ಕೆಜಿಎಫ್ ಸಿನಿಮಾಗಳ ಬಳಿಕ ರಾಕಿಂಗ್ ಸ್ಟಾರ್ ಯಶ್ ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಿದೆ. ಅವರ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಬಹು ದಿನಗಳಿಂದ ಇದೆ. ಹೀಗಿರುವಾಗ ನಟ ಯಶ್ ಅವರು ಅಮೆರಿಕದಲ್ಲಿ ರೇಸಿಂಗ್ ಲೆಜೆಂಡ್ ಲೇವಿಸ್ ಹ್ಯಾಮಿಲ್ಟನ್ ಜೊತೆ ಕಾಣಿಸಿಕೊಂಡಿದ್ದಾರೆ. ಇವರು ಒಟ್ಟಾಗಿ ನಿಂತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಯಶ್ ಮುಂದಿನ ಚಿತ್ರ ರೇಸಿಂಗ್ ಕುರಿತಾಗಿ ಇರಬಹುದು ಎಂದು ಊಹಿಸುತ್ತಿದ್ದಾರೆ.
- " class="align-text-top noRightClick twitterSection" data="
">
ಯಶ್ ಅವರು ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಸಮಯ ಕಳೆಯುತ್ತಿದ್ದಾರೆ. ಹಾಲಿವುಡ್ ನಿರ್ದೇಶಕ ಜೆಜೆ ಪೆರ್ರಿ ಜೊತೆ ಅವರು ಇತ್ತೀಚೆಗೆ ಕಾಣಿಸಿಕೊಂಡಿದ್ದರು. ಅವರ ಜೊತೆ ಗನ್ ಶೂಟಿಂಗ್ ತರಬೇತಿ ಪಡೆಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಯಶ್ ಅವರು ಎಫ್1 ರೇಸರ್ ಜೊತೆ ಕಾಣಿಸಿಕೊಂಡಿದ್ದಾರೆ. ಈ ಹಿನ್ನೆಲೆ ಯಶ್ ಹಾಲಿವುಡ್ ಸಿನಿಮಾ ಮಾಡಬಹುದು ಎಂದು ಕೂಡ ಕೆಲವರು ಊಹಿಸುತ್ತಿದ್ದಾರೆ.
ಇದನ್ನೂ ಓದಿ: ಜವಾನ್ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾದ ಎಸ್ಆರ್ಕೆಗೆ ಸೇತುಪತಿ-ದಳಪತಿ ಸಾಥ್
ಸಂಪೂರ್ಣ ತಯಾರಿಯೊಂದಿಗೆ ಮುಂದಿನ ಪ್ರಾಜೆಕ್ಟ್ ಘೋಷಣೆ ಮಾಡುವ ಬಗ್ಗೆ ಯಶ್ ಈ ಮೊದಲೇ ಹೇಳಿದ್ದರು. ಅವರ 19ನೇ ಚಿತ್ರದ ಬಗ್ಗೆ ಈಗಾಗಲೇ ಹಲವು ವದಂತಿಗಳು ಹುಟ್ಟಿಕೊಂಡಿವೆ. ಆದರೆ, ಯಾವ ವಿಚಾರದ ಬಗ್ಗೆಯೂ ಅಧಿಕೃತವಾಗಿ ಘೋಷಣೆ ಆಗಿಲ್ಲ.