ETV Bharat / entertainment

'ಸಹ ನಟರ ವಯಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ..': ನಟಿ ತಮನ್ನಾ ಭಾಟಿಯಾ - ಈಟಿವಿ ಭಾರತ ಕನ್ನಡ

'ಭೋಲಾ ಶಂಕರ್'​ ಮತ್ತು 'ಜೈಲರ್'​ ಸಿನಿಮಾ ವಿಚಾರವಾಗಿ ನಟಿ ತಮನ್ನಾ ಭಾಟಿಯಾ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

tamannaah bhatia
ತಮನ್ನಾ ಭಾಟಿಯಾ
author img

By

Published : Aug 5, 2023, 9:53 AM IST

ಹಾಲ್ಗೆನ್ನೆ ಚೆಲುವೆ ತಮನ್ನಾ ಭಾಟಿಯಾ ಬಹುಭಾಷೆಗಳಲ್ಲಿ ಮಿಂಚುತ್ತಿರುವ ನಟಿ. ಸದ್ಯ 'ಭೋಲಾ ಶಂಕರ್'​ ಮತ್ತು 'ಜೈಲರ್'​ ಸಿನಿಮಾ ವಿಚಾರವಾಗಿ ಅವರು ಸುದ್ದಿಯಲ್ಲಿದ್ದಾರೆ. ತಮಿಳು ಮತ್ತು ತೆಲುಗು ಭಾಷೆಯ ಈ ಬಹುನಿರೀಕ್ಷಿತ ಸಿನಿಮಾಗಳು ಒಂದು ದಿನದ ಗ್ಯಾಪ್​ನೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈ ಹಿನ್ನೆಲೆ ವಿಶೇಷ ಸಂದರ್ಶನವೊಂದರಲ್ಲಿ ಭಾಗವಹಿಸಿದ ತಮನ್ನಾ ಅವರು ತಮ್ಮ ವೃತ್ತಿ ಜೀವನದ ಜೊತೆಗೆ ಕೆಲವು ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ ಮತ್ತು ಕಾಲಿವುಡ್​ ಸೂಪರ್​ಸ್ಟಾರ್​ ರಜನಿಕಾಂತ್​​ ಇವರಂತಹ ಸ್ಟಾರ್​ ನಟರ ಜೊತೆ ನಟಿಸುವುದು ನನ್ನ ಕನಸಾಗಿತ್ತು. ಅದೀಗ ನನಸಾಗಿದೆ ಎಂದು ಹೇಳಿದ್ದಾರೆ. ಒಂದೇ ದಿನದ ಗ್ಯಾಪ್​ನಲ್ಲಿ ಇಬ್ಬರು ಹಿರಿಯ ನಟರ ಚಿತ್ರಗಳನ್ನು ತೆಲುಗು ಮತ್ತು ತಮಿಳು ಪ್ರೇಕ್ಷಕರು ಸ್ವಾಗತಿಸಲಿರುವುದು ನಿಜಕ್ಕೂ ಸಂತಸದ ಅನುಭವ ಎಂದಿದ್ದಾರೆ. ಸಂದರ್ಶನದಲ್ಲಿ ಸಿನಿಮಾ ವಿಚಾರವಾಗಿ ಮಾತ್ರವಲ್ಲದೇ ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ.

ಚಿರಂಜೀವಿ ಜೊತೆ ತಮನ್ನಾ ಡ್ಯಾನ್ಸ್​: "ತೆಲುಗಿನ 'ಸೈರಾ ನರಸಿಂಹ ರೆಡ್ಡಿ' ಸಿನಿಮಾದಲ್ಲಿ ಮೆಗಾಸ್ಟಾರ್​ ಚಿರಂಜೀವಿ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ಆದರೆ, ಅವರ ಜೊತೆ ಡ್ಯಾನ್ಸ್​ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ 'ಭೋಲಾ ಶಂಕರ್​' ಮೂಲಕ ಆ ಕನಸು ನನಸಾಗಿದೆ. ಚಿರಂಜೀವಿ ಜೊತೆ ಹುಕ್​ ಸ್ಟೆಕ್ ಹಾಕಿದ್ದೇನೆ. ಇನ್ನುಳಿದ ಸ್ಟೆಪ್ಸ್​ ಕೂಡ ತುಂಬಾ ಚೆನ್ನಾಗಿದೆ. ನಾನು ಹೆಚ್ಚು ಪ್ರ್ಯಾಕ್ಟೀಸ್​ ಮಾಡದೇ ಈ ಸಿನಿಮಾದ ಹಾಡಿಗೆ ಕುಣಿದಿದ್ದೇನೆ" ಎಂದಿದ್ದಾರೆ.

