ETV Bharat / entertainment

ಖ್ಯಾತ ನಟಿ ಜಯಪ್ರದಾಗೆ 6 ತಿಂಗಳ ಶಿಕ್ಷೆ ವಿಧಿಸಿದ ನ್ಯಾಯಾಲಯ - ಇಎಸ್‌ಐ ಹಣ ಪಾವತಿಸಿಲ್ಲ ಎಂದು ಕಾರ್ಮಿಕರು

ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರಿಗೆ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ACTRESS JAYAPRADA JAIL  ACTRESS JAYAPRADA SENTENCED TO 6 MONTHS IN JAIL  ACTRESS JAYAPRADA news  ಖ್ಯಾತ ನಟಿ ಜಯಪ್ರದಾಗೆ 6 ತಿಂಗಳ ಶಿಕ್ಷೆ  ಜಯಪ್ರದಾಗೆ 6 ತಿಂಗಳ ಶಿಕ್ಷೆ ವಿಧಿಸಿದ ನ್ಯಾಯಾಲಯ  ನಟಿ ಹಾಗೂ ಸಂಸದೆ ಜಯಪ್ರದಾ  6 ತಿಂಗಳ ಜೈಲು ಶಿಕ್ಷೆ ವಿಧಿಸಿ ಆದೇಶ  ಚೆನ್ನೈ ಎಗ್ಮೋರ್ ನ್ಯಾಯಾಲಯ  ಜಯಪ್ರದಾ ಅವರಿಗೆ 6 ತಿಂಗಳ ಜೈಲು ಶಿಕ್ಷೆ  ಜಯಪ್ರದಾ ನಡೆಸುತ್ತಿದ್ದ ಚಿತ್ರಮಂದಿರ  ಇಎಸ್‌ಐ ಹಣ ಪಾವತಿಸಿಲ್ಲ ಎಂದು ಕಾರ್ಮಿಕರು  ರಾಜ್ಯ ವಿಮಾ ನಿಗಮಕ್ಕೆ ದೂರು
ಖ್ಯಾತ ನಟಿ ಜಯಪ್ರದಾಗೆ 6 ತಿಂಗಳ ಶಿಕ್ಷೆ ವಿಧಿಸಿದ ನ್ಯಾಯಾಲಯ
author img

By

Published : Aug 11, 2023, 1:50 PM IST

Updated : Aug 11, 2023, 2:21 PM IST

ಚೆನ್ನೈ, ತಮಿಳುನಾಡು: ಚೆನ್ನೈ ಎಗ್ಮೋರ್ ನ್ಯಾಯಾಲಯ ಖ್ಯಾತ ನಟಿ ಹಾಗೂ ಮಾಜಿ ಸಂಸದೆ ಜಯಪ್ರದಾ ಅವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಜಯಪ್ರದಾ ನಡೆಸುತ್ತಿದ್ದ ಚಿತ್ರಮಂದಿರದಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಇಎಸ್‌ಐ ಹಣ ಪಾವತಿಸಿಲ್ಲ ಎಂದು ಕಾರ್ಮಿಕರು ರಾಜ್ಯ ವಿಮಾ ನಿಗಮಕ್ಕೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜಯಪ್ರದಾ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಈಗ ತೀರ್ಪು ಪ್ರಕಟವಾಗಿದ್ದು, ಚೆನ್ನೈ ಎಗ್ಮೋರ್​ ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಜಯಪ್ರದಾ ಅವರು ಚೆನ್ನೈನ ರಾಯಪೇಟಾದಲ್ಲಿ ಚಿತ್ರಮಂದಿರ ಹೊಂದಿದ್ದಾರೆ. ಚೆನ್ನೈನ ರಾಮ್ ಕುಮಾರ್ ಅಣ್ಣಾ ರಸ್ತೆಯಲ್ಲಿ ರಾಜಬಾಬು ಜತೆ ಸೇರಿ ಚಿತ್ರಮಂದಿರ ನಡೆಸುತ್ತಿದ್ದರು. ಸಿನಿಮಾ ಥಿಯೇಟರ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರು ಇಎಸ್‌ಐ ಮೊತ್ತ ಪಾವತಿಸಿಲ್ಲ ಎಂದು ಆರೋಪಿಸಿ ಎಗ್ಮೋರ್ ನ್ಯಾಯಾಲಯದ ಮೊರೆ ಹೋಗಿದ್ದರು.

ಕಾರ್ಮಿಕ ಸರ್ಕಾರಿ ವಿಮಾ ನಿಗಮವು ಚೆನ್ನೈನ ಎಗ್ಮೋರ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು. ಪ್ರಕರಣವನ್ನು ವಜಾಗೊಳಿಸುವಂತೆ ಕೋರಿ ಜಯಪ್ರದಾ ಸೇರಿದಂತೆ ಮೂವರು ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅದಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಪರಿಶೀಲಿಸಿದ ಚೆನ್ನೈ ಎಗ್ಮೋರ್ ಕೋರ್ಟ್ ಜಯಪ್ರದಾ ಮತ್ತು ಇತರ ಮೂವರಿಗೆ ಆರು ತಿಂಗಳ ಶಿಕ್ಷೆ ವಿಧಿಸಿದೆ.

ಕಾರ್ಮಿಕರಿಗೆ ನೀಡಬೇಕಾದ ಮೊತ್ತವನ್ನು ನೀಡುವುದಾಗಿ ಜಯಪ್ರದಾ ನ್ಯಾಯಾಲಯಕ್ಕೆ ತಿಳಿಸಿದ್ದರು. ಅದಕ್ಕೆ ಕಾರ್ಮಿಕ ಸರ್ಕಾರಿ ವಿಮಾ ನಿಗಮದ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಎರಡೂ ಕಡೆಯ ವಾದ ಆಲಿಸಿದ ನ್ಯಾಯಾಲಯ ಅಂತಿಮವಾಗಿ ಜಯಪ್ರದಾ ಸೇರಿದಂತೆ ಮೂವರಿಗೆ ಆರು ತಿಂಗಳ ಜೈಲು ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಿ ಆದೇಶಿಸಿದೆ.

ಓದಿ: ಅಜಂ ಖಾನ್​ಗೆ ಮುಳುವಾಗುತ್ತಾ 'ಖಾಕಿ' ಕಾಮೆಂಟ್​...ವಿಜಯ ಸಾಧಿಸಲಿದ್ದಾರಾ ಜಯಪ್ರದಾ ?

Last Updated : Aug 11, 2023, 2:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.