ETV Bharat / entertainment

ಫಿಟ್ನೆಸ್​ ಐಕಾನ್​ ಅಂದ್ರೆ ಸುಮ್ನೆನಾ?: ನಟಿಮಣಿಯರ ಸೌಂದರ್ಯದ ರಹಸ್ಯ ಗೊತ್ತೇ? - ದಿಶಾ ಪಟಾನಿ ವರ್ಕ್ಔಟ್

ನಟಿ ದಿಶಾ ಪಟಾನಿ ತಮ್ಮ ಇನ್​ಸ್ಟಾ ಸೋರಿಯಲ್ಲಿ ವ್ಯಾಯಾಮದ ವಿಡಿಯೋ ಹಂಚಿಕೊಂಡಿದ್ದಾರೆ.

Disha patani fitness secrets
ನಟಿ ದಿಶಾ ಪಟಾನಿ
author img

By

Published : Apr 21, 2023, 6:05 PM IST

Updated : Apr 21, 2023, 6:14 PM IST

ನಟಿ ದಿಶಾ ಪಟಾನಿ ಹಿಂದಿ ಚಿತ್ರರಂಗದ ಫಿಟ್ಟೆಸ್ಟ್ ಸೆಲೆಬ್ರಿಟಿಗಳಲ್ಲಿ ಒಬ್ಬರು. ಬಾಲಿವುಡ್​ ಬ್ಯೂಟಿ, ಫಿಟ್ನೆಸ್​ ಐಕಾನ್​ ಕುರಿತು ಚರ್ಚೆ ಮಾಡಿದರೆ ಆ ಪೈಕಿ ದಿಶಾ ಪಟಾನಿ ಕೂಡಾ ಇದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರ ಫಿಟ್ನೆಸ್​ ತರಬೇತುದಾರು ಹಂಚಿಕೊಂಡಿರುವ ಫೋಟೋ, ವಿಡಿಯೋ ನಟಿಯ ಕಠಿಣ ಪರಿಶ್ರಮಕ್ಕೆ ಕೈಗನ್ನಡಿ ಹಿಡಿಯುತ್ತದೆ. ಎಂ.ಎಸ್.ಧೋನಿ - ದಿ ಅನ್​ಟೋಲ್ಡ್​ ಸ್ಟೋರಿ ಚಿತ್ರನಟಿ ದಿಶಾ ಪಟಾನಿ ಜಿಮ್​ನಲ್ಲಿ ಬೆವರು ಸುರಿಸಿರುವ ಮೂಲಕ ತಮ್ಮ ಫಿಟ್ನೆಸ್​ ಮತ್ತು ಸೌಂದರ್ಯ ಕಾಪಾಡಿಕೊಂಡಿದ್ದಾರೆ.

ಯುವ ನಟಿ ಶ್ರದ್ಧೆಯಿಂದ ಪ್ರತಿದಿನ ವರ್ಕೌಟ್ ಮಾಡುತ್ತಾರೆ. ಈ ಮೂಲಕ ಮೂಲಕ ಟ್ರಿಮ್ ಫಿಗರ್ ಕಾಪಾಡಿಕೊಂಡಿದ್ದಾರೆ. ಬಾಲಿವುಡ್​ ತಾರೆಯ ಇನ್​ಸ್ಟಾ ಸ್ಟೋರಿ ಅವರ ಕಠಿಣ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ನಟಿಯ ವ್ಯಾಯಾಮದ ವಿಡಿಯೋವನ್ನು ಅವರ ಜಿಮ್ ತರಬೇತುದಾರ ರಾಜೇಂದ್ರ ಧೋಲೆ ಪೋಸ್ಟ್ ಮಾಡಿದ್ದಾರೆ. ಅದನ್ನು ತಮ್ಮ ಇನ್​ಸ್ಟಾ ಸ್ಟೋರಿನಲ್ಲಿ ಮರು ಹಂಚಿಕೊಂಡಿದ್ದಾರೆ. ಈ ಚಿಕ್ಕ ವಿಡಿಯೋದಲ್ಲಿ ದಿಶಾ ಪಟಾನಿ ಹಳದಿ ಬಣ್ಣದ ಶಾರ್ಟ್ಸ್ ಮತ್ತು ಬೂದು ಬಣ್ಣದ ಕ್ರಾಪ್ ಟಾಪ್ ಜಾಕೆಟ್ ಧರಿಸಿದ್ದಾರೆ.

ದಿಶಾ ಪಟಾನಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರು 57.5 ಮಿಲಿಯನ್​ ಫಾಲೋವರ್​ಗಳನ್ನು ಸಂಪಾದಿಸಿರುವ ಇವರು ಈವರೆಗೆ ಒಟ್ಟು 2,042 ಪೋಸ್ಟ್​ಗಳನ್ನು ಶೇರ್ ಮಾಡಿದ್ದಾರೆ. ಅವರ ಇನ್​ಸ್ಟಾ ಪೇಜ್​ ತೆರೆದು ನೋಡಿದರೆ ನಟಿ ಬಾಲಿವುಡ್​ನ ಫಿಟ್ನೆಸ್​ ಐಕಾನ್ ಅನ್ನೋದ್ರಲ್ಲಿ ಯಾವುದೇ ಸಂಶಯ ಮೂಡುವುದಿಲ್ಲ. ಇನ್​ಸ್ಟಾ ಸ್ಟೋರಿನಲ್ಲಿ​ ತಮ್ಮ ವ್ಯಾಯಾಮ ಸೇರಿದಂತೆ ದಿನನಿತ್ಯದ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಜೊತೆಗೆ ತಮ್ಮ ಪ್ರೇಕ್ಷಕರನ್ನು ಸಹ ಅದೇ ರೀತಿ ಮಾಡಲು ಪ್ರೋತ್ಸಾಹಿಸುತ್ತಾರೆ.

