ETV Bharat / entertainment

25 ವರ್ಷಗಳ ನಂತರ ಬಾಲಿವುಡ್​​ ಲೋಕಕ್ಕೆ ಮರಳಿದ ನಟಿ ಜ್ಯೋತಿಕಾ!

author img

By

Published : May 15, 2023, 1:12 PM IST

1998 ರಲ್ಲಿ ಬಾಲಿವುಡ್​ ಚಿತ್ರದ ಮೂಲಕ ಸಿನಿಮಾ ಪ್ರಯಾಣ ಆರಂಭಿಸಿದ ನಟಿ ಜ್ಯೋತಿಕಾ ಇದೀಗ ಮತ್ತೆ ಹಿಂದಿ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ.

Actress Jyothika returned to Bollywood after 25 years

ಮುಂಬೈ: ನಟಿ ಜ್ಯೋತಿಕಾ ಎರಡು ದಶಕಗಳ ಬಳಿಕ ಹಿಂದಿ ಚಿತ್ರರಂಗಕ್ಕೆ ಮರಳಲು ಸಜ್ಜಾಗಿ ನಿಂತಿದ್ದಾರೆ. ಹಿಂದಿ ಚಿತ್ರಲೋಕದಿಂದ ದೂರವೇ ಉಳಿದಿದ್ದ ಇವರೀಗ ಅಜಯ್​ ದೇವಗನ್​, ಆರ್.ಮಧವನ್​ ಅಭಿನಯದ ಥ್ರಿಲ್ಲರ್​ ಚಿತ್ರದಲ್ಲಿ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಚಿತ್ರವನ್ನು ವಿಕಾಸ್​ ಬಹ್ಲ್​​ ನಿರ್ದೇಶಿಸುತ್ತಿದ್ದು, 25 ವರ್ಷಗಳ ಬಳಿಕ ಹಿಂದಿಯಲ್ಲಿ ನಟಿಸುತ್ತಿದ್ದು, ಮೊದಲ ಬಾರಿಗೆ ಅಜಯ್​ ದೇವಗನ್​ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ.

1998 ರಲ್ಲಿ ಜ್ಯೋತಿಕಾ ಬಾಲಿವುಡ್​​ನಲ್ಲಿ ಮೊದಲ ಅದೃಷ್ಟ ಪರೀಕ್ಷೆ ನಡೆಸಿದ್ದರು. 'ಡೋಲಿ ಸಜ್ ಕೀ ರಖನಾ' ಎಂಬ ರೋಮ್ಯಾಂಟಿಕ್ ಚಿತ್ರದಲ್ಲಿ ಅಕ್ಷಯ್​ ಖನ್ನಾ ಜೊತೆಗೆ ನಟಿಸಿದ್ದರು. ಇದಾದ ಬಳಿಕ ತಮಿಳು ಚಿತ್ರರಂಗದತ್ತ ಮುಖ ಮಾಡಿದ್ದು ತೆಲುಗು, ಕನ್ನಡ, ಮಲಯಾಳಂ ಚಿತ್ರರಂಗದಲ್ಲಿ ಬ್ಯುಸಿಯಾದರು. ತಮಿಳಿನಲ್ಲಿ ಸಿಕ್ಕಾಪಟ್ಟೆ ಹೆಸರು ಗಳಿಸಿದ್ದು, ಕಡೆಯದಾಗಿ ಉದನಪಿರಪ್ಪೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಮಲಯಾಳಂನಲ್ಲಿ ಮಮ್ಮುಟಿ ಕಥಾಲ್‌ದ ಕೋರ್​ ಚಿತ್ರದ ಶೂಟಿಂಗ್​ ಮುಗಿಸಿದ್ದಾರೆ.

