ETV Bharat / entertainment

ವೈಷ್ಣವಿ ಗೌಡ ನಿಶ್ಚಿತಾರ್ಥ ವದಂತಿ: ಮೌನ ಮುರಿದ ಸನ್ನಿಧಿ ಖ್ಯಾತಿಯ ನಟಿ - actor vidhyabharan

ಸನ್ನಿಧಿ ಖ್ಯಾತಿಯ ನಟಿ ವೈಷ್ಣವಿ ಗೌಡ ನಿಶ್ಚಿತಾರ್ಥ ವದಂತಿ ಬಗ್ಗೆ ಸ್ವತಃ ವೈಷ್ಣವಿ ಸ್ಪಷ್ಟನೆ ಕೊಟ್ಟಿದ್ದಾರೆ.

actress vaishnavi gowda reacts on engagement rumors
ವೈಷ್ಣವಿ ಗೌಡ ನಿಶ್ಚಿತಾರ್ಥ ವದಂತಿ
author img

By

Published : Nov 25, 2022, 1:15 PM IST

'ಅಗ್ನಿಸಾಕ್ಷಿ' ಧಾರವಾಹಿ ಖ್ಯಾತಿಯ ನಟಿ ವೈಷ್ಣವಿ ಗೌಡ ಅವರ ಮದುವೆ ವಿಚಾರವಾಗಿ ವದಂತಿ ಸೃಷ್ಟಿಯಾಗಿದೆ. ನಿಶ್ಚಿತಾರ್ಥ ನಡೆದಿರುವುದಾಗಿ ವೈರಲ್ ಅದ ಸುದ್ದಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ಕೆಲ ದಿನಗಳ ಹಿಂದೆ ನಟ ವಿದ್ಯಾಭರಣ್ ಮತ್ತು ನಟಿ ವೈಷ್ಣವಿ ಗೌಡ ಎಂಗೇಜ್ ಆಗಿದ್ದಾರೆ ಎಂದೆಲ್ಲ ಸುದ್ದಿ ಹರಿದಾಡಿತ್ತು. ಇಬ್ಬರೂ ಪರಸ್ಪರ ಹಾರ ಬದಲಾಯಿಸಿಕೊಳ್ಳುವ ಮತ್ತು ಸಿಹಿ ತಿನಿಸುತ್ತಿರುವ ವಿಡಿಯೋ, ಫೋಟೋಗಳು ವೈರಲ್ ಆಗಿದ್ದವು. ಹಾಗಾಗಿ ಇಬ್ಬರೂ ಒ‍ಪ್ಪಿಕೊಂಡೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಸೋಶಿಯಲ್​ ಮೀಡಿಯಾಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ.

actress vaishnavi gowda reacts on engagement rumors
ವೈಷ್ಣವಿ ಗೌಡ ಇನ್​​ಸ್ಟಾ ಸ್ಟೋರಿ

ಸನ್ನಿಧಿ ಖ್ಯಾತಿಯ ವೈಷ್ಣವಿ ಗೌಡ ಅವರ ಕುರಿತು ಸ್ಪಷ್ಟ ಮಾಹಿತಿ ತಿಳಿದುಕೊಳ್ಳಲು ಅಭಿಮಾನಿಗಳು ಕಾತುರರಾಗಿದ್ದರು. ಆದ್ರೀಗ ಊಹಾಪೋಹಗಳು ಹೆಚ್ಚಾಗಿದ್ದು ನಟಿ ವೈಷ್ಣವಿ ಗೌಡ ಮೌನ ಮುರಿದಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಗಾಳಿ ಸುದ್ದಿಗೆ ತೆರೆ ಎಳೆದಿದ್ದಾರೆ.

''ಎಲ್ಲರಲ್ಲಿ ನನ್ನದೊಂದು ವಿನಂತಿ, ನಮ್ಮ ಖಾಸಗಿತನಕ್ಕೆ ಗೌರವ ಕೊಡಿ. ವೈರಲ್​ ಆಗುತ್ತಿರುವ ಫೋಟೋ ನಿಶ್ಚಿತಾರ್ಥದ್ದಲ್ಲ. ಹಾಗೇನಾದರು ಇದ್ದರೆ ನಾನು ಖಂಡಿತವಾಗಿಯೂ ನಿಮಗೆ ತಿಳಿಸುತ್ತೇನೆ'' ಎಂದು ಒಂದು ಪೋಸ್ಟ್ ಇದೆ. ಮತ್ತೊಂದು ಪೋಸ್ಟ್​​ನಲ್ಲಿ, ''ನಾವು ಇದ್ದನ್ನು ಇಲ್ಲಿಗೆ ನಿಲ್ಲಿಸುತ್ತಿದ್ದೇವೆ, ಈ ವಿಷಯವನ್ನು ಮತ್ತಷ್ಟು ಎಳೆಯೋದು ಬೇಡ ಎಂದು ನಿಮ್ಮೆಲ್ಲರಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ. ನನಗೆ ಶುಭಕೋರಿದವರೆಲ್ಲರಿಗೂ ಧನ್ಯವಾದ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 'ರಾಲಿಯಾ' ಪುತ್ರಿಗೆ ನಾಮಕರಣ: 'ರಾಹಾ' ಅರ್ಥವೇನು ಗೊತ್ತೇ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.