾ ಆದಿಪುರುಷ್? - ಈಟಿವಿ ಭಾರತ ಕನ್ನಡ

ಬಹುನಿರೀಕ್ಷಿತ Adipurush ಸಿನಿಮಾ ನಾಳೆ ಬಿಡುಗಡೆಯಾಗಲಿದೆ. ಮುಂಗಡ ಬುಕ್ಕಿಂಗ್​ನಲ್ಲಿ ಕೆಜಿಎಫ್​ 2 ಮತ್ತು ಪಠಾಣ್​ ದಾಖಲೆಯನ್ನು ಮೀರಿಸುವ ಸಾಧ್ಯತೆ ಇದೆ.

Adipurush
ಆದಿಪುರುಷ್
author img

By

Published : Jun 15, 2023, 3:53 PM IST

ಓಂ ರಾವುತ್​ ನಿರ್ದೇಶನದ 'ಆದಿಪುರುಷ್'​ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಭಾಸ್​ ಮತ್ತು ಕೃತಿ ಸನೋನ್​ ನಟನೆಯ ಈ ಚಿತ್ರ ನಾಳೆ ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾದ ಮುಂಗಡ ಟಿಕೆಟ್​ ಬುಕ್ಕಿಂಗ್​ಗೂ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ. ಈಗಾಗಲೇ ದಾಖಲೆಯ ಟಿಕೆಟ್​ ಮಾರಾಟವಾಗಿದೆ.

ಕೊರೊನಾ ನಂತರ ಮಲ್ಟಿಪ್ಲೆಕ್ಸ್‌ಗಳಲ್ಲಿ ಅತಿ ಹೆಚ್ಚು ಮುಂಗಡ ಟಿಕೆಟ್ ಬುಕಿಂಗ್ ಮಾಡಿದ ದಾಖಲೆಯು ಬಾಲಿವುಡ್‌ ಬಾದ್‌ಶಾ ಶಾರುಖ್ ಖಾನ್ ಅವರ 'ಪಠಾಣ್' ಚಿತ್ರದ ಹೆಸರಿನಲ್ಲಿದೆ. ಈ ಸಿನಿಮಾವು ಯಶ್​ ಅಭಿನಯದ ಕೆಜಿಎಫ್ 2 ಚಿತ್ರದ ದಾಖಲೆಯನ್ನು ಮುರಿದಿದೆ. ಇದೀಗ ಆದಿಪುರುಷ್​ ಇವರೆಡು ಸಿನಿಮಾಗಳನ್ನು ಹಿಂದಿಕ್ಕಲಿದೆ ಎಂದು ತೋರುತ್ತಿದೆ.​ ಈಗಾಗಲೇ 5 ಲಕ್ಷಕ್ಕೂ ಹೆಚ್ಚು ಟಿಕೆಟ್​ಗಳು ಬುಕ್​ ಆಗಿವೆ.

'ಆದಿಪುರುಷ್​' ಮುಂಗಡ ಟಿಕೆಟ್​ ಬುಕ್ಕಿಂಗ್​: ಜೂನ್​ 16 ಶುಕ್ರವಾರ, ಅಂದರೆ ನಾಳೆ ಬಿಡುಗಡೆಯ ದಿನದಂದು ದೇಶಾದ್ಯಂತ ಪಿವಿಆರ್​ ಸಿನಿಮಾಸ್​ನಲ್ಲಿ 1,26,050 ಟಿಕೆಟ್​ಗಳನ್ನು ಬುಕ್​ ಮಾಡಲಾಗಿದೆ. ಎನಾಕ್ಸ್‌ನಲ್ಲಿ 96,502 ಟಿಕೆಟ್‌ಗಳನ್ನು ಕಾಯ್ದಿರಿಸಲಾಗಿದೆ. ಜೂನ್​ 17, ಶನಿವಾರದಂದು ಅಂದರೆ ಮೊದಲ ವಾರಾಂತ್ಯಕ್ಕೆ ಪಿವಿಆರ್​ನಲ್ಲಿ 83,596 ಮತ್ತು ಎನಾಕ್ಸ್​ನಲ್ಲಿ 55,438 ಸೇರಿದಂತೆ ಒಟ್ಟು 1,39,034 ಮುಂಗಡ ಬುಕ್ಕಿಂಗ್​ ಮಾಡಲಾಗಿದೆ. ಜೂನ್ 18, ಭಾನುವಾರದಂದು ಪಿವಿಆರ್​ನಲ್ಲಿ 69,279 ಮತ್ತು ಎನಾಕ್ಸ್​ನಲ್ಲಿ 48,946 ಸೇರಿದಂತೆ ಒಟ್ಟು 1,18,225 ಟಿಕೆಟ್​ಗಳನ್ನು ಕಾಯ್ದಿರಿಸಲಾಗಿದೆ.

