ಭಾರತೀಯ ಚಿತ್ರರಂಗದಲ್ಲಿ ಕನ್ನಡ ಸಿನಿಮಾಗಳದ್ದೇ ಹವಾ ಜೋರಾಗಿದೆ. ಅದ್ಧೂರಿ ಮೇಕಿಂಗ್ ಜೊತೆ ಒಳ್ಳೆ ಕಂಟೆಂಟ್ ಹೊಂದಿರುವ ಸ್ಯಾಂಡಲ್ವುಡ್ ಚಿತ್ರಗಳು ಯಾವ ಭಾಷೆಗೂ ಕಮ್ಮಿ ಇಲ್ಲ ಎಂಬ ಮಟ್ಟಿಗೆ ನಿರ್ಮಾಣವಾಗುತ್ತಿದೆ. ಜೊತೆಗೆ ಪ್ಯಾನ್ ಇಂಡಿಯಾ ಮಟ್ಟದಲ್ಲೇ ರಿಲೀಸ್ ಆಗುತ್ತಿದೆ. ಸದ್ಯ ಧ್ರುವ ಸರ್ಜಾ ಅಭಿನಯದ ಹಾಗೂ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾ ಟೈಟಲ್ನಿಂದಲೇ ಭಾರಿ ಸದ್ದು ಮಾಡುತ್ತಿದೆ. ಅಲ್ಲದೇ ಈ ಚಿತ್ರದಲ್ಲಿ ಇಬ್ಬರು ಬಾಲಿವುಡ್ ಸೂಪರ್ಸ್ಟಾರ್ಗಳು ನಟಿಸುತ್ತಿದ್ದಾರೆ. ಬಾಲಿವುಡ್ ಖಳ ನಾಯಕ ಸಂಜಯ್ ದತ್ ಮತ್ತು ಶಿಲ್ಪಾ ಶೆಟ್ಟಿ 'ಕೆಡಿ' ಅಡ್ಡಾಕ್ಕೆ ಕಾಲಿಟ್ಟಿದ್ದಾರೆ.
'ಜೋಗಿ' ರೀತಿಯ ತಾಯಿ ಬಾಂಧವ್ಯದ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದ ನಿರ್ದೇಶಕ ಪ್ರೇಮ್ ಇದೀಗ ಕಾಳಿದಾಸ (ಕೆಡಿ) ಸಿನಿಮಾದ ಸತ್ಯವತಿ ಪಾತ್ರಕ್ಕಾಗಿ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಅವರನ್ನು ಕರೆ ತಂದಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ ಶಿಲ್ಪಾ ಶೆಟ್ಟಿ ಅವರ ಸತ್ಯವತಿ ಲುಕ್ ರಿವೀಲ್ ಆಗಿದೆ. ಮಹಾಭಾರತದ ಕೌರವ ಕುಲದ ಮಹಾತಾಯಿ ಸತ್ಯವತಿಯಾಗಿದ್ದು, ಈ ಸಿನಿಮಾದಲ್ಲಿ ಶಿಲ್ಪಾ ಶೆಟ್ಟಿ ಧ್ರುವ ಸರ್ಜಾ ಅಮ್ಮನಾಗಿ ಕಾಣಿಸಿಕೊಳ್ಳಲಿದ್ದಾರಾ? ಎಂಬ ಪ್ರಶ್ನೆಯೊಂದು ಮೂಡುತ್ತಿದೆ. ಇನ್ನು ಬಾಲಿವುಡ್ ಖಳನಾಯಕ ಸಂಜಯ್ ದತ್ 'ಕೆಡಿ' ಸಿನಿಮಾದಲ್ಲಿ ಪವರ್ ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
-
Wishing you all a Happy Ugadi! On this auspicious day, a powerhouse enters the war! Welcoming the powerful @TheShilpaShetty to #KD's battlefield!
— PREM❣️S (@directorprems) March 22, 2023 " class="align-text-top noRightClick twitterSection" data="
Introducing #ShilpaShetty as #Satyavati.@DhruvaSarja @directorprems #VRavichandran @KvnProductions @ArjunJanyaMusic #KDTheDevil pic.twitter.com/J60TSzMdfd
">Wishing you all a Happy Ugadi! On this auspicious day, a powerhouse enters the war! Welcoming the powerful @TheShilpaShetty to #KD's battlefield!
