ಒಂದು ದಶಕ ಕಾಲ ವಿಭಿನ್ನ ಸಿನಿಮಾಗಳಲ್ಲಿ ನಾಯಕಿ ಸ್ಥಾನ ವಹಿಸಿ ಬೆಳ್ಳಿತೆರೆ ಮೇಲೆ ಮಿಂಚಿದ ನಟಿ ರಮ್ಯಾ ಕೊನೆಗೂ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡುವುದಾಗಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಆಗುವ ಸುದ್ದಿ ತಿಳಿಸಿದ್ದು ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ.
ಹಲವು ವರ್ಷಗಳಿಂದ ಸಿನಿಮಾ ಮಾಡದಿದ್ರೂ ಸ್ಯಾಂಡಲ್ವುಡ್ ಕ್ವೀನ್, ಮೋಹಕ ತಾರೆಯಾಗಿ ಈಗಲೂ ಕನ್ನಡ ಚಿತ್ರರಂಗದಲ್ಲಿ ತನ್ನದೇ ಸ್ಟಾರ್ ಡಮ್ ಹೊಂದಿದ ನಟಿ ಅಂದ್ರೆ ಅದು ರಮ್ಯಾ. ಕನ್ನಡ ಸಿನಿಮಾಗಳಿಗೆ ಸಪೋರ್ಟ್ ಮಾಡುತ್ತಾ, ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್ ಆಗಿದ್ದ ಮೋಹಕರ ತಾರೆ ಯಾವಾಗ ಸಿನಿಮಾ ಮಾಡುತ್ತಾರೆ ಅನ್ನೋದು ಅವರ ಅಭಿಮಾನಿಗಳಲ್ಲಿ ಕಾಡುತ್ತಿದ್ದ ಪ್ರಶ್ನೆಯಾಗಿತ್ತು. ನಾಗರಹಾವು ಸಿನಿಮಾ ಬಳಿಕ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಉಳಿದಿದ್ದ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುವ ಬಗ್ಗೆ ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಸುಳಿವು ನೀಡಿದ್ದರು.
ಅದರಂತೆ ನಟಿ ರಮ್ಯಾ ಈಗ ಸಿನಿಮಾ ಇಂಡಸ್ಟ್ರಿಯಲ್ಲಿ ನಿರ್ಮಾಪಕಿಯಾಗಿ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಈ ವಿಚಾರವನ್ನು ಗಣೇಶ ಹಬ್ಬದ ಈ ಶುಭದಿನದಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರೋದು ಹೀಗೆ ನೋಡಿ.
''ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು. ಸಿಹಿ ಸುದ್ದಿಯ ಕುರಿತು ನಿಮ್ಮೆಲ್ಲರ ಊಹೆ ಸರಿಯಾಗಿದೆ. ಹೌದು, ನಾನು ಮತ್ತೆ ಚಿತ್ರರಂಗಕ್ಕೆ ಹಿಂದಿರುಗುತ್ತಿದ್ದೇನೆ. ಆದರೆ ಈ ಬಾರಿ ನನ್ನ ಸಿನಿಮಾ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಸ್ಟಡಿಯೋಸ್ ಮೂಲಕ ನಿರ್ಮಾಪಕಿಯಾಗಲಿದ್ದೇನೆ ಎನ್ನುವುದು ವಿಶೇಷ.