ಇದನ್ನೂ ಓದಿ: Bhola Shankar Trailer: ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಭೋಲಾ ಶಂಕರ್' ಟ್ರೇಲರ್​ ರಿಲೀಸ್​​

ಸಹ ನಟರ ವಯಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ... ತಮಿಳಿನ 'ಜೈಲರ್'​ ಸಿನಿಮಾದಲ್ಲಿ ತಮನ್ನಾ ಪಾತ್ರ ಚಿಕ್ಕದಿದೆ. "ನಾನು ಚಿತ್ರರಂಗದಲ್ಲಿ 18 ವರ್ಷ ಪೂರೈಸಿದ್ದೇನೆ. ನನ್ನ ಜೊತೆ ನಟಿಸುವ ಸಹ ನಟರ ವಯಸ್ಸಿನ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ಅವರ ಎದುರು ನಟಿಸುವಾಗ ಅದು ಕೇವಲ ಪಾತ್ರಕ್ಕೆ ಸಂಬಂಧಿಸಿದಷ್ಟೇ ಆಗಿರುತ್ತದೆ. ಅವರೆಲ್ಲರೂ ತಮ್ಮ ವಯಸ್ಸಿನ ಹೊರತಾಗಿಯೂ ಸಹ ನಟರಂತೆ ಕಾಣುತ್ತಾರೆ" ಎಂದು ತಮನ್ನಾ ಹೇಳಿದ್ದಾರೆ.

ತಮನ್ನಾ ಹಾಗೂ ಬಾಲಿವುಡ್​ ನಟ ವಿಜಯ್​ ವರ್ಮಾ ಡೇಟಿಂಗ್​ನಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇಬ್ಬರು ಪ್ರೀತಿಸುತ್ತಿರುವುದಾಗಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಅವರು ಯಾವಾಗ ಮದುವೆಯಾಗುತ್ತಾರೆ? ಅನ್ನೋದೇ ಸದ್ಯ ಅಭಿಮಾನಿಗಳಿಗೆ ಕಾಡುತ್ತಿರುವ ಪ್ರಶ್ನೆ. ಇದೀಗ ಸಂದರ್ಶನದಲ್ಲೂ ತಮನ್ನಾ ಅವರಿಗೆ ಮದುವೆಯ ವಿಚಾರ ಎದುರಾಯಿತು. ಈ ವೇಳೆ, ನಟಿ ಅದನ್ನು ಸರಳವಾಗಿ ನಿಭಾಯಿಸಿದರು. ನನಗೆ ಸದ್ಯಕ್ಕೆ ಮದುವೆ ಯೋಚನೆ ಇಲ್ಲ. ಸಮಯ ಬಂದಾಗ ನಾನೇ ಹೇಳುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇನ್ನೂ 'ಜೈಲರ್​' ಆಗಸ್ಟ್​ 10 ರಂದು ಮತ್ತು 'ಭೋಲಾ ಶಂಕರ್​' ಆಗಸ್ಟ್​ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಈ ಎರಡೂ ಸಿನಿಮಾಗಳಲ್ಲಿ ತಮನ್ನಾ ಭಾಟಿಯಾ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ಇದನ್ನೂ ಓದಿ: Rajinikanth: ಬಹುನಿರೀಕ್ಷಿತ 'ಜೈಲರ್' ಟ್ರೇಲರ್​ ರಿಲೀಸ್​.. ಶಿವಣ್ಣ ಅಭಿಮಾನಿಗಳಿಗೆ ನಿರಾಸೆ​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.