ETV Bharat / entertainment

'ಉತ್ತರದವರು ನಮ್ಮ ಸಿನಿಮಾವನ್ನು ಗೇಲಿ ಮಾಡುತ್ತಿದ್ದರು, ಈಗ ಕಾಲ ಬದಲಾಗಿದೆ': ಯಶ್

ಸಂದರ್ಶನವೊಂದರಲ್ಲಿ ದಕ್ಷಿಣ ಮತ್ತು ಉತ್ತರದ ಸಿನಿಮಾಗಳ ಬಗ್ಗೆ ನಟ ಯಶ್ ಮಾತನಾಡಿದ್ದಾರೆ.

Actor Yash
ರಾಕಿಂಗ್ ಸ್ಟಾರ್ ಯಶ್
author img

By

Published : Nov 6, 2022, 5:07 PM IST

ಸ್ಯಾಂಡಲ್​ವುಡ್​ ಸೇರಿದಂತೆ ದಕ್ಷಿಣ ಚಿತ್ರರಂಗ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸುತ್ತಿದೆ. ಇಡೀ ಭಾರತೀಯ ಚಿತ್ರರಂಗ ಸೌತ್​ ಸಿನಿಮಾ ಕಡೆ ಮುಖ ಮಾಡಿದೆ. ಕಾಂತಾರ ಅಬ್ಬರ ಮುಂದುವರಿದಿದ್ದು, ಬಾಲಿವುಡ್​ ಕಣ್ಣುಗಳೂ ಸಹ ಸ್ಯಾಂಡಲ್​ವುಡ್ ಮೇಲೆ ಬಿದ್ದಿದೆ. ಇದೀಗ ಕೆಜಿಎಫ್ ಮೂಲಕ ಕೀರ್ತಿ ಹೆಚ್ಚಿಸಿಕೊಂಡ ರಾಕಿಂಗ್ ಸ್ಟಾರ್ ಯಶ್ ಸೌತ್​ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚೆಗಷ್ಟೇ ಮುಂಬೈನಲ್ಲಿ ದಕ್ಷಿಣ ಮತ್ತು ಉತ್ತರದ ಸಿನಿಮಾಗಳ ಬಗ್ಗೆ ನಟ ಯಶ್ ಮಾತನಾಡಿದ್ದಾರೆ. "ಕಳೆದ 10 ವರ್ಷಗಳಲ್ಲಿ ನಮ್ಮ ಡಬ್ಬಿಂಗ್ ಚಿತ್ರಗಳು ಉತ್ತರ ಭಾರತದಲ್ಲಿ ಬಹಳ ಪ್ರಾಮುಖ್ಯತೆ ಪಡೆದುಕೊಂಡವು. ಆದರೆ ಅವುಗಳನ್ನು ಉತ್ತರ ಭಾರತದ ಜನ ವಿಭಿನ್ನ ದೃಷ್ಟಿಕೋನದಿಂದ ನೋಡಿದ್ದಾರೆ. ಸೌತ್‌ ಸಿನಿಮಾಗಳೆಂದರೆ ಅವರು ಗೇಲಿ ಮಾಡುತ್ತಿದ್ದುದೇ ಹೆಚ್ಚು. ಆರಂಭದಲ್ಲಿ ನಮ್ಮ ಚಿತ್ರಗಳು ಇಲ್ಲಿ ಕಡಿಮೆ ಬೆಲೆಗೆ ಮಾರಾಟವಾಗಿವೆ. ಮೊದಲೆಲ್ಲಾ ಅತ್ಯಂತ ಕೆಟ್ಟದಾಗಿ ಡಬ್ ಮಾಡಿ‌ ಯೂಟ್ಯೂಬ್‌ಗಳಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ಇದೀಗ ಕಾಲ ಬದಲಾಗಿದೆ. ಸೌತ್‌ ಸಿನಿಮಾಗಳನ್ನು ಜನ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ರಾಜಮೌಳಿಯವರ 'ಬಾಹುಬಲಿ' ಮೂಲಕ ಸೌತ್​ ಸಿನಿಮಾ ಇಂಡಸ್ಟ್ರಿ ಜನಪ್ರಿಯತೆ ಗಳಿಸಿದೆ. ಇದೀಗ ನಮ್ಮ ಕಾಂತಾರ ಎಲ್ಲೆಡೆ ಅಬ್ಬರಿಸುತ್ತಿದೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕೆಜಿಎಫ್-3 ಕುರಿತು ಪ್ರತಿಕ್ರಿಯಿಸಿ, ಆ ಪ್ರಾಜೆಕ್ಟ್ ಈಗ ಆಗುವುದಿಲ್ಲ, ಪೂರ್ಣಗೊಳ್ಳಲು ಸಾಕಷ್ಟು ಸಮಯ ಹಿಡಿಯುತ್ತದೆ. ಸದ್ಯ ಬೇರೆ ಬೇರೆ ಪ್ರಾಜೆಕ್ಟ್​ಗಳತ್ತ ಗಮನ ಹರಿಸಿದ್ದು, ಸದ್ಯದಲ್ಲೇ ಹೊಸ ಸಿನಿಮಾದ ವಿವರಗಳನ್ನು ಪ್ರಕಟಿಸುವುದಾಗಿ ತಿಳಿಸಿದರು.

ಇದನ್ನೂ ಓದಿ: ಹೆಣ್ಣು ಮಗುವಿಗೆ ಜನ್ಮ ನೀಡಿದ ಆಲಿಯಾ ಭಟ್: ರಾಲಿಯಾ ಕುಟುಂಬದಲ್ಲಿ ಸಂತಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.