ETV Bharat / entertainment

'ತಾಯಿಯೂ ಮನುಷ್ಯಳೇ, ಸುಳ್ಳು ಸುದ್ದಿ ಹರಡಬೇಡಿ': ಮೀನಾ ಮಗಳು ಭಾವುಕ, ರಜಿನಿ ಕಣ್ಣೀರು! - ಈಟಿವಿ ಭಾರತ ಕನ್ನಡ

ನಟಿ ಮೀನಾ ಮಗಳು ನೈನಿಕಾ ತನ್ನ ತಾಯಿ ಬಗ್ಗೆ ಮಾತನಾಡಿರುವ ವಿಡಿಯೋ ನೋಡಿ ರಜಿನಿಕಾಂತ್​ ಸೇರಿದಂತೆ ಇತರ ಸಿನಿ ತಾರೆಯರು ಭಾವುಕರಾದರು.

meena
ಮೀನಾ ಮಗಳು ಭಾವುಕ, ರಜನಿ ಕಣ್ಣೀರು
author img

By

Published : Apr 22, 2023, 1:02 PM IST

ಬಾಲ ಕಲಾವಿದೆಯಾಗಿ ಬಣ್ಣದ ಲೋಕಕ್ಕೆ ಪ್ರವೇಶಿಸಿ ಸ್ಟಾರ್​ ಹಿರೋಯಿನ್​ ಆಗಿ ಮೆರೆದ ನಟಿ ಮೀನಾ. ಸುಮಾರು ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಸ್ಟಾರ್​ ನಾಯಕಿಯಾಗಿ ಮಿಂಚಿದರು. ಇವರು ಕಮಲ್​ ಹಾಸನ್​, ರಜಿನಿಕಾಂತ್​, ಚಿರಂಜೀವಿ, ಬಾಲಕೃಷ್ಣ, ವೆಂಕಟೇಶ್​, ನಾಗಾರ್ಜುನ, ರವಿಚಂದ್ರನ್​ ಸೇರಿದಂತೆ ಅನೇಕ ಟಾಪ್​ ಹೀರೋಗಳ ಜೊತೆ ನಟಿಸಿದ್ದಾರೆ.

ಬಹುಭಾಷಾ ತಾರೆಯಾಗಿ ಮಿಂಚಿ ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ್ದಾರೆ. ಇವರು ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿರುವಾಗಲೇ 2009 ರಲ್ಲಿ ಬೆಂಗಳೂರು ಮೂಲದ ಉದ್ಯಮಿ ವಿದ್ಯಾಸಾಗರ್​ ಅವರನ್ನು ಮದುವೆಯಾದರು. ಇವರಿಬ್ಬರ ಪ್ರೀತಿಯ ಸಂಕೇತವಾಗಿ ನೈನಿಕಾ ಎಂಬ ಮಗುವೂ ಜನಿಸಿತು. ಆದರೆ ಅವರ ಬದುಕಿನಲ್ಲಿ ಬಿರುಗಾಳಿಯೊಂದು ಬೀಸಿತು. ಅವರ ಪತಿ ಕಳೆದ ವರ್ಷ ಜೂನ್​ನಲ್ಲಿ ನಿಧನರಾದರು.

ಸದ್ಯ ಮೀನಾ ಹಲವು ಸಿನಿಮಾಗಳಲ್ಲಿ ನಟಿಸುತ್ತಾ ಆ ನೋವಿನಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಈ ಮಧ್ಯೆ ಅವರು ಚಿತ್ರರಂಗಕ್ಕೆ ಕಾಲಿಟ್ಟು 40 ವರ್ಷ ಪೂರೈಸಿದ್ದಾರೆ. ಈ ಸಂದರ್ಭದಲ್ಲಿ ಕಳೆದ ತಿಂಗಳು ಚೆನ್ನೈನಲ್ಲಿ ಮೀನಾ ಅವರಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತಮಿಳು ಚಿತ್ರರಂಗದ ಎಲ್ಲ ತಾರೆಯರು ಸಮಾರಂಭದಲ್ಲಿ ಭಾಗಿಯಾಗಿದ್ದರು.

