ಇತ್ತೀಚೆಗಷ್ಟೇ 'ಮಾರ್ಕ್ ಆಂಟೋನಿ' ಚಿತ್ರದ ಮೂಲಕ ಹಿಟ್ ಪಡೆದಿರುವ ಕಾಲಿವುಡ್ ನಟ ವಿಶಾಲ್ ಸದ್ಯ ತಮ್ಮ ಮುಂಬರುವ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ 'ಸಿಂಗಂ' ಖ್ಯಾತಿಯ ಹರಿ ನಿರ್ದೇಶನದ 'ರತ್ನಂ' ಚಿತ್ರಕ್ಕೆ ಸಹಿ ಹಾಕಿದ್ದಾರೆ. ಸದ್ಯ ಈ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಆದರೆ ಇತ್ತೀಚೆಗಷ್ಟೇ ನ್ಯೂಯಾರ್ಕ್ ಬೀದಿಯಲ್ಲಿ ವಿಶಾಲ್ ಅವರು ಯುವತಿಯೊಂದಿಗೆ ಕಾಣಿಸಿಕೊಂಡಿದ್ದು, ವಿಡಿಯೋ ವೈರಲ್ ಆಗಿದೆ.
-
Is that Actor @VishalKOfficial walking with someone in NYC 🤔 pic.twitter.com/ddMESEuKOq
— Ramesh Bala (@rameshlaus) December 26, 2023 " class="align-text-top noRightClick twitterSection" data="
">Is that Actor @VishalKOfficial walking with someone in NYC 🤔 pic.twitter.com/ddMESEuKOq
— Ramesh Bala (@rameshlaus) December 26, 2023Is that Actor @VishalKOfficial walking with someone in NYC 🤔 pic.twitter.com/ddMESEuKOq
— Ramesh Bala (@rameshlaus) December 26, 2023
ವಿಶಾಲ್ ಅವರು ಹುಡುಗಿಯ ಜೊತೆ ಕೈ ಹಿಡಿದುಕೊಂಡು ಮಾತಾಡುತ್ತಾ ಹೋಗುತ್ತಿರುವುದನ್ನು ಯಾರೋ ವಿಡಿಯೋ ಮಾಡಿದ್ದಾರೆ. ಇದನ್ನು ಕಂಡ ವಿಶಾಲ್ ಧರಿಸಿರುವ ಸ್ವೆಟರ್ನ ಟೋಪಿಯನ್ನು ತಲೆಗೆ ಮುಚ್ಚಿಕೊಂಡು ಹುಡುಗಿಯ ಕೈ ಹಿಡಿದು ಓಡಿ ಹೋಗುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನು ಕಂಡ ಅಭಿಮಾನಿಗಳು ಶಾಕ್ ಆಗಿದ್ದಾರೆ. ಕೆಲವರು ಇದು ಸಿನಿಮಾ ಪ್ರಚಾರದ ಗಿಮಿಕ್ ಎಂದು ತಳ್ಳಿ ಹಾಕಿದ್ದಾರೆ. ಆದರೆ, ಕ್ಯಾಮರಾ ಕಂಡು ನಟ ಯಾಕೆ ಓಡಿ ಹೋದ್ರು? ಎಂಬುದು ನೆಟ್ಟಿಗರ ಪ್ರಶ್ನೆ.
ಮದುವೆ ವದಂತಿಗೆ ಸ್ಪಷ್ಟನೆ: ಮತ್ತೊಂದೆಡೆ, ಇತ್ತೀಚೆಗೆ ಅವರು ಸ್ಟಾರ್ ನಟಿ ಲಕ್ಷ್ಮಿ ಮೆನನ್ ಜೊತೆಗಿನ ಮದುವೆ ಕುರಿತಾದ ವದಂತಿಗೆ ಪ್ರತಿಕ್ರಿಯಿಸಿದ್ದರು. "ಸಾಮಾನ್ಯವಾಗಿ ನಾನು ನನ್ನ ಬಗ್ಗೆ ಸುಳ್ಳು ಸುದ್ದಿ ಅಥವಾ ಇನ್ನಿತರ ವದಂತಿಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಏಕೆಂದರೆ ಇದು ಅನಗತ್ಯ ಎಂದು ನಾನು ಭಾವಿಸುತ್ತೇನೆ. ಆದರೆ ಇದೀಗ ಲಕ್ಷ್ಮಿ ಮೆನನ್ ಜೊತೆಗೆ ನನ್ನ ಮದುವೆಯ ಬಗ್ಗೆ ವದಂತಿಗಳಿವೆ. ಈ ವಿಚಾರವನ್ನು ಸಲೀಸಾಗಿ ಅಲ್ಲಗಳೆಯುತ್ತೇನೆ ಮತ್ತು ಇದು ಸತ್ಯಕ್ಕೂ ದೂರವಾದ ಸುದ್ದಿ" ಎಂದು ಹೇಳಿದ್ದರು.
