ಗಂಡ ಹೆಂಡತಿ ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ತನ್ನದೇ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡ ನಟಿ ಸಂಜನಾ ಗಲ್ರಾನಿ. ಕನ್ನಡ ಹಾಗು ತೆಲುಗು ಸಿನಿಮಾಗಳಲ್ಲಿ ನಟಿಸುವ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಕೊಂಡಿದ್ದರು.
![Actress sanjana galrani baby shower function Actress sanjana galrani news Actress sanjana galrani photoshoot Actress sanjana galrani pregnant news ನಟಿ ಸಂಜನಾ ಗಲ್ರಾನಿ ಸೀಮಂತ ಕಾರ್ಯಕ್ರಮ ನಟಿ ಸಂಜನಾ ಗಲ್ರಾನಿ ಸುದ್ದಿ ನಟಿ ಸಂಜನಾ ಗಲ್ರಾನಿ ಫೋಟೋಶೂಟ್ ನಟಿ ಸಂಜನಾ ಗಲ್ರಾನಿ ಗರ್ಭಿಣಿ ಸುದ್ದಿ](https://etvbharatimages.akamaized.net/etvbharat/prod-images/kn-bng-01-addhuri-seemantham-madikonda-nati-sanjanagalrani-7204735_11052022121857_1105f_1652251737_231.jpg)
ಇಂತಹ ಸಮಯದಲ್ಲಿ ಸಂಜನಾ ಗಲ್ರಾನಿ, ಡ್ರಗ್ಸ್ ಪ್ರಕರಣದಲ್ಲಿ ಹೆಸರು ತಳುಕು ಹಾಕಿಕೊಂಡ ಹಿನ್ನೆಲೆ ಸಂಜನಾ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಇದೇ ಸಮಯದಲ್ಲಿ ಬಹುದಿನದ ಗೆಳೆಯ, ಅಜೀಜ್ ಪಾಷಾ ಜೊತೆ ಸಂಜನಾ ಗಲ್ರಾನಿ ಮದುವೆ ಮಾಡಿಕೊಂಡಿದ್ದರು. ಈಗ ಸಂಜನಾ ಗಲ್ರಾನಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ನಟಿಗೆ ಅದ್ಧೂರಿಯಾಗಿ ಸೀಮಂತ ನಡೆದಿದೆ.
![Actress sanjana galrani baby shower function Actress sanjana galrani news Actress sanjana galrani photoshoot Actress sanjana galrani pregnant news ನಟಿ ಸಂಜನಾ ಗಲ್ರಾನಿ ಸೀಮಂತ ಕಾರ್ಯಕ್ರಮ ನಟಿ ಸಂಜನಾ ಗಲ್ರಾನಿ ಸುದ್ದಿ ನಟಿ ಸಂಜನಾ ಗಲ್ರಾನಿ ಫೋಟೋಶೂಟ್ ನಟಿ ಸಂಜನಾ ಗಲ್ರಾನಿ ಗರ್ಭಿಣಿ ಸುದ್ದಿ](https://etvbharatimages.akamaized.net/etvbharat/prod-images/kn-bng-01-addhuri-seemantham-madikonda-nati-sanjanagalrani-7204735_11052022121857_1105f_1652251737_440.jpg)
ನಟಿ ಸಂಜನಾ ಕೆಲವು ದಿನಗಳ ಹಿಂದೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದರು. ಈಗ ಸಂಜನಾ ಗಲ್ರಾನಿ ಅದ್ದೂರಿ ಸೀಮಂತ ಕಾರ್ಯಕ್ರಮವನ್ನ ಮಾಡಿಕೊಂಡಿದ್ದಾರೆ. ಇಂದಿರಾನಗರದಲ್ಲಿರುವ ತಮ್ಮ ನಿವಾಸದಲ್ಲಿ ಸಂಜನಾ ಗಲ್ರಾನಿ ಗ್ರ್ಯಾಂಡ್ ಆಗಿ ತಮ್ಮ ಸೀಮಂತವನ್ನ ಮಾಡಿಕೊಂಡಿದ್ದಾರೆ.
ಈ ಕಾರ್ಯಕ್ರಮಕ್ಕೆ ಸಂಜನಾ ಪತಿ ಅಜೀಜ್ ಪಾಷ ಮತ್ತು ಆತನ ಕುಟುಂಬ, ಸಂಜನಾ ಗಲ್ರಾನಿ ಕುಟುಂಬ ಹಾಗೂ ಆತ್ಮೀಯ ಗೆಳೆಯರ ಸಮ್ಮುಖದಲ್ಲಿ ಮುಸ್ಲಿಂ ಸಂಪ್ರದಾಯದಂತೆ ಸೀಮಂತ ಕಾರ್ಯ ನೆರವೇರಿತು.
