ETV Bharat / entertainment

ಚಿತ್ರಕಲಾ ಪರಿಷತ್ತಿನಲ್ಲಿ ಸೋಕ್ ಮಾರ್ಕೆಟ್ ಉದ್ಘಾಟಿಸಿದ ಶುಭಾ ಪೂಂಜಾ, ನಿರಂಜನ್ ಶೆಟ್ಟಿ - Souk Market

ಚಿತ್ರಕಲಾ ಪರಿಷತ್ತಿನಲ್ಲಿ ಸೋಕ್ ಮಾರ್ಕೆಟ್ ಅನ್ನು ನಟಿ ಶುಭಾ ಪೂಂಜಾ ಹಾಗೂ ನಟ ನಿರಂಜನ್ ಶೆಟ್ಟಿ ಇಂದು ಉದ್ಘಾಟಿಸಿದರು.

actress shubha poonja inaugurated Souk Market
ಸೊಕ್ ಮಾರ್ಕೆಟ್ ಉದ್ಘಾಟಿಸಿದ ಶುಭಾ ಪೂಂಜಾ, ನಿರಂಜನ್ ಶೆಟ್ಟಿ
author img

By

Published : Sep 16, 2022, 7:29 PM IST

ಚಿತ್ತಾರ ಸಹಯೋಗದೊಂದಿಗೆ ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ 'ದ ಸೋಕ್ (ಮಾರ್ಕೆಟ್)' ಅನ್ನು ಆಯೋಜಿಸಿದೆ. ಸೆಪ್ಟೆಂಬರ್ 25ರವರೆಗೆ ನಡೆಯಲಿರುವ ಈ ಕರಕುಶಲವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ನಟಿ ಶುಭಾ ಪೂಂಜಾ ಹಾಗೂ ನಟ ನಿರಂಜನ್ ಶೆಟ್ಟಿ ಇಂದು ಉದ್ಘಾಟಿಸಿದರು.

ಈ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ನಟಿ ಶುಭಾ ಪೂಂಜಾ, ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗಿನ ಕಲಾವಿದರ ಕೈಯಲ್ಲಿ ಅರಳಿದ ಕಲಾಕೃತಿ, ಆಭರಣ, ಉಡುಪುಗಳು ಇಲ್ಲಿವೆ. ನವರಾತ್ರಿಯ ವಿಶೇಷವಾಗಿ ಈ ಪ್ರದರ್ಶನ 10 ದಿನಗಳ ಕಾಲ ನಡೆಯಲಿದೆ. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಮನೆ ಮಂದಿಯೆಲ್ಲರಿಗೂ ಇಷ್ಟವಾಗುವ ವಸ್ತುಗಳು ಇಲ್ಲಿ ಕೈಗೆಟಕುವ ದರದಲ್ಲಿ ಲಭ್ಯವಿದೆ. ನನಗೆ ಇಲ್ಲಿನ ಎಲ್ಲ ವಸ್ತುಗಳು ಇಷ್ಟವಾಗಿದೆ. ನೋಡುವುದಕ್ಕೆ ಕಣ್ಣಿಗೆ ಹಬ್ಬದ ಹಾಗೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು .

actress shubha poonja inaugurated Souk Market
ನಟಿ ಶುಭಾ ಪೂಂಜಾ

ಇಂದಿನಿಂದ 10 ದಿನಗಳ ಕಾಲ ನಡೆಯುವ ಈ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ದೇಶದ ನಾನಾ ಕಡೆಯಿಂದ ಬಂದ ಕಲಾವಿದರು ತಮ್ಮ ವಸ್ತುಗಳನ್ನು ಇಲ್ಲಿ ಪ್ರದರ್ಶಿಸಲಿದ್ದಾರೆ. ಅಲಂಕಾರಿಕ ವಸ್ತು, ವೈವಿಧ್ಯಮಯ ಉಡುಪು, ಆಭರಣಗಳು ಇಲ್ಲಿ ಲಭ್ಯವಿದೆ.

ಮನೆ ಅಲಂಕಾರ ಮಾಡುವ ಉತ್ಪನ್ನಗಳು, ಹ್ಯಾಂಡ್ಲೂಂಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್​​ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ. ಕಲಾವಿದರ ಕೈಯಲ್ಲಿ ಅರಳಿದ ಕಲಾಕೃತಿಗಳು ಹಾಗೂ ಉತ್ಪನ್ನಗಳು ನೇರವಾಗಿ ಜನರಿಗೆ ತಲುಪಲಿವೆ.

ನಿಮ್ಮ ಮನೆಯ ಗಾರ್ಡನ್ ಅಲಂಕರಿಸಲು, ನಿಮಗೊಪ್ಪುವ ಉಡುಪು ಹಾಗೂ ಆಭರಣಗಳನ್ನು ಕೊಳ್ಳಲು ಈ ಮೇಳಕ್ಕೆ ತಪ್ಪದೇ ಭೇಟಿ ನೀಡಿ ಎಂದು ಹೇಳಿದರು.

ಇದನ್ನೂ ಓದಿ: ಯಟ್ಟ..ಯಟ್ಟ..ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್ ಸಾಂಗ್​ ರಿಲೀಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.