ಈ ವೇಳೆ ಬಹುಭಾಷಾ ತಾರೆಯಾಗಿ ಮಿಂಚಿದ ಮೀನಾ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ರಜನಿಕಾಂತ್​, ಬೋನಿ ಕಪೂರ್​, ರಾಧಿಕಾ, ರೋಜಾ, ಸಾಂಘವಿ, ಸ್ನೇಹಾ, ಪ್ರಭುದೇವ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಎಲ್ಲರೂ ವೇದಿಕೆಯ ಮೇಲೆ ಮೀನಾ ಜೊತೆಗಿನ ಒಡನಾಟದ ಸುಂದರ ನೆನಪನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ನೈನಿಕಾ ತಾಯಿ ಬಗ್ಗೆ ಮಾತನಾಡಿದ ವಿಡಿಯೋವನ್ನು ಮೀನಾಗೆ ಸರ್ಪ್ರೈಸ್​ ಆಗಿ ತೋರಿಸಲಾಯಿತು. ಮೀನಾ ಮಗಳು ನೈನಿಕಾ ಮಾತಿಗೆ ರಜನಿಕಾಂತ್​ ಸೇರಿದಂತೆ ಹಲವು ಸಿನಿಮಾ ತಾರೆಯರು ಭಾವುಕರಾದರು.

ಇದನ್ನೂ ಓದಿ: ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರೊಂದಿಗೆ ಕಿಚ್ಚ ಸುದೀಪ್​ ಸಿನಿಮಾ

"ಅಮ್ಮಾ, ನೀನು ಈ ಮಟ್ಟಕ್ಕೆ ಬಂದಿದ್ದಕ್ಕೆ ನಿಜಕ್ಕೂ ಹೆಮ್ಮೆಯಾಗುತ್ತದೆ. ನಟಿಯಾಗಿ ನೀನು ಕಷ್ಟಪಟ್ಟು ಕೆಲಸ ಮಾಡುತ್ತೀಯ. ತಾಯಿಯಾಗಿ ನೀನು ನನ್ನನ್ನು ಯಾವಾಗಲೂ ನೋಡಿಕೊಳ್ಳುತ್ತೀಯ. ನಾನು ಚಿಕ್ಕವಳಿದ್ದಾಗ ನಾವು ಶಾಪಿಂಗ್​ ಮಾಲ್​ಗೆ ಹೋಗಿದ್ದೆವು. ನಾನು ನಿನಗೆ ಹೇಳದೆ ಬೇರೆ ಅಂಗಡಿಯಲ್ಲಿ ಹೋಗಿ ಚಾಕೊಲೇಟ್ ತಿಂದೆ. ಆಗ ನೀನು ಎಷ್ಟು ಆತಂಕದಲ್ಲಿದ್ದಿ ಎಂಬುದು ನನಗೆ ಅರ್ಥವಾಗುತ್ತದೆ. ನನ್ನನ್ನು ಕ್ಷಮಿಸು. ನನ್ನ ತಂದೆಯ ಮರಣದ ನಂತರ ನೀವು ಖಿನ್ನತೆಗೆ ಒಳಗಾಗಿದ್ದೀರಿ. ನೀವು ಮಾನಸಿಕವಾಗಿ ಕುಗ್ಗಿದ್ದೀರಿ. ಇನ್ನು ಮುಂದೆ ನಿನ್ನನ್ನು ನಾನು ನೋಡಿಕೊಳ್ಳುತ್ತೇನೆ. ಇತ್ತೀಚೆಗೆ ಸುದ್ದಿ ವಾಹಿನಿಗಳು ನಿಮ್ಮ ಬಗ್ಗೆ ಸುಳ್ಳು ಸುದ್ದಿಗಳನ್ನು ಬರೆಯುತ್ತಿವೆ. ನನ್ನ ತಾಯಿಯೂ ಮನುಷ್ಯರು, ಅವರಲ್ಲಿ ಭಾವನೆಗಳಿವೆ. ದಯವಿಟ್ಟು ಇಂತಹ ಸುದ್ದಿಗಳನ್ನು ಬರೆಯಬೇಡಿ" ಎಂದು ನೈನಿಕಾ ವಿಡಿಯೋದಲ್ಲಿ ಕೇಳಿಕೊಂಡಿದ್ದಾರೆ.

ಈ ವಿಡಿಯೋ ನೋಡಿದ ಸೂಪರ್​ ಸ್ಟಾರ್​ ರಜಿನಿಕಾಂತ್​ ಕಣ್ಣೀರು ಹಾಕಿದ್ದಾರೆ. ಜೊತೆಗೆ ಇತರ ಸೆಲೆಬ್ರಿಟಿಗಳು ಕೂಡ ಭಾವುಕರಾಗಿದ್ದಾರೆ. ಈ ವಿಡಿಯೋ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಅಮ್ಮನ ಬಗೆಗಿನ ಮಗಳ ಮಾತು ಕೇಳಿ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ: ಲೂಸ್​ ಮಾದ ಯೋಗಿಗೆ 'ರೋಸಿ 45' ಟೈಟಲ್​ ಬಿಟ್ಟು ಕೊಟ್ಟ ಶಿವಣ್ಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.