ಮುಂಬೈ: ನಟಿ ಯಾಮಿ ಗೌತಮ್ ಕೌಟುಂಬಿಕ ವಿಷಯದಲ್ಲಿ ಸಾಕಷ್ಟು ಭಾವನಾತ್ಮಕತೆ ಹೊಂದಿದ್ದಾರೆ. ತಮ್ಮ ವಿವಾಹದಲ್ಲೂ ತಮ್ಮ ಅಮ್ಮನ ಮದುವೆ ಸೀರೆಯುಟ್ಟು ಸಪ್ತಪದಿ ತುಳಿದಿದ್ದರು. ಇದೀಗ ಅವರ ಮುದ್ದು ತಮ್ಮನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ್ದಾರೆ. ತಮ್ಮ ಮುದ್ದು ಓಜೋಸ್ 21ನೇ ಹುಟ್ಟುಹಬ್ಬದ ಕುರಿತು ಭಾವನಾತ್ಮಕ ಸಾಲುಗಳನ್ನು ಹಂಚಿಕೊಂಡಿದ್ದಾರೆ ನಟಿ.
21ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಓಜೊಸ್ನ ನೈಜತೆ ಮುಂದುವರೆಯಲಿ, ಸದಾ ಇರಲಿ.. ಹುಟ್ಟು ಹಬ್ಬದ ಶುಭಾಶಯಗಳು ಓಜೋಸ್ ಎಂದು ಬರೆದು ಕೊಂಡಿದ್ದಾರೆ. ಇದೇ ವೇಳೆ, ಯಾಮಿ ತಮ್ಮನ ಹುಟ್ಟುಹಬ್ಬದ ಕೇಕ್ ಕತ್ತರಿಸುವ ಸಮಾರಂಭದ ಫೋಟೋವನ್ನು ಹಂಚಿಕೊಂಡಿದ್ದಾರೆ. ಯಾಮಿ ಜೊತೆಗೆ ಅವರ ತಂಗಿ ಸುರೈಲಿ ಗೌತಮ್ ಕೂಡ ತಮ್ಮ ಹುಟ್ಟು ಹಬ್ಬಕ್ಕೆ ಶುಭಕೋರಿದ್ದಾರೆ.
- " class="align-text-top noRightClick twitterSection" data="
">
ಯಾಮಿ ಗೌತಮ್, ಸರಿಲೈ ಮತ್ತು ಓಜೋಸ್ ಬಾಲ್ಯದ ಫೋಟೋ ಹಂಚಿಕೊಂಡಿದ್ದು, ತಂಗಿ ಫೋಟೋಗೆ ಸೋ ಕ್ಯೂಟ್ ಎಂದು ಕಮೆಂಟ್ ಕೂಡ ಮಾಡಿದ್ದಾರೆ. ಇನ್ನು ಯಾಮಿ ಪಂಜಾಬಿ ನಿರ್ದೇಶಕ ಮುಕೇಶ್ ಗೌತಮ್ ಮತ್ತು ಹೆಂಡತಿ ಅಂಜಲಿ ಗೌತಮ್ ಅವರ ಮಗಳಾಗಿದ್ದಾರೆ. ಇನ್ನು ಯಾಮಿ ತಂಗಿ ಸರೈಲಿ ಕೂಡ ಪಂಜಾಬಿಯಲ್ಲಿ ನಟಿಯಾಗಿ ಮಿಂಚುತ್ತಿದ್ದಾರೆ.
ಬಹುಭಾಷ ನಟಿ: ಕನ್ನಡ, ತೆಲುಗು ಸೇರಿದಂತೆ ಬಾಲಿವುಡ್ನಲ್ಲಿ ಮಿಂಚುತ್ತಿರುವ ನಟಿ ಯಾಮಿ ಸದ್ಯ ಚೋರ್ ನಿಖಲ್ ಕೆ ಬಾಗ್ ಚಿತ್ರದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಅಜಯ್ ಸಿಂಗ್ ನಿರ್ಮಾಣದ ಈ ಚಿತ್ರ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ಫ್ಲೈಟ್ ಅಟೆಂಡಟ್ ಪಾತ್ರದಲ್ಲಿ ಯಾಮಿ ನಟಿಸಿದ್ದಾರೆ.