ಇನ್ನೂ ನ್ಯಾಶನಲ್​ ಕ್ರಶ್​ ಖ್ಯಾತಿಯ ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಸಹ ಫಿಟ್ನೆಸ್​ಗೆ ಹೆಚ್ಚು ಆದ್ಯತೆ ಕೊಡುತ್ತಾರೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕಿರಿಕ್​ ಪಾರ್ಟಿ ಬೆಡಗಿ ಇತ್ತೀಚೆಗಷ್ಟೇ ತಮ್ಮ ಇನ್​​ಸ್ಟಾಗ್ರಾಮ್​ ಸ್ಟೋರಿನಲ್ಲಿ ತಮ್ಮ ಫಿಟ್ನೆಸ್​​ ತರಬೇತಿಯ ಚಿತ್ರವೊಂದನ್ನು ಹಂಚಿಕೊಂಡಿದ್ದರು. ಕೋಚ್​​ ಕರಣ್ ಸಾವ್ಹ್​ನೇ (Karan Sawhney) ಅವರಿಂದ ಮಾರ್ಗದರ್ಶನ ಪಡಯುವ ಶ್ರೀವಲ್ಲಿ ತಮ್ಮ ಫಿಟ್ನೆಸ್​​ ತರಬೇತಿ ಅವಧಿಯ ಚಿತ್ರಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವ ಮೂಲಕ ಅಭಿಮಾನಿಗಳನ್ನೂ ಪ್ರೋತ್ಸಾಹಿಸುತ್ತಾರೆ. ಅದರಂತೆ ತಮ್ಮ ಮಾರ್ಗದರ್ಶಕರ ಜೊತೆ ನಿಂತ ಚಿತ್ರವೊಂದನ್ನು ಹಂಚಿಕೊಂಡು ಸದ್ದು ಮಾಡಿದ್ದರು.

ಇದನ್ನೂ ಓದಿ: ಅಕ್ಟೋಬರ್​ನಲ್ಲಿ ಪರಿಣಿತಿ ಚೋಪ್ರಾ - ರಾಘವ್ ಚಡ್ಡಾ ಮದುವೆ?!

ಈಗಾಗಲೇ ಬಿಡುಗಡೆ ಆಗಿರುವ ಶಾಕುಂತಲೆ, ಶೂಟಿಂಗ್​ ಹಂತದಲ್ಲಿರುವ ಹಿಂದಿ ಆವೃತ್ತಿಯ ಸಿಟಾಡೆಲ್​​ ನಟಿ ಸಮಂತಾ ರುತ್​ ಪ್ರಭು ಕೂಡ ತಮ್ಮ ಫಿಟ್ನೆಸ್​ಗೆ ಹೆಚ್ಚು ಮಹತ್ವ ಕೊಡುತ್ತಾರೆ. ತಮ್ಮ ವರ್ಕ್​ಔಟ್​ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳನ್ನೂ ಸಹ ಪ್ರೋತ್ಸಾಹಿಸುತ್ತಾರೆ. ಅನಾರೋಗ್ಯದ ವಿರುದ್ಧ ಹೋರಾಡುತ್ತಿರುವ ಸೌತ್​ ಚೆಲುವೆಗೆ ದಿನನಿತ್ಯದ ವ್ಯಾಯಾಮ ಸಹಕಾರಿಯಾಗಿದೆ.

ಇದನ್ನೂ ಓದಿ: ಮತ್ತೆ ಮದುವೆ!: 'ತೆಲುಗು ಇಂಡಸ್ಟ್ರಿಯವರು ಕನ್ನಡದ ಮೇಲೆ ಕಣ್ ಹಾಕ್ತಿದಿರಲ್ವಾ'

ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್​ ಕೆಲ ಸಮಯದ ಹಿಂದೆ ಹೃದಯಾಘಾತಕ್ಕೆ ಒಳಗಾಗಿದ್ದರು. ಸೂಕ್ತ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ನಟಿ ದಿನನಿತ್ಯದ ವ್ಯಾಯಾಮ ನನಗೆ ಸಹಕಾರಿ ಆಗಿದೆ ಎಂಬ ಸಂದೇಶ ಕೊಟ್ಟಿದ್ದಾರೆ. ಇವರೂ ಕೂಡ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ವರ್ಕ್​​ಔಟ್​ ವಿಡಿಯೋ ಫೋಟೋ ಶೇರ್ ಮಾಡುತ್ತಿರುತ್ತಾರೆ. ಇನ್ನೂ ನಟಿ ಶಿಲ್ಪಾ ಶೆಟ್ಟಿ ಬಗ್ಗೆ ವಿಶೇಷವಾಗಿ ಹೇಳಬೇಕೆಂದಿಲ್ಲ. ಯೋಗ, ದಿನನಿತ್ಯದ ವ್ಯಾಯಾಮದಿಂದ 47ರ ಹರೆಯದಲ್ಲೂ ದಂತದ ಗೊಂಬೆಯಂತಿದ್ದಾರೆ.

Last Updated : Apr 21, 2023, 6:14 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.