-
Sorry guys, I guess it's time to reveal the truth about the recent video. Well well well, it's half true in terms of location, yes I am in New York which is my regular retreat place with my cousins, which is a ritual of destressing myself every year after a super chaotic rest of…
— Vishal (@VishalKOfficial) December 27, 2023 " class="align-text-top noRightClick twitterSection" data="
">Sorry guys, I guess it's time to reveal the truth about the recent video. Well well well, it's half true in terms of location, yes I am in New York which is my regular retreat place with my cousins, which is a ritual of destressing myself every year after a super chaotic rest of…
— Vishal (@VishalKOfficial) December 27, 2023Sorry guys, I guess it's time to reveal the truth about the recent video. Well well well, it's half true in terms of location, yes I am in New York which is my regular retreat place with my cousins, which is a ritual of destressing myself every year after a super chaotic rest of…
— Vishal (@VishalKOfficial) December 27, 2023
ಅಲ್ಲದೇ, ಲಕ್ಷ್ಮಿ ಮೆನನ್ ಜೊತೆಗಿನ ಮದುವೆ ವದಂತಿ ಬಗ್ಗೆ ಮೌನ ಮುರಿದ ಕಾರಣವನ್ನು ನಟ ಬಹಿರಂಗಪಡಿಸಿದ್ದರು. ಹುಡುಗಿಯಾಗಿ ಅವರ ಮೇಲೆ ಕೆಟ್ಟ ಇಮೇಜ್ ಸೃಷ್ಟಿಯಾಗುವುದು ಇಷ್ಟವಿಲ್ಲ ಎಂಬ ಕಾರಣಕ್ಕೆ ಈ ವಿಚಾರವಾಗಿ ಮಾತನಾಡುತ್ತಿರುವುದಾಗಿ ಅವರು ತಿಳಿಸಿದ್ದರು. "ಅವರೊಬ್ಬ ನಟಿ ಎನ್ನುವುದಕ್ಕಿಂತ ಹೆಚ್ಚಾಗಿ ಹುಡುಗಿ ಎಂಬ ಕಾರಣಕ್ಕೆ ಪ್ರತಿಕ್ರಿಯಿಸುತ್ತಿದ್ದೇನೆ. ಒಬ್ಬಳು ಹುಡುಗಿಯ ವೈಯಕ್ತಿಕ ಜೀವನದ ಬಗ್ಗೆ ಹೀಗೆಲ್ಲಾ ವದಂತಿ ಸೃಷ್ಟಿಸುತ್ತಾ ಅವರ ಖಾಸಗಿತನವನ್ನು ಆಕ್ರಮಿಸಿಕೊಳ್ಳುತ್ತಿದ್ದೀರಿ. ಇದು ನಟಿಯ ಇಮೇಜ್ ಅನ್ನು ಹಾಳು ಮಾಡುತ್ತಿದೆ" ಎಂದು ಕಳವಳ ವ್ಯಕ್ತಪಡಿಸಿದ್ದರು.