- " class="align-text-top noRightClick twitterSection" data="
">
ಇದರ ಹೊರತಾಗಿ, ಯಾಮಿ ಒಎಂಜಿ- ಓ ಮೈ ಗಾಡ್ 2 ಚಿತ್ರದಲ್ಲಿ ನಟಿಸುತ್ತಿದ್ದು, ಅಕ್ಷಯ್ ಕುಮಾರ್ ಅವರಿಗೆ ಜೊತೆಯಾಗಿದ್ದಾರೆ. ಪಂಕಜ್ ತ್ರಿಪಾಠಿ ಕೂಡ ಈ ಚಿತ್ರದಲ್ಲಿದ್ದು, ಈ ಚಿತ್ರವನ್ಮು ಅಮಿತ್ ರಾಯ್ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಪರೇಶ್ ರಾವಾಲ್ ಮತ್ತು ಅಕ್ಷಯ್ ಕುಮಾರ್ ನಟಿಸಿದ್ದ ಓ ಮೈ ಗಾಡ್ ಚಿತ್ರದ ಸೀಕ್ವೆಲ್ ಇದಾಗಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಕೃಷ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕನ್ನಡದಲ್ಲೂ ಈ ಚಿತ್ರ ಮುಕುಂದ ಮುರಾರಿ ಎಂಬ ಹೆಸರಿನಲ್ಲಿ ತೆರೆ ಕಂಡಿತು. ಇದರ ಜೊರತಾಗಿ ಕಾಮಿಡಿ ಚಿತ್ರವಾಗಿರುವ ಧೂಮ್ ಧೂಮ್ ಚಿತ್ರದಲ್ಲಿ ಪ್ರತೀಕ್ ಗಾಂಧಿ ಜೊತೆಗೆ ಯಾಮಿ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡದಲ್ಲೂ ಮಿಂಚು: ಫೇರ್ ಅಂಡ್ ಲವ್ಲಿ ಜಾಹೀರಾತಿನ ಮೂಲಕ ಜನಪ್ರಿಯಗೊಂಡ ಯಾಮಿ ಗೌತಮ್ ಕನ್ನಡದ ಮೂಲಕ ಮೊದಲ ಬಾರಿಗೆ ಬೆಳ್ಳಿತೆರೆ ಪ್ರವೇಶ ಮಾಡಿದರು. ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ಉಲ್ಲಾಸ- ಉತ್ಸಾಹ ಚಿತ್ರದಲ್ಲಿ ಮಹಾಲಕ್ಷ್ಮೀ ಪಾತ್ರದಲ್ಲಿ ಮಿಂಚಿದ್ದರು. ಬಳಿಕ ಬಾಲಿವುಡ್ಗೆ ಹಾರಿದ ಅವರು, ವಿಕಿ ಡೋನರ್ ನಂತರ ಬದ್ಲಾಪುರ್, ಸನಮ್ ರೇ, ಕಾಬಿಲ್, ಸರ್ಕಾರ್ 3, ಉರಿ-ದಿ ಸರ್ಜಿಕಲ್ ಸ್ಟ್ರೈಕ್, ಬಾಲಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಳೆದೆರಡು ವರ್ಷದ ಹಿಂದೆ ಉರಿ ಸಿನಿಮಾ ನಿರ್ದೇಶಕ ಆದಿತ್ಯ ಧರ್ ಅವರೊಂದಿಗೆ ಸಪ್ತಪದಿ ತುಳಿದರು.
ಇದನ್ನೂ ಓದಿ: ದಿಢೀರ್ ಮದುವೆ ಬಗ್ಗೆ ಮೌನ ಮುರಿದ ಯಾಮಿ ಗೌತಮ್: 'Are you ready?' ಎಂದು ಕೇಳಿದ್ದರಂತೆ ಆದಿತ್ಯ