ವಿಶಿಷ್ಟ ಕಥೆಗಳನ್ನು ಅಯ್ಕೆ ಮಾಡಿಕೊಂಡು ಅಭಿನಯಕ್ಕೆ ಹೆಚ್ಚು ಒತ್ತು ನೀಡುತ್ತಿರುವ ನಟಿ ಜ್ಯೋತಿಕಾ. ತಿಂಗಳ ಹಿಂದೊಮ್ಮೆ ಮತ್ತೆ ಹಿಂದಿ ಚಿತ್ರರಂಗಕ್ಕೆ ಮರಳುವುದಾಗಿ ಘೋಷಿಸಿದ್ದರು. ಅನೇಕ ಜನರಿಗೆ ಸ್ಪೂರ್ತಿಯಾಗಿರುವ ಚಿತ್ರದಲ್ಲಿ ಭಾಗಿಯಾಗುತ್ತಿರುವುದಕ್ಕೆ ಸಂತಸವಾಗುತ್ತಿದೆ. ಶ್ರೀಕಾಂತ್​​ ಬೊಳ್ಳಾ ಅವರ ಪ್ರೇರಣಾದಾಯಕ ಕಥೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು.

ಚಿತ್ರಕ್ಕೆ ಶ್ರೀ ಎಂದು ಹೆಸರಿಡಲಾಗಿದೆ. ಈಗಾಗಲೇ ಪ್ರಿ ಪ್ರೋಡಕ್ಷನ್​ ಕೆಲಸ ಆರಂಭವಾಗಿದೆ. ಜೂನ್​ನಿಂದ ಚಿತ್ರದ ಶೂಟಿಂಗ್​ ಆರಂಭವಾಗಲಿದೆ. ಚಿತ್ರದ ಕಥೆ, ಶೂಟಿಂಗ್​ ಸ್ಥಳ ಸೇರಿದಂತೆ ಇನ್ನಿತರ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಭಾರಿ ಬಜೆಟ್​​ನಲ್ಲಿ ಚಿತ್ರ ನಿರ್ಮಿಸಲಾಗುತ್ತಿದೆ. ಬಹುತೇಕ ಚಿತ್ರೀಕರಣ ಮುಂಬೈ, ಮಸ್ಸೂರಿ ಮತ್ತು ಲಂಡನ್​ನಲ್ಲಿ ನಡೆಯಲಿದೆ. ಈಗಾಗಲೇ 'ಕ್ವೀನ್'​ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಯನ್ನು ನಿರ್ದೇಶಕ ವಿಕಾಸ್​ ಪಡೆದಿದ್ದು, ಈ ಬಾರಿ ಅವರು ಥ್ರಿಲ್ಲರ್​ ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

ಚಿತ್ರದ ಮತ್ತೊಂದು ವಿಶೇಷತೆ ಎಂದರೆ, ಅಜಯ್​ ದೇವಗನ್​ ನಟನೆಯ ಜೊತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಅಜಯ್ ಮತ್ತು ದೃಶ್ಯಂ ತಯಾರಕ ಕುಮಾರ್ ಮಂಗತ್ ಪಾಠಕ್ ಮತ್ತು ಅಭಿಷೇಕ್ ಪಾಠಕ್, ಎಫ್‌ಫಿಲ್ಮ್ ಮತ್ತು ಪನೋರಮಾ ಸ್ಟುಡಿಯೋಸ್ ಬ್ಯಾನರ್‌ನಡಿ ಜಂಟಿಯಾಗಿ ಚಿತ್ರ ನಿರ್ಮಿಸಲಿದ್ದಾರೆ.

ಅಜಯ್​ ಅವರ ಬೋಲಾ ಚಿತ್ರ ಬಾಲಿವುಡ್​ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದು, ಜಾಗತಿಕವಾಗಿ 112 ಕೋಟಿ ರೂ ಗಳಿಕೆ ಮಾಡಿದೆ. ಇದಕ್ಕೂ ಮುನ್ನ ಅವರ ನಟನೆಯ ದೃಶ್ಯಂ 2 ಚಿತ್ರ ಬಿಡುಗಡೆಯಾಗಿದ್ದು, 345 ಕೋಟಿ ರೂ ಬಾಚಿಕೊಂಡಿತು.

ಇದನ್ನೂ ಓದಿ: ಡೆನಿಮ್​ ಲುಕ್​ನಲ್ಲಿ ಕಂಗೊಳಿಸಿದ ಆಲಿಯಾ: ಈ ಉಡುಗೆ ಬೆಲೆ ಬರೋಬ್ಬರಿ 12 ಲಕ್ಷವಂತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.