![Actress sanjana galrani baby shower function Actress sanjana galrani news Actress sanjana galrani photoshoot Actress sanjana galrani pregnant news ನಟಿ ಸಂಜನಾ ಗಲ್ರಾನಿ ಸೀಮಂತ ಕಾರ್ಯಕ್ರಮ ನಟಿ ಸಂಜನಾ ಗಲ್ರಾನಿ ಸುದ್ದಿ ನಟಿ ಸಂಜನಾ ಗಲ್ರಾನಿ ಫೋಟೋಶೂಟ್ ನಟಿ ಸಂಜನಾ ಗಲ್ರಾನಿ ಗರ್ಭಿಣಿ ಸುದ್ದಿ](https://etvbharatimages.akamaized.net/etvbharat/prod-images/kn-bng-01-addhuri-seemantham-madikonda-nati-sanjanagalrani-7204735_11052022121857_1105f_1652251737_1086.jpg)
ಓದಿ: ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿದ ಸಂಜನಾ ಗಲ್ರಾನಿ
ಸದ್ಯ ಸಂಜನಾ ಗಲ್ರಾನಿ ಒಂಬತ್ತು ತಿಂಗಳ ತುಂಬು ಗರ್ಭೀಣಿ. ಬಿಳಿ ಬಣ್ಣದ ಲೆಹೆಂಗಾದಲ್ಲಿ ಸಂಜನಾ ಮಿಂಚಿದ್ದಾರೆ. ತಮ್ಮ 18ನೇ ವಯಸ್ಸಿನಲ್ಲಿ ಸಿನಿಮಾ ಇಂಡಸ್ಟ್ರಿಗೆ ಬಂದ ಸಂಜನಾ ಗಲ್ರಾನಿ, ಕನ್ನಡ ಹಾಗು ತೆಲುಗು ಸೇರಿದಂತೆ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ಸಂಜನಾ ಗಲ್ರಾನಿ ಹಿಂದೂ ಕುಟುಂಬದಲ್ಲಿ ಹುಟ್ಟಿ ಮುಸ್ಲಿಂ ಕುಟುಂಬದಲ್ಲಿ ಮದುವೆಯಾಗಿದ್ದಾರೆ. ಎರಡು ಧರ್ಮದ ಪದ್ಧತಿಯನ್ನು ಬಹಳ ಸಂತೋಷದಿಂದ ಅನುಸರಿಸುವ ಮೂಲಕ ನಟಿ ಸಂಜನಾ ಜೀವನ ನಡೆಸುತ್ತಿದ್ದಾರೆ.
![Actress sanjana galrani baby shower function Actress sanjana galrani news Actress sanjana galrani photoshoot Actress sanjana galrani pregnant news ನಟಿ ಸಂಜನಾ ಗಲ್ರಾನಿ ಸೀಮಂತ ಕಾರ್ಯಕ್ರಮ ನಟಿ ಸಂಜನಾ ಗಲ್ರಾನಿ ಸುದ್ದಿ ನಟಿ ಸಂಜನಾ ಗಲ್ರಾನಿ ಫೋಟೋಶೂಟ್ ನಟಿ ಸಂಜನಾ ಗಲ್ರಾನಿ ಗರ್ಭಿಣಿ ಸುದ್ದಿ](https://etvbharatimages.akamaized.net/etvbharat/prod-images/kn-bng-01-addhuri-seemantham-madikonda-nati-sanjanagalrani-7204735_11052022121857_1105f_1652251737_463.jpg)
ಸಂಜನಾ ಗಲ್ರಾನಿ ಸೀಮಂತ ಕಾರ್ಯಕ್ರಮಕ್ಕೆ ನಟಿ ಹರ್ಷಿಕಾ ಪೂಣಚ್ಚಾ, ಕಾರುಣ್ಯ ರಾಮ್ ಸೇರಿದಂತೆ ಚಿತ್ರರಂಗದ ಕೆಲ ಸ್ನೇಹಿತರು ಭಾಗಿಯಾಗಿದ್ದರು. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಂಜನಾ ಗಲ್ರಾನಿ ಮನೆಗೆ ಸದ್ಯದಲ್ಲೇ ಹೊಸ ಸದಸ್ಯ ಆಗಮ ಆಗಲಿದೆ.