ETV Bharat / entertainment

ಮಗುವಿನ ಜನನ ಕುರಿತು ಘೋಷಿಸಲು ವಿಶೇಷ ಕಲಾಕೃತಿ ಹಂಚಿಕೊಂಡ ನಟಿ ಸೋನಂ ಕಪೂರ್

author img

By

Published : Aug 28, 2022, 7:14 PM IST

20.08.2022 ರಂದು ಪೋಷಕರಾದ ನಟಿ ಸೋನಂ ಕಪೂರ್​ ಮತ್ತು ಉದ್ಯಮಿ ಆನಂದ್ ಅಹುಜಾ, ಈ ಬಗ್ಗೆ ವಿಶೇಷ ಕಲಾಕೃತಿಯ ಫೋಟೋ ಹಂಚಿಕೊಂಡು ಘೋಷಿಸಿದ್ದಾರೆ.

Sonam Kapoor, Anand Ahuja drop special art piece to announce birth of their baby boy
ಮಗುವಿನ ಜನನ ಕುರಿತು ಘೋಷಿಸಲು ವಿಶೇಷ ಕಲಾಕೃತಿ ಹಂಚಿಕೊಂಡ ನಟಿ ಸೋನಂ ಕಪೂರ್

ಉದ್ಯಮಿ ಆನಂದ್ ಅಹುಜಾ ಜೊತೆ 2018ರಲ್ಲಿ ಸಪ್ತಪದಿ ತುಳಿದಿದ್ದ ಬಾಲಿವುಡ್ ಬೆಡಗಿ, ಅನಿಲ್ ಕಪೂರ್ ಮಗಳು ನಟಿ ಸೋನಂ ಕಪೂರ್​ ಈಗ ಮುದ್ದಾದ ಗಂಡು ಮಗುವಿನ ತಾಯಿ. 20.08.2022 ರಂದು ಪೋಷಕರಾದ ಈ ದಂಪತಿ ಇದೀಗ ಈ ಬಗ್ಗೆ ವಿಶೇಷ ಕಲಾಕೃತಿಯ ಫೋಟೋ ಹಂಚಿಕೊಂಡು ಘೋಷಿಸಿದ್ದಾರೆ. ಈ ಕಲಾಕೃತಿಯಲ್ಲಿ ಹದ್ದು ಮತ್ತು ಜಿಂಕೆ ಇದೆ. ಆಕಾಶವನ್ನು ತಂದೆ, ಭೂಮಿಯನ್ನು ತಾಯಿಗೆ ಹೋಲಿಸುವ ಕಲಾಕೃತಿ ಇದಾಗಿದೆ.

ಕಲಾಕೃತಿ ಹಂಚಿಕೊಂಡಿರುವ ಸೋನಂ ಕಪೂರ್​, ನಮ್ಮ ಮಗುವಿನ ಜನನವನ್ನು ಘೋಷಿಸಲು ವಿಶೇಷ ಕಲಾಕೃತಿಯನ್ನು ರಚಿಸಬೇಕೆಂದು ಬಯಸಿದ್ದೆವು. ಈ ಚಿತ್ರದಲ್ಲಿ ಕ್ರಮವಾಗಿ ಹದ್ದು ಮತ್ತು ಜಿಂಕೆ ಇದೆ. ಹದ್ದುಗಳು ಅಥವಾ ಗಿಡುಗಗಳು ಪಿತೃತ್ವಕ್ಕೆ ಸಂಬಂಧಿಸಿದೆ. ಜಿಂಕೆ ಮಾತೃತ್ವವನ್ನು ಪ್ರತಿನಿಧಿಸುತ್ತದೆ. ಅವು ಶಾಂತವಾಗಿರುತ್ತವೆ, ಗಮನ ಹರಿಸುತ್ತವೆ ಮತ್ತು ಜಾಗರೂಕ ಜೀವಿಗಳು. ಅವು ಯಾವಾಗಲೂ ಕಾವಲುಗಾರರಂತೆ ಕೆಲಸ ಮಾಡುತ್ತವೆ. ಅತ್ಯಂತ ಸವಾಲಿನ ಪರಿಸ್ಥಿತಿಗಳಲ್ಲಿ ಸಹ ಹೋರಾಡಿ ಜಯ ಸಾಧಿಸುತ್ತವೆ. ಅದರಂತೆ ನಾವು ನಮ್ಮ ಮಗುವಿನ ರಕ್ಷಕರಾಗಿರುತ್ತೇವೆ ಎಂದು ತಿಳಿಸಿದ್ದಾರೆ.

Sonam Kapoor, Anand Ahuja drop special art piece to announce birth of their baby boy
ವಿಶೇಷ ಕಲಾಕೃತಿ ಹಂಚಿಕೊಂಡ ನಟಿ ಸೋನಂ ಕಪೂರ್

ಇದನ್ನೂ ಓದಿ: ಮುದ್ದಾದ ಮಗಳೊಂದಿಗೆ ವೀಕೆಂಡ್ ಎಂಜಾಯ್​ ಮಾಡಿದ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ

2018ರ ಮೇ. 8ರಂದು ಸೋನಂ ಕಪೂರ್​​ ಹಾಗೂ ಅನಂದ್ ಅಹುಜಾ ಮುಂಬೈನಲ್ಲಿ ವಿವಾಹವಾಗಿದ್ದರು. ಇದಕ್ಕೂ ಮೊದಲು ಈ ಜೋಡಿ ಎರಡು ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು. ಗರ್ಭಾವಸ್ಥೆಯಲ್ಲಿರುವಾಗ ಫೋಟೋಶೂಟ್​ ಮಾಡಿಸಿ ಹಂಚಿಕೊಳ್ಳುತ್ತಿದ್ದರು. ಗರ್ಭಾವಸ್ಥೆಯ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.