ಬಾಲಿವುಡ್ ಹಿರಿಯ ನಟಿ ಶರ್ಮಿಳಾ ಠಾಗೋರ್ ಅವರು ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದು ಬಂದಿದ್ದಾರೆ. ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಜನಪ್ರಿಯ 'ಕಾಫಿ ವಿತ್ ಕರಣ್ ಶೋ'ನಲ್ಲಿ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಹೊಸ ಶೋ ಇಂದು ಒಟಿಟಿ ವೇದಿಕೆಯಲ್ಲಿ ಹೊರಬಿದ್ದಿದೆ.
ಪುತ್ರ, ಬಾಲಿವುಡ್ ನಟ ಸೈಫ್ ಅಲಿ ಖಾನ್ ಜೊತೆ ಚಾಟ್ ಶೋಗೆ ಆಗಮಿಸಿದ ಶರ್ಮಿಳಾ ಠಾಗೋರ್ ಈ ವಿಷಯದ ಬಗ್ಗೆ ಮಾತನಾಡಿದರು. ಪ್ರತಿ ಗುರುವಾರ ಒಟಿಟಿ ಪ್ಲಾಟ್ಫಾರ್ಮ್ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಹೊಸ ಸಂಚಿಕೆಯನ್ನು ಅನಾವರಣಗೊಳಿಸಲಾಗುತ್ತದೆ. ಇಂದು ಪ್ರಸಾರ ಕಂಡ ಹೊಸ ಸಂಚಿಕೆಯಲ್ಲಿ ಶರ್ಮಿಳಾ ಠಾಗೋರ್ ಮತ್ತು ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ಕರಣ್ ಜೋಹರ್ ತಮ್ಮ "ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ" ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲು ಶರ್ಮಿಳಾ ಅವರನ್ನು ಸಂಪರ್ಕಿಸಿದ ಕ್ಷಣವನ್ನು ಅವರು ನೆನಪಿಸಿಕೊಂಡರು.
-
This week it's time for a royal brew on the Koffee couch!
— Disney+ Hotstar (@DisneyPlusHS) December 25, 2023 " class="align-text-top noRightClick twitterSection" data="
#HotstarSpecials #KoffeeWithKaran Season 8 Episode 10 streaming from Dec 28th. #KWKS8OnHotstar#SharmilaTagore #SaifAliKhan #KaranJohar @apoorvamehta18 @jahnvio @Dharmatic_ @GoogleIndia @JaquarGroup pic.twitter.com/gNfHZV7ii8
">This week it's time for a royal brew on the Koffee couch!
— Disney+ Hotstar (@DisneyPlusHS) December 25, 2023
#HotstarSpecials #KoffeeWithKaran Season 8 Episode 10 streaming from Dec 28th. #KWKS8OnHotstar#SharmilaTagore #SaifAliKhan #KaranJohar @apoorvamehta18 @jahnvio @Dharmatic_ @GoogleIndia @JaquarGroup pic.twitter.com/gNfHZV7ii8This week it's time for a royal brew on the Koffee couch!
— Disney+ Hotstar (@DisneyPlusHS) December 25, 2023
#HotstarSpecials #KoffeeWithKaran Season 8 Episode 10 streaming from Dec 28th. #KWKS8OnHotstar#SharmilaTagore #SaifAliKhan #KaranJohar @apoorvamehta18 @jahnvio @Dharmatic_ @GoogleIndia @JaquarGroup pic.twitter.com/gNfHZV7ii8
ಸೂಪರ್ ಹಿಟ್ ಅದ ರಾಖಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ಶಬಾನಾ ಅಜ್ಮಿ ನಿರ್ವಹಿಸಿದ್ದ ಪಾತ್ರಕ್ಕೆ ನಿರ್ದೇಶಕ-ನಿರ್ಮಾಪಕ ಕರಣ್ ಅವರ ಮೊದಲ ಆಯ್ಕೆ ಶರ್ಮಿಳಾ ಅವರಾಗಿದ್ದರು. ಆದ್ರೆ ಅನಾರೋಗ್ಯ ಹಿನ್ನೆಲೆಯಲ್ಲಿ ನಟಿ ಈ ಪ್ರಾಜೆಕ್ಟ್ಗೆ ಗ್ರೀನ್ ಸಿಗ್ನಲ್ ಕೊಡಲಿಲ್ಲ. ಈ ಬಗ್ಗೆ ನನಗೆ ಬೇಸರವಿದೆ ಎಂದು ಜೋಹರ್ ತಿಳಿಸಿದರು. ಇದಕ್ಕೆ ನಟಿ ಪ್ರತಿಕ್ರಿಯಿಸಿದರು.
"ಆ ಸಮಯದಲ್ಲಿ ಕೋವಿಡ್ ಉತ್ತುಂಗದಲ್ಲಿತ್ತು. ನಾವು ಲಸಿಕೆ ಕೂಡ ಹಾಕಿಸಿಕೊಂಡಿರಲಿಲ್ಲ. ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿದ್ದೆ. ನಂತರ, ನಾನು ಯಾವುದೇ ರೀತಿಯ ರಿಸ್ಕ್ಗೆ ಮುಂದಾಗಲಿಲ್ಲ. ಹಾಗಾಗಿ ಸಿನಿಮಾಗೆ ಓಕೆ ಹೇಳಿಲ್ಲ. ಭವಿಷ್ಯದಲ್ಲಿ ಒಟ್ಟಿಗೆ ಸಿನಿಮಾವೊಂದರಲ್ಲಿ ಕೆಲಸ ಮಾಡುವ ಭರವಸೆ ಇದೆ" - ಶರ್ಮಿಳಾ ಠಾಗೋರ್.
ಇದನ್ನೂ ಓದಿ: 'ಶ್ರಾವಣಿ ಸುಬ್ರಮಣ್ಯ'ಕ್ಕೆ 10 ವರ್ಷ: 'ಒನ್ಸ್ ಮೋರ್ ಶ್ರಾವಣಿ ಸುಬ್ರಮಣ್ಯ' ಅನೌನ್ಸ್
ಕ್ಯಾನ್ಸರ್‌ನಿಂದ ಬಳಲಿದ ಬಗ್ಗೆ ಇದೇ ಮೊದಲ ಬಾರಿಗೆ ಶರ್ಮಿಳಾ ಠಾಗೋರ್ ಮಾತನಾಡಿದ್ದಾರೆ. ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾವನ್ನು ಕೋವಿಡ್ ಉತ್ತುಂಗದಲ್ಲಿದ್ದ ಸಂದರ್ಭ ಚಿತ್ರೀಕರಿಸಲಾಯಿತು. ಆ ಸಿನಿಮಾದಲ್ಲಿ ಶರ್ಮಿಳಾ ನಟಿಸದಿದ್ದರೂ ದೆಹಲಿಗೆ ಹೋದ ಸಂದರ್ಭ ನಟಿ ಶಬಾನಾ ಅಜ್ಮಿ ಅವರನ್ನು ಭೇಟಿಯಾಗಿದ್ದರು. ಶಬಾನಾ ಅವರು ತನ್ನ ಇನ್ಸ್ಟಾಗ್ರಾಮ್ನಲ್ಲಿ ಶರ್ಮಿಳಾ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದರು. ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟನೆಯ ರಾಖಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಧಾರ್ಮಿಕ ನಂಬಿಕೆಗೆ ಧಕ್ಕೆ ತಂದ ಆರೋಪ: ರಣ್ಬೀರ್ ವಿರುದ್ಧ ದೂರು