ETV Bharat / entertainment

ಮದುವೆಯ ಸುಂದರ ಕ್ಷಣಗಳನ್ನು ಹಂಚಿಕೊಂಡ ನಟಿ ಹನ್ಸಿಕಾ ಮೋಟ್ವಾನಿ - ಹನ್ಸಿಕಾ ಸೊಹೈಲ್ ವಿವಾಹ ಫೋಟೋ

ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಮತ್ತು ಉದ್ಯಮಿ ಸೊಹೈಲ್ ಕಥುರಿಯಾ ಅವರ ಮದುವೆ ಸಮಾರಂಭದ ಫೋಟೋಗಳು ಇಲ್ಲಿವೆ.

Actress Hansika Motwani shares wedding pics
ಹನ್ಸಿಕಾ ಮೋಟ್ವಾನಿ - ಸೊಹೈಲ್ ಕಥುರಿಯಾ ಮದುವೆ
author img

By

Published : Dec 6, 2022, 1:02 PM IST

ತೆಲುಗು ಚಿತ್ರರಂಗದ ಖ್ಯಾತ ನಟಿ ಹನ್ಸಿಕಾ ಮೋಟ್ವಾನಿ ಮತ್ತು ಉದ್ಯಮಿ ಸೊಹೈಲ್ ಕಥುರಿಯಾ ವಿವಾಹ ಸಮಾರಂಭ ಭಾನುವಾರ ಜೈಪುರದ ಮಂಡೋಟಾ ಕೋಟೆಯಲ್ಲಿ ಅದ್ಧೂರಿಯಾಗಿ ನೆರವೇರಿದೆ. ಕಾರ್ಯಕ್ರಮಕ್ಕೆ ಆತ್ಮೀಯರು, ಚಿತ್ರರಂಗದವರು ಸಾಕ್ಷಿಯಾಗಿದ್ದರು. ಮುಂದಿನ ಜೀವನ ಸುಖಕರವಾಗಿರಲೆಂದು ಅಭಿಮಾನಿಗಳು ಹಾಗು ಸಿನಿಮಾ ರಂಗದವರು ಈ ನವಜೋಡಿಗೆ ಹಾರೈಸಿದ್ದಾರೆ.

Actress Hansika Motwani shares wedding pics
ಹನ್ಸಿಕಾ ಮೋಟ್ವಾನಿ - ಸೊಹೈಲ್ ಕಥುರಿಯಾ ಮದುವೆ

ಇದನ್ನೂ ಓದಿ: ರಾಜಸ್ಥಾನದ ಕೋಟೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹನ್ಸಿಕಾ ಮೋಟ್ವಾನಿ: ಮದುವೆ ವಿಡಿಯೋ

ಈ ಮದುವೆಯಿಂದ ಹನ್ಸಿಕಾ ಎಷ್ಟು ಖುಷಿಯಾಗಿದ್ದಾರೆ ಎಂಬುದು ಅವರ ಮದುವೆ ಸಂಭ್ರಮದಲ್ಲಿ ಗೋಚರಿಸಿತ್ತು. ಇದೀಗ ಹನ್ಸಿಕಾ ಅವರು ಮದುವೆಯ ಕೆಲವು ಸುಂದರವಾದ ಚಿತ್ರಗಳನ್ನು ತಮ್ಮ ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ. ಹನ್ಸಿಕಾ ಮದುವೆಯ ಈ ಚಿತ್ರಗಳಿಗೆ ಚಿತ್ರರಂಗದ ತಾರೆಯರು ಹಾಗೂ ಲಕ್ಷಾಂತರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿ ನಟಿ ಹನ್ಸಿಕಾ.. ಸಡಗರದ ವಿಡಿಯೋ ನೋಡಿ!

ಜೈಪುರದ 450 ವರ್ಷಗಳಷ್ಟು ಹಳೆಯದಾದ ಮಂಡೋಟಾ ಕೋಟೆಯಲ್ಲಿ ಹನ್ಸಿಕಾ ಅವರು ಸೊಹೈಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಗೆ ಥೇಟ್ ಮದುವಣಗಿತ್ತಿಯಂತೆ ಶೃಂಗಾರಗೊಂಡಿತ್ತು ಮಂಡೋಟಾ ಕೋಟೆ. ಸಮಾಜ ಸೇವೆಯಲ್ಲಿ ಸಕ್ರಿಯರಾಗಿರುವ ಹನ್ಸಿಕಾ ಅವರು ತಮ್ಮ ಈ ಶುಭ ಸಂದರ್ಭಕ್ಕೆ ಬಡ ಮಕ್ಕಳನ್ನೂ ಆಹ್ವಾನಿಸಿದ್ದರು. ಸುತ್ತಮುತ್ತಲಿನ ಅನಾಥಾಶ್ರಮಕ್ಕೆ ಊಟ ಸೇರಿದಂತೆ ಕೆಲ ಉಡುಗೊರೆ ಕಳುಹಿಸಿಕೊಟ್ಟಿದ್ದರು. ಮದುವೆಗೆ ಆಗಮಿಸಿದ ಎಲ್ಲಾ ಅತಿಥಿಗಳನ್ನು ರಾಯಲ್ ಶೈಲಿಯಲ್ಲಿ ಸತ್ಕಾರ ಮಾಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.