ಇದನ್ನೂ ಓದಿ: Rakshit Shetty: ಕನ್ನಡ ಚಿತ್ರರಂಗದಲ್ಲಿ ವಿನೂತನ ಪ್ರಯೋಗಕ್ಕೆ ಮುಂದಾದ 'ಸಪ್ತ ಸಾಗರದಾಚೆ ಎಲ್ಲೋ'; ಏನದು ಗೊತ್ತಾ?

ಶಾರುಖ್​ ಅವರ ಪಠಾಣ್​ ಮತ್ತು ರಾಕಿಂಗ್​ ಸ್ಟಾರ್​ ಯಶ್​ ಅವರ ಕೆಜಿಎಫ್​ 2 ಚಿತ್ರದ ಮುಂಗಡ ಬುಕ್ಕಿಂಗ್​ ದಾಖಲೆಯನ್ನು ಆದಿಪುರುಷ್​ ಮುರಿಯಲಿದೆ ಎಂದು ಕಾಣುತ್ತಿದೆ. ಆದರೆ ಆದಿಪುರುಷ್​ ಮುಂಗಡ ಬುಕ್ಕಿಂಗ್​ನ ಅಂತಿಮ ಅಂಕಿ- ಅಂಶ ಇನ್ನಷ್ಟೇ ಬರಬೇಕಿದೆ. 'ಪಠಾಣ್' 5.56 ಲಕ್ಷ ಮತ್ತು 'ಕೆಜಿಎಫ್ 2' 5.15 ಲಕ್ಷ ಮುಂಗಡ ಟಿಕೆಟ್​ ಬುಕ್ಕಿಂಗ್ ಆಗಿತ್ತು.

ಆದಿಪುರುಷ್​ ಹನುಮಾನ್​ಗೆ ಸೀಟು ಮೀಸಲು: ಟಿಕೆಟ್ ಮಾರಾಟದಲ್ಲಿ ಚಿತ್ರತಂಡ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಮಾಯಣ ಪಾರಾಯಣ ನಡೆಯುವ ಸ್ಥಳಕ್ಕೆ ಹನುಮಂತ ದೇವರು ಬರುತ್ತಾನೆ ಎಂಬ ನಂಬಿಕೆಯನ್ನು ಗೌರವಿಸಿ, ಚಿತ್ರ ಪ್ರದರ್ಶನಗೊಳ್ಳುವ ಪ್ರತಿ ಥಿಯೇಟರ್‌ನಲ್ಲಿ ಹನುಮಂತ ದೇವರಿಗೆ ಆಸನವನ್ನು ಮೀಸಲಿಡಲಾಗುವುದು ಎಂದು ಘೋಷಿಸಲಾಗಿದೆ.

ಪಂಚ ಭಾಷೆಯಲ್ಲಿ ಬಿಡುಗಡೆ: 'ಆದಿಪುರುಷ್​' ಸಿನಿಮಾವು ತೆಲುಗು, ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಪ್ರಪಂಚದಾದ್ಯಂತ ಜೂನ್​ 16ರಂದು (ನಾಳೆ) ಬಿಡುಗಡೆ ಆಗಲಿದೆ. ಚಿತ್ರದಲ್ಲಿ ಪ್ರಭಾಸ್​ ರಾಮನಾಗಿ, ಕೃತಿ ಸನೋನ್​ ಸೀತೆಯಾಗಿ, ಸನ್ನಿ ಸಿಂಗ್​ ಲಕ್ಷ್ಮಣನಾಗಿ ಮತ್ತು ಸೈಫ್​ ಅಲಿ ಖಾನ್​ ರಾವಣನಾಗಿ ನಟಿಸಿದ್ದಾರೆ. ಸಿನಿಮಾದ ಮೇಲಿನ ಅಭಿಮಾನಿಗಳ ನಿರೀಕ್ಷೆ ಮುಗಿಲೆತ್ತರದಲ್ಲಿದೆ.

ಇದನ್ನೂ ಓದಿ: ಜರಾ ಹಟ್ಕೆ ಜರಾ ಬಜ್ಕೆ ಯಶಸ್ಸು.. ಪತ್ನಿ ಕತ್ರಿನಾ ಜೊತೆ ವಿಹಾರಕ್ಕೆ ತೆರಳಿದ ವಿಕ್ಕಿ, ವಿಡಿಯೋ ವೈರಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.