ETV Bharat / entertainment

ಕ್ರೀಮ್ ಸಿನಿಮಾ ಶೂಟಿಂಗ್ ವೇಳೆ ನಟಿ ಸಂಯುಕ್ತಾ ಹೆಗ್ಡೆ ಕಾಲಿಗೆ ಗಾಯ: ವಿಡಿಯೋ - Actress Samyukta Hegdes leg injured

ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತಾ ಹೆಗಡೆ ಅವರು ಕ್ರೀಮ್ ಸಿನೆಮಾದ ಶೂಟಿಂಗ್ ವೇಳೆ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆದಿದ್ದಾರೆ.

actress-samyukta-hegdes
ಸಂಯುಕ್ತಾ ಹೆಗ್ಡೆ
author img

By

Published : Jul 27, 2022, 10:43 PM IST

ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್​​​ನಲ್ಲಿ ಖ್ಯಾತಿ ಪಡೆದ ನಟಿ ಸಂಯುಕ್ತಾ ಹೆಗ್ಡೆ. ಸದ್ಯ ಕ್ರೀಮ್ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಸಂಯುಕ್ತ ಹೆಗ್ಡೆ, ಚಿತ್ರೀಕರಣದ ವೇಳೆ ಕಾಲಿಗೆ ಬಲವಾದ ಪೆಟ್ಟು ಮಾಡಿಕೊಂಡಿದ್ದಾರೆ. ಈ ಚಿತ್ರದ ಆ್ಯಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಸಂಯುಕ್ತ ಹೆಗ್ಡೆ ಆಯ ತಪ್ಪಿದ್ದು ಕಾಲಿಗೆ ಪೆಟ್ಟಾಗಿದೆ.

ಫೈಟ್ ಮಾಸ್ಟರ್ ಪ್ರಭು ಈ ಸಿನೆಮಾದ ಆ್ಯಕ್ಷನ್ ದೃಶ್ಯಗಳನ್ನು ಸಂಯೋಜಿಸಿದ್ದು, ಸಂಯುಕ್ತ ಹೆಗ್ಡೆ ಡ್ಯೂಪ್ ಇಲ್ಲದೇ ಆ್ಯಕ್ಷನ್ ಮಾಡುವ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ಕೂಡಲೇ ನಿರ್ಮಾಪಕ ಡಿ ಕೆ. ದೇವೇಂದ್ರ, ಸಂಯುಕ್ತ ಹೆಗ್ಡೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.

ಕ್ರೀಮ್ ಸಿನಿಮಾ ಶೂಟಿಂಗ್ ವೇಳೆ ನಟಿ ಸಂಯುಕ್ತಾ ಹೆಗ್ಡೆ ಕಾಲಿಗೆ ಗಾಯ

ಇನ್ನು ನಿರ್ದೇಶಕ ಅಭಿಷೇಕ್ ಬಸಂತ್, ಹಾಗೂ ಛಾಯಾಗ್ರಾಹಕ ಸುನೋಜ್ ವೇಲಾಯುಧನ್ ರವರು ಡ್ಯೂಪ್ ಬಳಸಲು ಒತ್ತಾಯಿಸಿದರೂ, ಸಂಯುಕ್ತ ಹೆಗ್ಡೆ ಒಪ್ಪಿರಲಿಲ್ಲ. ಇದರ ಪರಿಣಾಮ ಸಂಯುಕ್ತ ಹೆಗಡೆ ಕಾಲು ಟ್ವಿಸ್ಟ್ ಆಗಿದ್ದು, ಕ್ರೀಮ್ ಸಿನಿಮಾದ ಚಿತ್ರೀಕರಣವನ್ನು ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.

actress-samyukta-hegdes
ಕ್ರೀಮ್ ಸಿನಿಮಾ ಶೂಟಿಂಗ್ ವೇಳೆ ನಟಿ ಸಂಯುಕ್ತಾ ಹೆಗ್ಡೆ ಕಾಲಿಗೆ ಗಾಯ

ಸಂಯುಕ್ತಾ ಹೆಗ್ಡೆ ಮುಖ್ಯ ಭೂಮಿಕೆಯಲ್ಲಿರೋ ಕ್ರೀಮ್ ಚಿತ್ರಕ್ಕೆ ಅಭಿಷೇಕ್ ಬಸಂತ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಕಥೆ, ಚಿತ್ರಕಥೆ, ಸಂಭಾಷಣೆ ಅಗ್ನಿ ಶ್ರೀಧರ್ ಅವರು ಬರೆಯುತ್ತಿದ್ದಾರೆ.

ಓದಿ :ವಿಶ್ವಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್ ಶುರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.