ETV Bharat / entertainment

ಸ್ಯಾಂಡಲ್​ವುಡ್​ಗೆ ಮತ್ತೆ ರಮ್ಯ ಚೈತ್ರಕಾಲ.. ಚಿತ್ರದ ಟೈಟಲ್ ಘೋಷಣೆ, ಯಾರು ನಾಯಕ? - ಆ್ಯಪಲ್ ಬಾಕ್ಸ್

ಮೋಹಕ ತಾರೆ ರಮ್ಯಾ ಸ್ಯಾಂಡಲ್​ವುಡ್​ಗೆ ಮರು ಪ್ರವೇಶಿಸಿದ್ದಾರೆ. ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಮೂಲಕ ನಾಯಕಿ ಹಾಗೂ ನಿರ್ಮಾಪಕಿಯಾಗಿ ರಮ್ಯಾ ಕಮ್ ಬ್ಯಾಕ್ ಮಾಡಿದ್ದಾರೆ.

ರಮ್ಯಾ
ರಮ್ಯಾ
author img

By

Published : Oct 5, 2022, 11:14 AM IST

Updated : Oct 5, 2022, 12:55 PM IST

ವಿಜಯದಶಮಿ ದಿನ ಮೋಹಕ ತಾರೆ ನಟಿ ರಮ್ಯಾ ಅಭಿಮಾನಿಗಳಿಗೆ ಖುಷಿ ಸುದ್ದಿ ನೀಡಿದ್ದಾರೆ. ಹೌದು, ನಾಯಕಿಯಾಗಿ ನಟಿಸುತ್ತಿರುವ ಹೊಸ ಚಿತ್ರದ ಟೈಟಲ್​ಅನ್ನು ರಮ್ಯಾ ಇಂದು ಬಹಿರಂಗಪಡಿಸಿದ್ದಾರೆ.

ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಮೂಲಕ ರಮ್ಯಾ ನಾಯಕಿಯಾಗಿ ಸ್ಯಾಂಡಲ್​ವುಡ್​ಗೆ ರೀ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರವನ್ನು ಆ್ಯಪಲ್ ಬಾಕ್ಸ್​ ಚಿತ್ರ ನಿರ್ಮಾಣ ಸಂಸ್ಥೆಯಡಿ ರಮ್ಯಾ ಅವರೇ ನಿರ್ಮಿಸುತ್ತಿದ್ದಾರೆ. ಇದು ರಮ್ಯಾ ಅವರ ಪ್ರೊಡಕ್ಷನ್​​​ನಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಚಿತ್ರವಾಗಿದೆ. ಗರುಡ ಗಮನ ಋಷಭ ವಾಹನದ ಮೂಲಕ ಮನೆಮಾತಾದ ರಾಜ್ ಬಿ ಶೆಟ್ಟಿ ಅವರು ನಿದೇಶನದ ಜೊತೆಗೆ ರಮ್ಯಾ ಜೊತೆ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಒಂದು ದಶಕಗಳ ಕಾಲ ಮೋಹಕ ತಾರೆಯಾಗಿ ಬೆಳ್ಳಿ ತೆರೆ ಮೇಲೆ ವಿಜೃಂಭಿಸಿದ ನಟಿ ಮೋಹಕ ತಾರೆ ರಮ್ಯಾ. ರಾಜಕೀಯದಿಂದ‌ ಸ್ವಲ್ಪ ದೂರು ಉಳಿದು ಮತ್ತೆ ಸಿನಿಮಾ ಇಂಡಸ್ಟ್ರೀಗೆ ಕಮ್ ಬ್ಯಾಕ್ ಮಾಡಿರೋದು ಅವರ ಕೋಟ್ಯಾಂತರ ಅಭಿಮಾನಿಗಳಿಗೆ ಖುಷಿ ತಂದಿದೆ.

ರಮ್ಯಾ ಹೊಸ ಚಿತ್ರದ ಟೈಟಲ್
ರಮ್ಯಾ ಹೊಸ ಚಿತ್ರದ ಟೈಟಲ್

ರಾಜ್ ಹೇಳಿದ ಕಥೆಗೆ ರಮ್ಯಾ ಇಂಪ್ರೆಸ್: ರಾಜ್ ಹೇಳಿದ ಕಥೆಯಿಂದ ಖುಷಿಯಾಗಿ ಈ ಚಿತ್ರವನ್ನು ನಾನೇ ನಿರ್ಮಾಣ ಮಾಡಬೇಕೆಂದು ನಿರ್ಧರಿಸಿ ನಿರ್ಮಿಸುತ್ತಿದ್ದೇನೆ ಎಂದು ರಮ್ಯಾ ಹೇಳಿದ್ದಾರೆ. ಸದ್ಯ ಪ್ರೀ-ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರವು ಸದ್ಯದಲ್ಲೇ ಪ್ರಾರಂಭವಾಗಲಿದೆ. ರಾಜ್ ಶೆಟ್ಟಿ ನಿರ್ದೇಶನದ ‘ಗರುಡ ಗಮನ ಋಷಭ ವಾಹನ’ ಚಿತ್ರಕ್ಕೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದ ಪ್ರವೀಣ್ ಶ್ರೀಯಾನ್ ಮತ್ತು ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ಇಲ್ಲೂ ಮುಂದುವರೆಯಲಿದ್ದಾರೆ.

ರಾಜ್ ಬಿ ಶೆಟ್ಟಿ
ರಾಜ್ ಬಿ ಶೆಟ್ಟಿ

ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರವನ್ನು ರಮ್ಯಾ ಅವರ ಆಪಲ್​ ಬ್ಯಾಕ್ಸ್ ಸ್ಟುಡಿಯೋಸ್ ಮತ್ತು ಲೈಟರ್ ಬುದ್ಧ ಫಿಲಂಸ್ ಜಂಟಿಯಾಗಿ ನಿರ್ಮಿಸುತ್ತಿವೆ. ಈ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.

(ಓದಿ: ಕಾಂತಾರ ನೋಡಿ ಮೆಚ್ಚಿದ ರಮ್ಯಾ, ರಿಷಬ್ ಅಪ್ಪಿಕೊಂಡು ಭಾವುಕರಾದ ರಕ್ಷಿತ್​)

Last Updated : Oct 5, 2022, 12:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.