ಜೊತೆಗೆ, 45 ವರ್ಷದ ನಟ ಸಮಯ ಬಂದಾಗ ಮದುವೆ ವಿಚಾರ ತಿಳಿಸುವುದಾಗಿ ಹೇಳಿದ್ದರು. ಈಗಾಗಲೇ ಎಲ್ಲವನ್ನು ನಿರ್ಧರಿಸಲು ಇದು ಬರ್ಮುಡಾ ಟ್ರಯಾಂಗಲ್ ಅಲ್ಲ ಎಂದಿದ್ದರು. "ವರ್ಷ, ದಿನಾಂಕ, ಸಮಯ ಮತ್ತು ಭವಿಷ್ಯದಲ್ಲಿ ನಾನು ಯಾರನ್ನು ಮದುವೆಯಾಗಲಿದ್ದೇನೆ ಎಂದು ನಿರ್ಧರಿಸಲು ಇದು ಬರ್ಮುಡಾ ಟ್ರಯಾಂಗಲ್ ಅಲ್ಲ. ಸಮಯ ಬಂದಾಗ ಅಧಿಕೃತವಾಗಿ ನನ್ನ ಮದುವೆ ವಿಚಾರವನ್ನು ಪ್ರಕಟಿಸುತ್ತೇನೆ. ದೇವರು ಆಶೀರ್ವದಿಸಲಿ" ಎಂದು ಹೇಳಿದ್ದರು. ಈ ಮೂಲಕ ಲಕ್ಷ್ಮಿ ಮೆನನ್ ಜೊತೆಗಿನ ಮದುವೆ ವದಂತಿಗೆ ವಿಶಾಲ್ ತೆರೆ ಎಳೆದಿದ್ದರು.
ಇದನ್ನೂ ಓದಿ: ಸಿಬಿಎಫ್ಸಿ ವಿರುದ್ಧ ನಟ ವಿಶಾಲ್ ಭ್ರಷ್ಟಾಚಾರ ಆರೋಪ; ಸಿಬಿಐ ತನಿಖೆ
ವಿಶಾಲ್ ಎಕ್ಸ್ ಪೋಸ್ಟ್: ವಿಡಿಯೋ ವೈರಲ್ ಆದ ಬೆನ್ನಲ್ಲೇ ನಟ ವಿಶಾಲ್ ಎಕ್ಸ್ ಪೋಸ್ಟ್ ಶೇರ್ ಮಾಡಿ ಸ್ಪಷ್ಟನೆ ನೀಡಿದ್ದಾರೆ. ''ಕ್ಷಮಿಸಿ, ಇತ್ತೀಚಿನ ವಿಡಿಯೋ ಬಗ್ಗೆ ಸತ್ಯ ಬಹಿರಂಗಪಡಿಸುವ ಸಮಯ ಬಂದಿದೆ. ಸರಿ, ಇದು ಸ್ಥಳದ ವಿಚಾರವಾಗಿ ಅರ್ಧದಷ್ಟು ನಿಜ. ಹೌದು, ನಾನು ನ್ಯೂಯಾರ್ಕ್‌ನಲ್ಲಿದ್ದೇನೆ. ನನ್ನ ಸೋದರಸಂಬಂಧಿಗಳೊಂದಿಗೆ ಸಮಯ ಕಳೆಯುವ ಸ್ಥಳವಾಗಿದೆ. ನನ್ನನ್ನು ರಿಫ್ರೆಶ್ ಮಾಡಿಕೊಳ್ಳುವ ಒಂದು ವಿಧಾನ.
ಉಳಿದರ್ಧ ಸತ್ಯವೇನೆಂದರೆ, ವಾಸ್ತವವಾಗಿ ನಮ್ಮ ಸೋದರಸಂಬಂಧಿಗಳೆಲ್ಲರೂ ಸೇರಿ ಕ್ರಿಸ್ಮಸ್ ದಿನದಂದು ಮಾಡಿದ ತಮಾಷೆ. ನನ್ನ ಕಸಿನ್ಸ್ ಸೇರಿ ಈ ವಿಡಿಯೋವನ್ನು ನಿರ್ದೇಶಿಸಿದ್ದಾರೆ ಮತ್ತು ಕಾರ್ಯಗತಗೊಳಿಸಿದ್ದಾರೆ. ಇಂತಹ ತಮಾಷೆ ಒಂದು ಒಳ್ಳೆಯ ಭಾವನೆ ಮತ್ತು ಹಾಗಾಗಿ ಅದನ್ನು ಮಾಡಲು ನಿರ್ಧರಿಸಿದೆ. ನಿಮ್ಮೆಲ್ಲಾ ಊಹಾಪೋಹಗಳಿಗೆ ಫುಲ್ಸ್ಟಾಪ್ ಇಡುತ್ತಿದ್ದೇನೆ. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ ಎಂದು ನಟ ವಿಶಾಲ್ ಬರೆದುಕೊಂಡಿದ್ದಾರೆ.