-
Happy Ganesha Habba ♥️
— Divya Spandana/Ramya (@divyaspandana) August 31, 2022 " class="align-text-top noRightClick twitterSection" data="
Here’s to new beginnings🤗@StudiosApplebox #AppleBoxStudios pic.twitter.com/or7qx6e6EB
">Happy Ganesha Habba ♥️
— Divya Spandana/Ramya (@divyaspandana) August 31, 2022
Here’s to new beginnings🤗@StudiosApplebox #AppleBoxStudios pic.twitter.com/or7qx6e6EBHappy Ganesha Habba ♥️
— Divya Spandana/Ramya (@divyaspandana) August 31, 2022
Here’s to new beginnings🤗@StudiosApplebox #AppleBoxStudios pic.twitter.com/or7qx6e6EB
ಏನಿದು ಆ್ಯಪಲ್ ಬಾಕ್ಸ್? ಅದೊಂದು ಸಾಧಾರಣವಾದ, ಆದರೆ ಅಷ್ಟೇ ಉಪಯುಕ್ತವಾದ, ಪುಟ್ಟ ಮರದ ಪೆಟ್ಟಿಗೆ. ನನ್ನ ಚಿತ್ರರಂಗದ ಪಯಣದುದ್ದಕ್ಕೂ ನಿರಂತರವಾಗಿ ಆ್ಯಪಲ್ ಬಾಕ್ಸ್ ಜೊತೆಗಿದೆ. ಸೆಟ್ನಲ್ಲಿ ಕೂರಲು ಕುರ್ಚಿಗಳಿಲ್ಲದೇ ಇದ್ದಾಗ ಅಥವಾ ಕ್ಯಾಮರಾ ಇಲ್ಲವೇ ನಟರ ಎತ್ತರ ಹೆಚ್ಚಿಸಬೇಕಾದಾಗ ಈ ಆ್ಯಪಲ್ ಬಾಕ್ಸ್ ನೆರವಿಗೆ ಬಂದಿದೆ - ಈ ಪೆಟ್ಟಿಗೆಯ ಸರಳತೆ ನನಗೆ ಸದಾ ಸ್ಫೂರ್ತಿಯಾಗಿ ನನ್ನನ್ನು ಪ್ರೇರೇಪಿಸಿದೆ.
ಪ್ರಸ್ತುತ ಆ್ಯಪಲ್ ಬಾಕ್ಸ್ ಸಂಸ್ಥೆ ಎರಡು ಚಿತ್ರಗಳನ್ನು ನಿರ್ಮಿಸಲು ಸಜ್ಜಾಗಿದೆ ಎಂದು ಹೇಳುವಲ್ಲಿ ನನಗೆ ಸಂತಸವಿದೆ. ಈ ಎರಡೂ ಚಿತ್ರಗಳು ಕೆ.ಆರ್.ಜಿ ಸಂಸ್ಥೆಯ ವಿತರಣೆಯ ಮೂಲಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿವೆ. ಅದರ ಜೊತೆಯಲ್ಲೇ ಒ.ಟಿ.ಟಿ ಪ್ಲಾಟ್ ಫಾರಂಗಳಿಗಾಗಿ ಸಿನಿಮಾ ಹಾಗು ವೆಬ್ ಸೀರೀಸ್ ನಿರ್ಮಾಣ ಮಾಡಲು ಆ್ಯಪಲ್ ಬಾಕ್ಸ್ ಸ್ಟುಡಿಯೋಸ್ ಸಿದ್ಧವಾಗುತ್ತಿದೆ.
ಇದನ್ನೂ ಓದಿ: ನಾಳೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡಲಿದ್ದಾರೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ
ಈ ಬಗ್ಗೆ ಮತ್ತಷ್ಟು ಹೊಸ ವಿವರಗಳನ್ನು ಆ್ಯಪಲ್ ಬಾಕ್ಸ್‌ನ ಸಾಮಾಜಿಕ ಜಾಲತಾಣಗಳಲ್ಲಿ ನಿರೀಕ್ಷಿಸಿ. ನನ್ನೆಲ್ಲಾ ಪ್ರಯತ್ನಗಳಲ್ಲೂ ನಿರಂತರವಾಗಿ ಜೊತೆಗಿರುವ ನನ್ನ ಕುಟುಂಬ, ಸ್ನೇಹಿತರು, ಹಿತೈಷಿಗಳು, ಸಿನಿಮಾ ವರ್ಗದವರು ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ನನ್ನ ಪ್ರೀತಿಯ ಅಭಿಮಾನಿಗಳಿಗೆ ಹೃತ್ಪೂರ್ವಕ ವಂದನೆಗಳು, ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹ ಬೆಲೆ ಕಟ್ಟಲಾಗದ್ದು.
ಇದರ ಜೊತೆಗೆ ವಿಜಯ ಕಿರಗಂದೂರ್, ಜಯಣ್ಣ, ಯೋಗಿ ಜಿ ರಾಜ್ ಮತ್ತ ಕಾರ್ತಿಕ್ ಗೌಡ ಇವರಿಗೂ ವಿಶೇಷ ಧನ್ಯವಾದಗಳು. ಹೊಸ ಆರಂಭದತ್ತ ಹೆಜ್ಜೆ ಇಡುತ್ತಾ ಕೃತಜ್ಞತೆಗಳೊಂದಿಗೆ ರಮ್ಯಾ'' ಎಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.