ಬಾಲಿವುಡ್ ನಟಿಮಣಿಯರು ಅಭಿನಯ ಮಾತ್ರವಲ್ಲದೇ ತಮ್ಮ ಫ್ಯಾಷನ್ ಸೆನ್ಸ್ನಿಂದ ಸಾಕಷ್ಟು ಸದ್ದು ಮಾಡುತ್ತಾರೆ. ಫೋಟೋಶೂಟ್, ಇವರು ತೊಡುವ ಬಟ್ಟೆಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯ ವಿಷಯವಾಗುತ್ತಾರೆ. ಏರ್ಪೋರ್ಟ್ನಲ್ಲಿ ಅವರ ಸೌಂದರ್ಯ ಸೆರೆಹಿಡಿಯಲು ಪಾಪರಾಜಿಗಳು ಕಾದು ಕುಳಿತಿರುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾಲಿವುಡ್ ಬಹುಬೇಡಿಕೆ ತಾರೆ ಆಲಿಯಾ ಭಟ್ ಏರ್ಪೋರ್ಟ್ ಲುಕ್ ಸಖತ್ ಸೌಂಡ್ ಮಾಡುತ್ತಿದೆ.
- " class="align-text-top noRightClick twitterSection" data="
">
'ಹಾರ್ಟ್ ಆಫ್ ಸ್ಟೋನ್' ಮೂಲಕ ಅಂತಾರಾಷ್ಟ್ರೀಯ ಸಿನಿ ಉದ್ಯಮಕ್ಕೆ ಪದಾರ್ಪಣೆ ಮಾಡಲು ಸಿದ್ಧವಾಗಿರುವ ಆಲಿಯಾ ಭಟ್ ಇತ್ತೀಚೆಗೆ ದುಬೈನಲ್ಲಿ ಸಮಯ ಕಳೆದು, ಬಳಿಕ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಮಂಗಳವಾರ ರಾತ್ರಿ, ಆಲಿಯಾ ಭಟ್ ಮೇಕಪ್ ಇಲ್ಲದೇ ಡೆನಿಮ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಸರಳವಾಗಿ ಕಾಣುತ್ತಿದ್ದರೂ ಕೂಡ ಅವರ ಲಕ್ಷಗಟ್ಟಲೆ ಬೆಲೆಬಾಳುವ ಉಡುಪಿನ ಮೂಲಕ ಸರಳ ಸೌಂದರ್ಯದ ತೂಕ ಹೆಚ್ಚಿಸಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪಾಪರಾಜಿ ಖಾತೆಯಿಂದ ವಿಡಿಯೋವೊಂದು ಹೊರಬಿದ್ದಿದೆ. ಆಲಿಯಾ ಡೆನಿಮ್ ಆ್ಯಂಡ್ ಡೆನಿಮ್ ಲುಕ್‌ನಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ನಟಿ ಡೆನಿಮ್ ಜೀನ್ಸ್, ಡೆನಿಮ್ ಜಾಕೆಟ್, ವೈಟ್ ಟಾಪ್ ಧರಿಸಿದ್ದರು. ಅವರು ತೊಟ್ಟ ಈ ಸ್ಟೈಲಿಶ್ ಉಡುಗೆ ಬೆಲೆ ಕೇಳಿದ್ರೆ ನಿಮಗೆ ಶಾಕ್ ಆಗೋದ್ರಲ್ಲಿ ಸಂದೇಹವೇ ಇಲ್ಲ.
ಡೆನಿಮ್ ಬೆಲೆ 1,71,916 ರೂ. ಅವರು ಹಿಡಿದಿದ್ದ ಬ್ರ್ಯಾಂಡೆಡ್ ಬ್ಯಾಗ್ ಬೆಲೆ 1,67,994 ರೂ. ಶೂ ಬೆಲೆ 75,423 ರೂ. ವಿಮಾನ ನಿಲ್ದಾಣದ ಸಂಪೂರ್ಣ ನೋಟಕ್ಕೆ 4,15,333 ರೂ. ಖರ್ಚು ಮಾಡಿದ್ದಾರೆ. ಆಲಿಯಾ ಭಟ್ ಯಾವುದೇ ಮೇಕಪ್ ಇಲ್ಲದೇ, ತಮ್ಮ ನೈಸರ್ಗಿಕ ಸೌಂದರ್ಯ ಪ್ರದರ್ಶಿಸಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಡುವ ಮೊದಲು ಪಾಪರಾಜಿಗಳಿಗೆ ಪೋಸ್ ನೀಡಿದ್ದಾರೆ. ನಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು, ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಏರ್ಪೋರ್ಟ್ಗೆ ಬರಲು ಇಷ್ಟೊಂದು ಖರ್ಚು ಮಾಡಿದ್ರಾ ನಟಿ ಎಂದು ಹುಬ್ಬೇರಿಸಿದ್ದಾರೆ.
ಇದನ್ನೂ ಓದಿ: ಜೂ.ಎನ್ಟಿಆರ್ ಜೊತೆ ಕೆಲಸ ಮಾಡಲಿಚ್ಛಿಸಿದ ಹಾಲಿವುಡ್ ನಿರ್ದೇಶಕ
ನಟಿ ಆಲಿಯಾ ಭಟ್ ಈ ವರ್ಷ ಮೆಟ್ ಗಾಲಾದಲ್ಲಿ ಭಾಗವಹಿಸಲಿದ್ದಾರೆ. ಇದು ಅವರ ಮೊದಲ ಹೆಜ್ಜೆ. ರೆಡ್ ಕಾರ್ಪೆಟ್ ಮೇಲೆ ತಮ್ಮ ಮೆಚ್ಚಿನ ನಟಿಯ ಹೆಜ್ಜೆ ಗುರುತಿಸಲು ಅಭಿಮಾನಿಗಳು ಕಾತರರಾಗಿದ್ದಾರೆ. ಈ ವರ್ಷ ಹಾಲಿವುಡ್ ನಟರ ಜೊತೆ, ಆಲಿಯಾ ಹಾರ್ಟ್ ಆಫ್ ಸ್ಟೋನ್ ಮೂಲಕ ಹಾಲಿವುಡ್‌ಗೆ ಪದಾರ್ಪಣೆ ಮಾಡಲಿದ್ದಾರೆ.
ಇದನ್ನೂ ಓದಿ: 'ಮನ್ ಕಿ ಬಾತ್' ಭಾರತೀಯರ ಮೇಲೆ ದೊಡ್ಡ ಪ್ರಭಾವ ಬೀರಿದೆ: ನಟ ಅಮೀರ್ ಖಾನ್
ಇನ್ನೂ ಆಲಿಯಾ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿಯಲ್ಲಿ ನಟ ರಣ್ವೀರ್ ಸಿಂಗ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ಜೊತೆಗೆ ಧರ್ಮೇಂದ್ರ, ಜಯಾ ಬಚ್ಚನ್ ಮತ್ತು ಶಬಾನಾ ಅಜ್ಮಿ ಸಹ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಾಕಿ ರಾಣಿಯ ಪ್ರೇಮ ಕಥೆಯ ಈ ಸಿನಿಮಾ ಜುಲೈ 28ರಂದು ಬಿಡುಗಡೆಯಾಗಲಿದೆ.