— PREM❣️S (@directorprems) March 22, 2023
Introducing #ShilpaShetty as #Satyavati.@DhruvaSarja @directorprems #VRavichandran @KvnProductions @ArjunJanyaMusic #KDTheDevil pic.twitter.com/J60TSzMdfdWishing you all a Happy Ugadi! On this auspicious day, a powerhouse enters the war! Welcoming the powerful @TheShilpaShetty to #KD's battlefield!
— PREM❣️S (@directorprems) March 22, 2023
Introducing #ShilpaShetty as #Satyavati.@DhruvaSarja @directorprems #VRavichandran @KvnProductions @ArjunJanyaMusic #KDTheDevil pic.twitter.com/J60TSzMdfd
ಇದನ್ನೂ ಓದಿ: 'ಕೌಸಲ್ಯಾ ಸುಪ್ರಜಾ ರಾಮ'ನ ನಾಯಕಿಯಾಗಿ ಬೃಂದಾ ಆಚಾರ್ಯ!
ತುಳುನಾಡ ಬೆಡಗಿ ಶಿಲ್ಪಾ ಶೆಟ್ಟಿ: ನಟಿ ಶಿಲ್ಪಾ ಶೆಟ್ಟಿ ಚಂನವನಕ್ಕೆ ಹೊಸಬರೇನೂ ಅಲ್ಲ. ಇವರು ಮೂಲತಃ ಮಂಗಳೂರಿನವರು. 1998 ರಲ್ಲಿ ಮೊದಲ ಬಾರಿಗೆ ರವಿಚಂದ್ರನ್ ಅಭಿನಯದ ಪ್ರೀತ್ಸೋದು ತಪ್ಪಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ರವಿಮಾಮ ಜೊತೆ ಒಂದಾಗೋಣ ಬಾ ಚಿತ್ರದಲ್ಲಿ ನಟಿಸಿದ್ದರು. 2005 ರಲ್ಲಿ ಉಪೇಂದ್ರ ಜೊತೆ ಆಟೋ ಶಂಕರ್ ಚಿತ್ರದಲ್ಲಿ ನಟಿಸಿದರು. ಅಲ್ಲಿಂದ ಈವರೆಗೂ ಶಿಲ್ಪಾ ಮತ್ತೆ ಕನ್ನಡದತ್ತ ಮುಖ ಮಾಡಿರಲಿಲ್ಲ. ಆದರೆ ಕೆಲವೊಂದು ಕನ್ನಡದ ಕೆಲವೊಂದು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಬಾಲಿವುಡ್ ನಲ್ಲಿ ಬ್ಯುಸಿಯಾಗಿರೋ ಶಿಲ್ಪಾ ಶೆಟ್ಟಿ 17 ವರ್ಷಗಳ ಬಳಿಕ ಸ್ಯಾಂಡಲ್ ವುಡ್ ಗೆ ಮತ್ತೆ ಮುಖ ಮಾಡಿದ್ದಾರೆ.
ಇದನ್ನೂ ಓದಿ: 'ಕಬ್ಜ 2'ಗೆ ನಿರ್ದೇಶಕ ಆರ್ ಚಂದ್ರು ತಯಾರಿ: ಶಿವಣ್ಣನ ಜೊತೆ ಬಾಲಿವುಡ್ ನಟನ ಎಂಟ್ರಿ?
ಕನ್ನಡ ಹಾಗೂ ಪರಭಾಷೆಯಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಕೆ ವಿ ಎನ್ ಪ್ರೊಡಕ್ಷನ್ ಸಂಸ್ಥೆ ಅಡಿ, ಕೆ ಡಿ ಸಿನಿಮಾವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಧ್ರುವ ಸರ್ಜಾ ಹಾಗು ಪ್ರೇಮ್ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಕೆಡಿ ಸಿನಿಮಾ ಶೂಟಿಂಗ್ ಹಂತದಲ್ಲೇ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಆಗಿದ್ದು, ಸಿನಿ ಪ್ರಿಯರಲ್ಲಿ ಆಸಕ್ತಿ ಹೆಚ್ಚಿಸಿದೆ.
ಇದನ್ನೂ ಓದಿ: ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾಕ್ಕೆ ಬಾಲಿವುಡ್ ನಟಿ ಎಂಟ್ರಿ